ಯಾದಗಿರಿ –
ಇಲ್ಲೊಬ್ಬ ಶಿಕ್ಷಕರೊಬ್ಬರು ಸುಳ್ಳು ಹೇಳಿ ಒಂದಲ್ಲ,ಎರಡಲ್ಲ, ಬರೋಬ್ಬರಿ ಮೂರು ಮದುವೆ ಯಾಗಿ ಈಗ ನಾಲ್ಕನೇ ಮದುವೆಯ ಸಿದ್ದತೆಯಲ್ಲಿರುವಾಗಲೇ ಸಿಕ್ಕಿ ಬಿದ್ದಿದ್ದಾರೆ. ಹೌದು ಈ ವಿಚಾರ ಪರಸ್ಪರ ಪತ್ನಿಯರಿಗೂ ಗೊತ್ತಾಗದಂತೆ ಹಲವು ವರ್ಷ ಸಂಸಾರ ನಡೆಸಿ ಈಗಿ ಸಿಕ್ಕಿಬಿದ್ದಿದ್ದಾನೆ. ಹೆಸರು ಮೋಹನರೆಡ್ಡಿ ಪಾಟೀಲ್ ಯಾದಗಿರಿ ತಾಲೂಕಿನ ನಿಲನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ಇವರು ಮೂರು ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಮೋಹನರೆಡ್ಡಿ ಪಾಟೀಲ್ 1988 ರಲ್ಲಿ ಮೊದಲ ಮದುವೆ ಯಾಗಿದ್ದು 1992ರಲ್ಲಿ ಎರಡನೇ ಮದುವೆಯಾಗಿದ್ದಾರೆ. ಒಂದು ಎರಡನೇ ಎರಡು ಮದುವೆ ಆಗಿರುವ ವಿಚಾರ ಬಚ್ಚಿಟ್ಟು 2007ರಲ್ಲಿ ಮತ್ತೊಬ್ಬಳನ್ನು ಕೈಹಿಡಿದಿದ್ದಾರೆ. ಮೊದಲ ಮತ್ತು ಎರಡನೇ ಹೆಂಡತಿಯರಿಗೆ ಕೈ ಕೊಟ್ಟು ಮೂರನೇ ಹೆಂಡ್ತಿ ಜತೆ ಸಂಸಾರ ನಡೆಸುತ್ತಿದ್ದಾನೆ ಈಗ
ತಮ್ಮ ಗಂಡ ಮೂರನೇ ಮದ್ವೆ ಆಗಿದ್ದಾನೆ ಎಂಬ ವಿಚಾರ ಮೊದಲ ಮತ್ತು 2ನೇ ಪತ್ನಿಯರಿಗೆ ತಿಳಿದಿದೆ ಈ ಒಂದು ಅವರಿಬ್ಬರೂ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳಿಗೆ ಅವರು ಈಗ ದೂರು ನೀಡಿದ್ದಾರೆ.ಸರ್ಕಾರಿ ಶಾಲೆ ಶಿಕ್ಷಕ 3 ಮದ್ವೆ ಆಗಿದ್ದಾನೆ ಎಂಬ ವಿಚಾರ ತಿಳಿದು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.