ಕುತ್ತಿಗೆಗೆ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ – 108 ಸಿಬ್ಬಂದಿ ಜೀವ ಉಳಿಸಿದರು

Suddi Sante Desk

ಗದಗ –

ಮನೆಯಲ್ಲಿನ ಸಮಸ್ಯೆಯಿಂದಾಗಿ ಕುತ್ತಿಗೆಗೆ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ನಲ್ಲಿ ನಡೆದಿದೆ‌. ಗದಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ‌.ಚನ್ನಬಸಪ್ಪ ಎಂಬುವರೇ ಕುತ್ತಿಗೆಗೆ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ.

ರಾಜೀವ ಗಾಂಧಿ ನಗರ ದಲ್ಲಿ ಮನೆಯಲ್ಲಿ ಯುವಕ ಆತ್ಮಹತ್ಯೆ ಯತ್ನಿಸಿದ್ದಾರೆ. ಮನೆಯಲ್ಲಿನ ಸಮಸ್ಯೆ ಹಿನ್ನಲೆಯಲ್ಲಿ ಬೇಸತ್ತು ಇಂದು ಬ್ಲೇಡ್ ನಿಂದ ಕುತ್ತಿಗೆಗೆ ಕೊಯ್ದುಕೊಂಡಿದ್ದಾನೆ.ತೀವ್ರವಾದ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದನು. ಇನ್ನೂ ಈ ಕುರಿತು ಕರೆಬಂದ ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿ ಗಳು ಕೂಡಲೇ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

‘108’ ತುರ್ತು ವಾಹನದ ಸಿಬ್ಬಂದಿ ಗಳಾದ ಇಎಂಟಿ ಮಹೇಶ್ ಮತ್ತು ಪೈಲೆಟ್ ಅಶೋಕ್ ನೀಲಗಾರ್ ಅವರು ಸ್ಥಳಕ್ಕೆ ಆಗಮಿಸಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಿದರು. ಒಂದನೇ ಮಹಡಿಯಲ್ಲಿ ಯುವಕನು ಆತ್ಮಹತ್ಯೆ ಪ್ರಯತ್ನಿಸಿ ಬ್ಲೇಡ್ ನಿಂದ ಕುತ್ತಿಗೆ ಭಾಗವನ್ನು ಶ್ವಾಸನಾಳ(ಟ್ರಾಕಿಯಾ)ದ ವರೆಗೆ ಕೊಯ್ದುಕೊಂಡಿದ್ದನು. ತಕ್ಷಣ ರೋಗಿಯನ್ನು ಇ ಎಮ್ ಟಿ ಮಹೇಶ್ ರೋಗಿಯನ್ನು ಪರೀಕ್ಷಿಸಿದಾಗ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ, ತೀವ್ರವಾದ ರಕ್ತಸ್ರಾವದಿಂದ ಬಳಲುತ್ತಿದ್ದನು. ತಕ್ಷಣವೇ ರೋಗಿಗೆ ಕುತ್ತಿಗೆ ಭಾಗವನ್ನು ಪೂರ್ಣವಾಗಿ ಡ್ರೆಸ್ಸಿಂಗ್ ಮಾಡಿ ರಕ್ತಸ್ರಾವವನ್ನು ಹತೋಟಿಗೆ ತರಲಾಯಿತು. ನಂತರ ಸ್ಥಳೀಯರ ಮತ್ತು ಪೈಲೆಟ್ ಅಶೋಕ್ ರವರ ನೆರವಿನಿಂದ ರೋಗಿಯನ್ನು ಒಂದನೇ ಮಹಡಿ ಯಿಂದ ಸ್ಪೈನ್ ಬೋರ್ಡ್ ಮುಖಾಂತರ ಅಂಬುಲೆನ್ಸ್ ಒಳಗೆ ಸ್ಥಳಾಂತರಿಸಲಾಯಿತು.

ನಂತರ ಇಎಂಟಿ ಮಹೇಶ್ ರವರು ರೋಗಿಗೆ ಐವಿ ಫ್ಲೂಯಿಡ್, ಎನ್ಎಸ್, ಆಕ್ಸಿಜನ್ ಮತ್ತು ಗಾಯದ ಆರೈಕೆ ಮಾಡುತ್ತಾ ರೋಗಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಾ ಆಂಬುಲೆನ್ಸ್ ನಲ್ಲಿ ಆರೈಕೆ ಮಾಡಿದರು. ಇದರ ಪರಿಣಾಮವಾಗಿ ರೋಗಿಯ ರಕ್ತಸ್ರಾವವು ಕಡಿಮೆಯಾಯಿತು ನಂತರ ರೋಗಿಯು ಸ್ವಲ್ಪ ಪ್ರಜ್ಞಾವಸ್ಥೆ ಸ್ಥಿತಿಗೆ ಬಂದನು ನಂತರ ರೋಗಿಯನ್ನು ಜಿಲ್ಲಾ ಆಸ್ಪತ್ರೆ, ಗದಗ ಗೆ ದಾಖಲಿಸಲಾಯಿತು.ಇನ್ನೂ ಇದರಲ್ಲಿ ಮಹಮ್ಮದ್ ಶಫಿ ಮತ್ತು ಶ್ರೀನಿವಾಸ್ ಮುಂದಲಮನಿ ಅವರ ಮಾರ್ಗದರ್ಶನ ನಿರಂತರವಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.