ಹುಬ್ಬಳ್ಳಿ –
ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೊಸದೊಂದು ದಾಖಲೆ ಬರೆದ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆ – ಪಾಲಿಕೆಯ 62 ವರ್ಷಗಳ ಇತಿಹಾಸದಲ್ಲಿ 100 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿ ಹೊಸದೊಂದು ದಾಖಲೆ ಬರೆದ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ನೇತ್ರತ್ವದಲ್ಲಿನ ಟೀಮ್ ಹೌದು
62 ವರ್ಷಗಳ ಪಾಲಿಕೆಯ ಇತಿಹಾಸದಲ್ಲಿಯೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹೊಸದೊಂದು ದಾಖಲೆಯನ್ನು ಬರೆದಿದೆ.ಹೌದು ಇದೇ ಮೊದಲ ಬಾರಿಗೆ ₹100 ಕೋಟಿ ರೂಪಾ ಯಿಯಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ದಾಖಲೆ ಬರೆದಿದೆ.
ಹೌದು 2023-24ನೇ ಸಾಲಿನಲ್ಲಿ ಇದೇ ಮೊದಲ ಬಾರಿಗೆ ₹100.81 ಕೋಟಿ ಆಸ್ತಿ ತೆರಿಗೆ ಸಂಗ್ರಹಿ ಸಿದ್ದು ಪಾಲಿಕೆಯ 62 ವರ್ಷಗಳ ಇತಿಹಾಸದಲ್ಲಿ ಇದು ದಾಖಲೆಯಾಗಿದೆ.2023-24ನೇ ಸಾಲಿನಲ್ಲಿ ₹135 ಕೋಟಿ ಪಾಲಿಕೆ ಆಸ್ತಿ ತೆರಿಗೆಯ ಸಂಗ್ರಹದ ಗುರಿ ಇತ್ತು.ಇದರಲ್ಲಿ ₹100.81 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.
ಒಟ್ಟು ಶೇ 74.37ರಷ್ಟು ಆಸ್ತಿ ತೆರಿಗೆ ಸಂಗ್ರಹವಾ ಗಿದ್ದು ಉಳಿದ ₹34 ಕೋಟಿ ಆಸ್ತಿ ತೆರಿಗೆಯನ್ನು ಜನವರಿ 30ರೊಳಗೆ ವಸೂಲಿ ಮಾಡಲಾಗು ವುದು ಎಂದು ಮಹಾನಗರ ಪಾಲಿಕೆಯ ಆಯು ಕ್ತರಾದ ಡಾ ಈಶ್ವರ ಉಳ್ಳಾಗಡ್ಡಿಯವರು ತಿಳಿಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ನಾವು ಅದರಲ್ಲೂ ನಾನು ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡ ಅಲ್ಪ ಸಮಯ ದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆಯನ್ನು ವಸೂಲು ಮಾಡಲಾಗಿದ್ದು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಕ್ಕೆ ವಿಶೇಷ ವಾದ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದರು.
ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ತೆರಿಗೆಗೆ ಒಳಪಡುವ 1,80,450 ವಸತಿ, 33,732 ವಾಣಿಜ್ಯ ಮಳಿಗೆ, 1,10,926 ಖಾಲಿ ನಿವೇಶನ ಸೇರಿದಂತೆ ಒಟ್ಟು 3,25,108 ಆಸ್ತಿಗಳಿವೆ. ಇದ ರೊಂದಿಗೆ ಪಾಲಿಕೆಗೆ ಸಂಬಂಧಿಸಿದ 1,513 ವಾಣಿಜ್ಯ ಬಾಡಿಗೆ ಮಳಿಗೆಗಳಿದ್ದು ಇವುಗಳು ಪಾಲಿಕೆಯ ತೆರಿಗೆ ಆದಾಯದ ಮೂಲಗಳಾ ಗಿವೆ.
ಇವುಗಳಿಂದ 2023-24ನೇ ಸಾಲಿನಲ್ಲಿ ₹3.86 ಕೋಟಿ ತೆರಿಗೆ ಸಂಗ್ರಹ ಗುರಿ ಇತ್ತು.ಇದರಲ್ಲಿ ₹2.86ಕೋಟಿ ತೆರಿಗೆಯನ್ನು ಈಗಾಗಲೇ ಸಂಗ್ರ ಹಿಸಲಾಗಿದೆ.ಉಳಿದ ಎಲ್ಲಾ ತೆರಿಗೆಯನ್ನು ಜನವರಿ 30ರೊಳಗೆ ವಸೂಲಿ ಮಾಡಲಾಗು ವುದು ಎಂದು ತಿಳಿಸಿದರು.
ಇನ್ನೂ ಪ್ರಮುಖವಾಗಿ ಪರವಾನಗಿ ಉಲ್ಲಂಘನೆ, ದಂಡ ವಸೂಲಿ ಸೇರಿದಂತೆ ಆಸ್ತಿ ತೆರಿಗೆಯನ್ನು ಇನ್ನೂ ಹೆಚ್ಚು ಸಂಗ್ರಹಿಸುವ ಗುರಿ ಇದೆ.ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೆಲ ಬಡಾವಣೆಗ ಳಿದ್ದು ಕೆಲವರು ಪರವಾನಗಿ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದಾರೆ. ಇನ್ನೂ ಕೆಲವರು ತೆರಿಗೆ ತುಂಬದೇ ಬಹುಮಹಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ.
ಅವುಗಳನ್ನು ಪತ್ತೆ ಮಾಡಿ, ತೆರಿಗೆಯೊಂದಿಗೆ ಹೆಚ್ಚುವರಿ ದಂಡ ವಸೂಲಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.ಇದರೊಂದಿಗೆ ಇದೇ ಮೊದಲ ಬಾರಿಗೆ ಅದರಲ್ಲೂ ಪಾಲಿಕೆಗೆ ಆಯುಕ್ತರಾಗಿ ಅಧಿಕಾರ ವನ್ನು ವಹಿಸಿಕೊಂಡ ನಂತರ ಆಯುಕ್ತರು ಪಾಲಿಕೆ ಯ ಅಧಿಕಾರಿಗಳೊಂದಿಗೆ ಈ ಒಂದು ದೊಡ್ಡ ಸಾಧನೆಯನ್ನು ಮಾಡಿ ಹೊಸದೊಂದು ಇತಿಹಾ ಸವನ್ನು ಬರೆದಿದ್ದು
ವಿಶೇಷವಾಗಿದ್ದು ಬರುವ ದಿನಗಳಲ್ಲಿ ಇನ್ನೂ ಕೂಡಾ ಹೆಚ್ಚು ಹೆಚ್ಚು ಬೇರೆ ಬೇರೆ ತೆರಿಗೆ ವಸೂ ಲಾತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳನ್ನು ಮಾಡುತ್ತಿದ್ದಾರೆ.ಒಟ್ಟಾರೆ ಏನೇ ಆಗಲಿ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ದಾಖಲೆ ಬರೆದಿದ್ದು ಪಾಲಿಕೆಯ ಆಯುಕ್ತರೊಂದಿಗೆ ಪಾಲಿಕೆಯ ಜನಪ್ರತನಿಧಿಗಳು ಕೈ ಜೋಡಿಸಿದರೆ ಇನ್ನಷ್ಟು ಅನುಕೂಲಕರವಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……