ಬೆಂಗಳೂರು –
ಸಾಮಾನ್ಯವಾಗಿ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಇಲ್ಲವೇ ಕುಟುಂಬ ಸಮೇತರಾಗಿ ಎಲ್ಲೊ ಹೊರಗಡೆ ಹೋಗಿ ಬಿಂದಾಸ್ ಆಗಿ ಆಚರಣೆ ಮಾಡಿಕೊಳ್ಳೊ ದು ಸರ್ವೆ ಸಾಮಾನ್ಯ .ಆದರೆ ಇಲ್ಲೊಬ್ಬರು ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಅರ್ಥಪೂರ್ಣ ವಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಹೌದು ಇದಕ್ಕೆ ಸಾಕ್ಷಿ 108 ರಾಜ್ಯ ಮುಖ್ಯಸ್ಥರಾಗಿ ರುವ ಹನಮಂತ ಆರ್ ಜಿ.ದೊಡ್ಡ ಹುದ್ದೆಯಲ್ಲಿ ದ್ದರೂ ಕೂಡಾ ಇವರು ಸಾಮಾನ್ಯರಂತೆ ಸಾಮಾನ್ಯರ ನಡುವೆ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು.
ಹೌದು ಬೆಂಗಳೂರಿನ ಗಾಂಧೀನಗರದಲ್ಲಿರುವ ವೃದ್ದಾಶ್ರಮದಲ್ಲಿ ಹನಮಂತ ಇವರು ಹಿರಿಯ ಜೀವಿಗಳ ನಡುವೆ ತಮ್ಮ ಬರ್ಥಡೇ ಆಚರಣೆ ಮಾಡಿಕೊಂಡರು.ಅದರಲ್ಲೂ ಗಾಂಧೀ ವೃದ್ದಾಶ್ರಮದ ಹಿರಿಯ ಎಲ್ಲಾ ಜೀವಿಗಳಿಗೆ ಅನ್ನ ಸಂತರ್ಪಣೆ ಮಾಡಿ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು.
ಇದರೊಂದಿಗೆ ತಾವೊಬ್ಬರು ಸರಳ ವ್ಯಕ್ತಿ ಎಂಬೊದನ್ನು ಈ ಮೂಲಕ ಇವರು ತೊರಿಸಿ ಕೊಟ್ಟರು.
ಈ ಹಿಂದೆ ಕೊರೊನಾ ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಒಂದು ದಿನವೂ ರಜೆಯನ್ನು ತಗೆದುಕೊ ಳ್ಳದೇ ಕರ್ತವ್ಯ ಮಾಡಿ 108 ಸಿಬ್ಬಂದಿಗಳ ಪ್ರೀತಿಗೆ ಪಾತ್ರರಾಗಿರುವ
ಹನಮಂತ ಇವರಿಗೆ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಸದಾಕಾಲವೂ ದೇವರು ನಿಮಗೆ ಒಳ್ಳೇಯದನ್ನು ಮಾಡಲಿ
ಎಂದು ಮಹಮ್ಮದ ಶಫೀ ದಫೇದಾರ ಮತ್ತು ಉತ್ತರ ಕರ್ನಾಟಕದ 108 ಸಿಬ್ಬಂದಿಗಳು ಶುಭಾಶಯಗಳನ್ನು ಕೋರಿದ್ದಾರೆ.