ನವದೆಹಲಿ –
ಬಿಜೆಪಿಯ 400ರ ಟಾರ್ಗೆಟ್ ನಲ್ಲಿ 100 ಹಾಲಿ ಸಂಸದರಿಗೆ ಟಿಕೆಟ್ ಮಿಸ್ – ಹೊಸ ಪ್ರಯೋಗ ದಲ್ಲಿ BJP ಹೈ ಕಮಾಂಡ್ ಟಿಕೆಟ್ ವಂಚಿತರ ಅಸಮಾಧಾನ ಹೌದು
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 400 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿ, ಈ ಬೃಹತ್ ಗುರಿ ದಾಟಲು ಸಾಕಷ್ಟು ರಣತಂತ್ರ ರೂಪಿಸಿದ್ದು ಇದರ ನಡುವೆಯೇ 100 ಹಾಲಿ ಸಂಸರಿಗೆ ಟಿಕೆಟ್ ನಿರಾಕರಣೆ ಕೂಡಾ ಈ ಒಂದು ಬಾರಿ ಮಾಡಲಾಗಿದೆ ಗಮನಾರ್ಹ ಸಂಗತಿಯಾ ಗಿದೆ.
ಅಂದರೆ ಹಾಲಿ ಸಂಸದರ ಪೈಕಿ ಶೇ.24ರಷ್ಟು ಜನರಿಗೆ ಟಿಕೆಟ್ ನಿರಾಕರಣೆ ಮಾಡಿದಂತಾಗಿದೆ.
ಈಗಾಗಲೇ ಸುಮಾರು 402 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು ಇದರಲ್ಲಿ 100 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ಮೈತ್ರಿಕೂಟಗಳಿಗೆ ಇನ್ನೊಂದಿಷ್ಟು ಸೀಟು ಬಿಟ್ಟು ಕೊಟ್ಟ ಹೊರತಾಗಿಯೂ ಒಂದಷ್ಟು ಸ್ಥಾನಗಳಲ್ಲಿ ಬಿಜೆಪಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಹಾಗಾದಲ್ಲಿ ಇನ್ನೊಂದಿಷ್ಟು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆಯಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.ಆಡಳಿತ ವಿರೋಧಿ ಅಲೆ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಲವು ಹಾಲಿ ಸಂಸದರು ಸ್ಥಳೀಯವಾಗಿ ವಿರೋಧ ಎದುರಿಸು ತ್ತಿರುವ ಕಾರಣದಿಂದ ಕೆಲ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಇದರ ಹೊರತಾಗಿ ಹಲವು ಬಾರಿ ಸಂಸದರಾಗಿ ಆಯ್ಕೆಯಾದವರು, ಹಲವು ಬಾರಿ ಆಯ್ಕೆಯಾ ದರೂ ಯಾವುದೇ ಸಾಧನೆ ಮಾಡದವರು, ಚುನಾವಣೆಗೆ ಮುನ್ನ ಮತ್ತು ಚುನಾವಣೆ ವೇಳೆ ವಿವಾದಿತ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದವರು ಕೂಡಾ ಈ ಬಾರಿ ಟಿಕೆಟ್ ಕಳೆದುಕೊಂಡಿದ್ದಾರೆ.
ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಸಹಜವಾಗಿಯೇ ಅವರ ವಿರುದ್ಧ ವಿಪಕ್ಷಗಳಿಗೆ ಯಾವುದೇ ಟೀಕಾ ಪ್ರಹಾರದ ಅವಕಾಶ ನಿರಾಕರಿಸುತ್ತದೆ, ಮತದಾರರಲ್ಲೂ ಹೊಸ ಭರವಸೆ ಮೂಡಿಸಲು ಕಾರಣವಾಗುತ್ತದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. 2019ರ ಲೋಸಕಭಾ ಚುನಾವಣೆಯಲ್ಲಿ ಬಿಜೆಪಿ ಇದೇ ರಣತಂತ್ರ ರೂಪಿಸಿತ್ತು.
ಕಳೆದ ಬಾರಿ ಬಿಜೆಪಿ 437 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿತ್ತು. ಈ ಪೈಕಿ 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ 99 ಜನರಿಗೆ ಟಿಕೆಟ್ ನಿರಾಕರಿಸಿ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿತ್ತು ಎಂಬುದು ವಿಶೇಷ. ಆಗಲೂ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಣೆ ಪ್ರಮಾಣ ಶೇ.23ರಷ್ಟಿತ್ತು ಎಂಬುದು ವಿಶೇಷ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..