ಹಾಸನ –
ಬರುವ ಜನೆವರಿಯಲ್ಲಿ ರಾಜ್ಯದ ಸರ್ಕಾರಿ ನೌಕರರು 100 ಕ್ಕೆ ನೂರರಷ್ಟು 7ನೇ ವೇತನ ಆಯೋಗದ ಹೊಸ ವೇತನದ ಆದೇಶವನ್ನು ಪಡೆದುಕೊಂಡು ಹೊಸ ವೇತನವನ್ನು ತಗೆದು ಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ನೌಕರರ ದಸರಾ -2022 ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದರು ಅಭಿವೃದ್ದಿಯಲ್ಲಿ ರಾಜ್ಯ 6ನೇ ಸ್ಥಾನದಲ್ಲಿದೆ ಇದಕ್ಕೆ ಕಾರಣ ನಮ್ಮ ರಾಜ್ಯದ ಸರ್ಕಾರಿ ನೌಕರರು ನೌಕರರು ಎಷ್ಟೇ ಒತ್ತಡದಲ್ಲಿ ಇದ್ದರೂ ಕೂಡಾ ಕೆಲಸ ಮಾಡತಾ ಇದ್ದಾರೆ ಹುದ್ದೆಗಳು ಖಾಲಿ ಇದ್ದರೂ ಕೂಡಾ ಕೆಲಸ ಸೇರಿದಂತೆ ಪ್ರತಿಯೊಂದರಲ್ಲೂ ಎಷ್ಟೇ ಒತ್ತಡ ಇದ್ದರೂ ಕೂಡಾ ಕಡಿಮೆ ಸಂಬಳ ತಗೆದು ಕೊಳ್ಳುತ್ತಾ ಇದ್ದರೂ ಕೂಡಾ ಅದಕ್ಕೆ ನಮ್ಮ ರಾಜ್ಯದ ಸರ್ಕಾರಿ ನೌಕರರು ಕೆಲಸ ಮಾಡಿದ್ದು ಎಂದರು.
ಇದೊಂದು ಸಂತೋಷದ ವಿಚಾರವಾಗಿದ್ದು ರಾಜ್ಯದ ಅಭಿವೃದ್ದಿಯಲ್ಲಿ ನೌಕರರ ಪಾತ್ರ ಪ್ರಮುಖವಾಗಿದ್ದು ಇದಕ್ಕೆ ಅವರೇ ಕಾರಣ ಎಂದರು.ಇನ್ನೂ ಜನೇವರಿ ಯಲ್ಲಿ 100 ಕ್ಕೆ 100 ರಷ್ಟು ಹೊಸ ವೇತನ ತಗೆದುಕೊಳ್ಳುತ್ತೇವೆ ಈ ಒಂದು ವಿಶ್ವಾಸ ನಮಗೆ ಇದೆ ಎಂದರು.
https://youtu.be/z2jnVGd9j5Ahttps://youtu.be/z2jnVGd9j5A
ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರೊಂ ದಿಗೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಟಿ ರಾಮಸ್ವಾಮಿ ಮತ್ತು ಜಿಲ್ಲಾಧ್ಯಕ್ಷರಾದ ಸಿ ಕೃಷ್ಣೆಗೌಡ ಮತ್ತು ಕೇಂದ್ರ ಸಂಘದ ಹಿರಿಯ ಉಪಾಧ್ಯಕ್ಷರಾದ ಎಂ ವಿ ರುದ್ರಪ್ಪ ಮತ್ತು ಉಪಾಧ್ಯಕ್ಷರಾದ ಆರ್ ಮೋಹನ್ ಕುಮಾರ್, ದಿನೇಶ್ ಮತ್ತು ಶಿವಮೊಗ್ಗ ಜಿಲ್ಲಾ ಸಂಘದ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ್ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು