ಧಾರವಾಡ –
ಡೂಟಿ ಮುಗಿಸಿ ಮನೆಗೆ ಹೊರಟಿದ್ದ ಡ್ರೈವರ್ ಗೆ ಮತ್ತೆ ಡೂಟಿ ಕಳಿಸಿ ಎಡವಟ್ಟು ಮಾಡಿದ ಅಧಿಕಾರಿಗಳು – ದಾರಿ ಮಧ್ಯದಲ್ಲಿ ಕೈಕೊಟ್ಟ 3540 ಬಸ್…..DC ಯವರಿಂದ 15 ಲಕ್ಷ ದಂಡದ ಸಂದೇಶ ಕೇಳಿ ಶಾಕ್ ಆದ ಚಿಗರಿ ಚಾಲಕ…..
ಹುಬ್ಬಳ್ಳಿ ಧಾರವಾಡ ಚಿಗರಿ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳ ಡಿಸಿಯವರ ಕಾರ್ಯವೈಖರಿ ಹೇಗೆ ನಡೆಯುತ್ತಿದೆ ಚಾಲಕರ ಮೇಲೆ ಹೇಗೆ ಗದಪ್ರಹಾರವನ್ನು ಮಾಡ್ತಾ ಇದ್ದಾರೆ ಎಂಬೊದಕ್ಕೆ ಈ ಒಂದು ಘಟನೆ ಸಾಕ್ಷಿ.ಹೌದು ಎರಡು ದಿನಗಳ ಹಿಂದೆ ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನಲೆಯಲ್ಲಿ ಚಾಲಕರಿಗೆ ಹೆಚ್ಚುವರಿ ಡೂಟಿ ಮಾಡುವಂತೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದರು
ಕೆಲ ಚಾಲಕರು ಈ ಒಂದು ಒಪ್ಪಿಕೊಳ್ಳದೇ ಬಸ್ ಗಳನ್ನು ಡಿಪೋ ಒಳಗಡೆ ಹಾಕಿ ಮುಲಾಜಿಲ್ಲದೇ ಮನೆಯತ್ತ ಮುಖ ಮಾಡಿದರು.ಇನ್ನೂ ಕೆಲ ಚಾಲಕರು ಮೇಲಾಧಿಕಾ ರಿಗಳು ಹೇಳಿದ್ದಾರೆ ಎಂದುಕೊಂಡು ಡೂಟಿ ಮುಗಿಸಿ ಮತ್ತೆ ಡೂಟಿಗೆ ಹೊರಟರು.ಹೀಗೆ ಡೂಟಿಗೆ ಹೊರಟ ಒರ್ವ ಚಾಲಕನಿಗೆ ಬಸ್ ಸಮಸ್ಯೆಯನ್ನು ತಿಳಿದುಕೊ ಳ್ಲದೇ ನೊಡದೇ 3540 ಬಸ್ ನ್ನು ಕೊಟ್ಟು ಡೂಟಿಗೆ ಕಳುಹಿಸಿದರು.
ಹೊಸ ಬಸ್ ನಿಲ್ದಾಣದಿಂದ ಹೊರಟ ಆ ಚಾಲಕ ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆ ಬೇರೆ ಬಸ್ ನೊಂದಿಗೆ ಡೂಟಿಗೆ ಹೊರಟರು ಜೋರಾಗಿ ಸುರಿಯುತ್ತಿರುವ ಮಳೆ ಸಿಕ್ಕಾಪಟ್ಟಿ ಟ್ರಾಫಿಕ್ ಜಾಮ್ ಇವೆಲ್ಲದರ ನಡುವೆ ಬಸ್ ನ ಹಿಂದಿನ ಭಾಗದ ಬಲೂನ್ ಮೊದಲೇ ಹಾಳಾಗಿತ್ತು ದಾರಿ ಮಧ್ಯಯದಲ್ಲಿಯೇ ಸಂಪೂರ್ಣವಾಗಿ ಹಾಳಾಗಿ ಒಂದು ಸೈಡ್ ಬಸ್ ವಾಲಿ ಕೊಂಡು ಟ್ರ್ಯಾಕ್ ನಲ್ಲಿರುವ ಬೂಮ್ ಬ್ಯಾರಿಕೇಡ್ ಗೆ ತಾಗಿದೆ.
ಇನ್ನೇನು ಬಸ್ ಹೋಗೊದು ಕಷ್ಟ ಎಂದುಕೊಂಡು ಡ್ರೈವರ್ ಬಸ್ ನಲ್ಲಿದ್ದ ಪ್ರಯಾಣಿಕರನ್ನು ನಿಲ್ದಾಣದಲ್ಲಿ ಇಳಿಸಿ ಕೈಕೊಟ್ಟ ಬಸ್ ನೊಂದಿಗೆ ಮರಳಿ ಡಿಪೋ ಗೆ ಬಂದನು.ಡಿಪೋ ಗೆ ಬರುತ್ತಿದ್ದಂತೆ ಬಸ್ ಸಮಸ್ಯೆ ಏನು ಯಾಕೇ ಆಯಿತು ಕಾರಣ ಏನು ಯಾವುದನ್ನು ಹಿಂದೆ ಮುಂದೆ ನೊಡದೇ ತಿಳಿದುಕೊಳ್ಳದ ಅಧಿಕಾರಿ ಮಹಾಶ ಯರು ಇದೇ ದೊಡ್ಡ ಮಹಾ ಅಪರಾಧ ಚಾಲಕ ಏನೋ ದೊಡ್ಡ ತಪ್ಪು ಮಾಡಿದ್ದಾನೆ ಎಂದುಕೊಂಡು ನಾಳೆ ನೀನು ಡಿಸಿಯವರಿಗೆ ಹೋಗಿ ಭೇಟಿಯಾಗಿ ಬಾ ಎಂದು ಹೇಳಿ ಕಳುಹಿಸಿದರು
ನಾನೇನು ತಪ್ಪು ಮಾಡಿಲ್ಲ ಡೂಟಿ ಮುಗಿದ ಮೇಲೆ ನನಗೆ ಹೆಚ್ಚುವರಿ ಡೂಟಿ ಕೊಟ್ಟು ಗೊತ್ತಿಲ್ಲದ ಬಸ್ ಕೊಟ್ಟು ಕಳುಹಿಸಿದ್ದಾರೆ ಅದರಲ್ಲಿ ನನ್ನದೇನು ತಪ್ಪು ಇಲ್ಲ ಎಂಬ ನಂಬಿಕೆಯಿಂದ ಡಿಸಿಯವರ ಬಳಿ ಚಾಲಕ ಹೋಗಿದ್ದಾನೆ. ಡೂಟಿ ಮುಗಿದ ಮೇಲೆ ಚಾಲಕರು ನಾವು ಹೇಳಿದ ಕೂಡಲೇ ಮತ್ತೆ ಡೂಟಿಗೆ ಹೋಗಿದ್ದಾರೆ ಅದೇನು ದೊಡ್ಡ ತಪ್ಪು ಅಲ್ಲ ಆಗಿದ್ದಾದರೂ ಏನು ಏನನ್ನೂ ಕೇಳದ ಡಿಸಿಯವರು 15 ಲಕ್ಷ ರೂಪಾಯಿ ಆಗುತ್ತದೆ ದಂಡ ವನ್ನು ತುಂಬು ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಅಷ್ಟೊಂದು ಹಣ ಚಾಲಕರು ಹೇಗೆ ತುಂಬಬೇಕು 3540 ನಲ್ಲಿನ ಈ ಒಂದು ಸಮಸ್ಯೆ ಕುರಿತಂತೆ ಪ್ರತಿದಿನ ಬಸ್ ಚಾಲಕ ಲಾಗ್ ಶೀಟ್ ನಲ್ಲಿ ಬರೆದರು ಯಾಕೇ ನಿಮ್ಮ ಮೆಕ್ಯಾನಿಕ್ ಮಾಡಿಲ್ಲ ತಪ್ಪು ಯಾರದ್ದು ಹೇಳಿ ಇದೇನಾ ನಿಮ್ಮ ಆಡಳಿತ ವ್ಯವಸ್ಥೆ ಚಾಲಕರ ಸ್ನೇಹಿಯಾಗಿ ಕೆಲಸ ವನ್ನು ಮಾಡಬೇಕಾದ ಡಿಸಿಯವರೇ ನಿಮ್ಮಿಂದ ಇಲಾಖೆ ಯಲ್ಲಿ ಯಾವ ರೀತಿ ಆಡಳಿತ ನಡೆಯುತ್ತಿದೆ ಎಂಬೊ ದನ್ನು ನೋಡಿ ತಿಳಿದುಕೊಳ್ಳಿ ಮೇಲಾಧಿಕಾರಿಗಳಾದ ವರು ಮೊದಲು ಎಲ್ಲವನ್ನು ತಿಳಿದುಕೊಂಡು ನಂತರ ತಪ್ಪು ಮಾಡಿದ್ದರೆ ಡ್ರೈವರ್ ಗಳಿಗೆ ಶಿಕ್ಷೆಯನ್ನು ನೀಡಿ ಖಂಡಿತವಾಗಿಯೂ ನಾವು ಸ್ವಾಗತ ಮಾಡುತ್ತೇವೆ
ಡೂಟಿ ಮುಗಿಸಿಕೊಂಡು ಮನೆಗೆ ಹೊರಟ ಡ್ರೈವರ್ ಗೆ ಮತ್ತೆ ಹೆಚ್ಚುವರಿ ಡೂಟಿ ಕಳುಹಿಸಿ ಸರಿಯಾದ ನಿರ್ವಹಣೆ ಇಲ್ಲದ ಬಸ್ ಗಳಿಂದ ಆಗಿರುವ ಎಡವಟ್ಟು ಗಳಿಗೆ 15 ಲಕ್ಷ ರೂಪಾಯಿ ದಂಡವನ್ನು ಪಾವತಿ ಮಾಡಲು ಹೇಳುವ ನಿಮಗೆ ಮನಸ್ಸಾದರು ಹೇಗೆ ಬಂತು.ಸಾರಿಗೆ ಸಚಿವರೇ ,ಜನಪ್ರತಿನಿಧಿಗಳೇ ಚಿಗರಿ ಸಾರಿಗೆ ಇಲಾಖೆಯಲ್ಲಿ ಡಿಸಿಯವರ ಕಾರ್ಯವೈಖರಿ ಹೇಗೆ ನಡೆಯುತ್ತಿದೆ ಒಮ್ಮೆ ನೋಡಿ ಇವರ ಆಡಳಿತ ದಿಂದ ಚಾಲಕರು ಬೇಸತ್ತಿದ್ದು ಇದಕ್ಕೆ ಕಡಿವಾಣ ಹಾಕೊದು ಅವಶ್ಯಕವಿದೆ
ಸುದ್ದಿ ಸಂತೆ ನ್ಯೂಸ್ ಧಾರವಾಡ……