ಮಂಗಳೂರು –
ಕೋವಿಡ್-19 ಸಂಕಷ್ಟದ ನಂತರ ಈ ಶೈಕ್ಷಣಿಕ ವರ್ಷದಲ್ಲಿ ಒಂದು ಸರ್ಕಾರಿ ಶಾಲೆ ಸೇರಿದಂತೆ ಒಟ್ಟು 16 ಶಾಲೆಗಳು ಬಂದ್ ಆಗಿವೆ.ತಮ್ಮ ಕಾರ್ಯವನ್ನು ಸ್ಥಗಿತಗೊಳಿಸು ವುದಾಗಿ ಈ ಶಾಲೆಗಳು ಶಿಕ್ಷಣ ಇಲಾಖೆಗೆ ಪತ್ರ ಬರೆದಿವೆ. ಹೌದು ಮಂಗಳೂರಿನಲ್ಲಿ ಇಂತಹದೊಂದು ಪರಿಸ್ಥಿತಿ ಕಂಡು ಬಂದಿದ್ದು ಕೆಲ ಕಾರಣಗಳಿಂದಾಗಿ ಸಧ್ಯ 16 ಶಾಲೆಗಳು ಬಾಗಿಲು ಮುಚ್ಚಿವೆ
ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಕೆಂಜಾರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೇವಲ ಇಬ್ಬರು ಮಾತ್ರ ಪ್ರವೇಶ ಪಡೆದಿದ್ದು,ಶಾಲೆ ಸ್ಥಗಿತವಾ ಗುತ್ತಿದೆ.ಇದೇ ವ್ಯಾಪ್ತಿಯಲ್ಲಿ ಎರಡು ಅನುದಾನಿತ ಹಾಗೂ ಒಂದು ಅನುದಾನ ರಹಿತ ಶಾಲೆ ಬಂದ್ ಆಗುತ್ತಿವೆ. ಮಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ 2 ಅನುದಾನರಹಿತ ಹಾಗೂ ಒಂದು ಅನುದಾನಿತ ಶಾಲೆ,ಮೂಡುಬಿದಿರೆ ವ್ಯಾಪ್ತಿಯಲ್ಲಿ ಒಂದು ಅನುದಾನಿತ, ಒಂದು ಅನುದಾನ ರಹಿತ,ಬಂಟ್ವಾಳ ವ್ಯಾಪ್ತಿಯಲ್ಲಿ ಎರಡು ಅನುದಾನರಹಿತ, ಪುತ್ತೂರು ವ್ಯಾಪ್ತಿಯಲ್ಲಿ 2 ಅನುದಾನರಹಿತ, ಸುಳ್ಯ ತಾಲ್ಲೂಕಿನ ಒಂದು ಅನುದಾನರಹಿತ ಶಾಲೆಗಳು ತಮ್ಮ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲು ನಿರ್ಧರಿಸಿದ್ದು ದುರಂತದ ವಿಚಾರ