ಬೆಂಗಳೂರು –
ವಿದೇಶದಿಂದ ಆಗಮಿಸಿರುವ 14 ಜನರಲ್ಲಿ ಕೊರೊನಾ ರೂಪಾಂತರ ವೈರಸ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದೇಶದಿಂದ ಆಗಮಿಸಿರುವ 1,638 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, 14 ಜನರಲ್ಲಿ ಹೊಸ ಬಗೆಯ ಕೊರೊನಾ ಸೋಂಕು ಪತ್ತೆಯಾಗಿದೆ. 14 ಜನರನ್ನೂ ನಿಮ್ಹಾನ್ಸ್ ಗೆ ಕಳುಹಿಸಿದ್ದು, ಅಲ್ಲಿನ ಲ್ಯಾಬ್ ನಲ್ಲಿ ಸೋಂಕಿತರಿಗೆ ಸುದೀರ್ಘ ಪರೀಕ್ಷೆ ನಡೆಯುತ್ತಿದೆ ಎಂದರು.
ಸೋಂಕಿತರ ಬಗ್ಗೆ ಐಸಿಎಂಆರ್ ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಖಚಿತ ಮಾಹಿತಿ ನಾಳೆ ಗೊತ್ತಾಗಲಿದ್ದು, ಕೇಂದ್ರ ಸರ್ಕಾರವೇ ಮಾಹಿತಿ ಬಿಡುಗಡೆ ಮಾಡಲಿದೆ ಎಂದು ಹೇಳಿದರು.