ಬೆಂಗಳೂರು –
ಪ್ರಸಕ್ತ ಸಾಲಿನ SSLC ಉತ್ತರ ಪತ್ರಿಕೆಗಳ ಮೌಲ್ಯಮಾಪ ನಕ್ಕೆ ಸುಮಾರು 10 ಸಾವಿರ ಶಿಕ್ಷಕರು ಗೈರಾಗಿದ್ದು ಈ ಪೈಕಿ ಖಾಸಗಿ ಶಾಲಾ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇವರ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ.ಎ.23 ರಿಂದ ಮೇ 5ರ ವರೆಗೆ ಮೌಲ್ಯಮಾಪನ ನಡೆದಿದೆ.ಈ ಅವಧಿಯಲ್ಲಿ ಗೈರು ಹಾಜರಾಗಿರುವ ಗರ್ಭಿಣಿ,ಬಾಣಂತಿ ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ಹೊರತುಪಡಿಸಿ ಉಳಿ ದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ಬಾರಿ 73,236 ಶಿಕ್ಷಕರು ನೋಂದಣಿ ಮಾಡಿಕೊಂಡಿ ದ್ದರು ಗೈರು ಹಾಜರಾದವರಲ್ಲಿ ಶೇ.50 ರಷ್ಟು ಶಿಕ್ಷಕರು ಖಾಸಗಿ ಶಾಲೆಯವರಾಗಿದ್ದು ಇವರ ಮೇಲೆ ಕ್ರಮ ಕೈಗೊ ಳ್ಳಲು ಸರಕಾರದ ವತಿಯಿಂದ ಸಾಧ್ಯವಿಲ್ಲ.ಉಳಿದ ಸರಕಾರಿ ಶಾಲೆಯ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ.ಗೈರು ಹಾಜರಾದ ವರಿಗೆ ದಂಡ ವಿಧಿಸುವುದು ಅಥವಾ ಮುಂದಿನ ವರ್ಷದ ಮೌಲ್ಯಮಾಪನ ಕಾರ್ಯಕ್ಕೆ ಕಪ್ಪು ಪಟ್ಟಿಗೆ ಸೇರಿಸಲಾಗು ವುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.
