ಹುಬ್ಬಳ್ಳಿ –
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ಅಕ್ರಮ ಹಣ ಹಾಗೂ ಕಾರು ಜಪ್ತಿ ಮಾಡಿದ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ.ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಈ ಒಂದು ಹಣ ಮತ್ತು ಕಾರನ್ನು ಜಪ್ತಿ ಮಾಡಲಾಗಿದೆ.
ಅಂಕೋಲಾದಿಂದ ಹುಬ್ಬಳ್ಳಿ ಗೆ ಬರ್ತಿದ್ದ ಬ್ರೀಜಾ ಕಾರ್ರ್ ತಪಾಸಣೆ ಮಾಡಿದಾಗ 15 ಲಕ್ಷ ಹಣ ಪತ್ತೆ ಯಾದ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಚೆಕ್ ಪೋಸ್ಟ್ ಸಿಬ್ಬಂದಿ.
KA 22MA 4496 ಬ್ರೀಜಾ ಕಾರ್ ಹಾಗೂ ಅಕ್ರಮ ಹಣವನ್ನು ಜಪ್ತಿ ಮಾಡಲಾಗಿದೆ.ಸ್ಥಳಕ್ಕೆ ತಹಶಿಲ್ದಾರ್ ಕಲಗೌಡ ಪಾಟೀಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾರು ಮತ್ತು ಚಾಲಕ ನನ್ನು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡತಾ ಇದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..