ಮಂಡ್ಯ –
ಸರ್ಕಾರಿ ಶಾಲೆಯ ಒಂದೇ ಶಾಲೆಯಲ್ಲಿನ 17 ಮಕ್ಕಳಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಘಟನೆ ಮಂಡ್ಯ ದಲ್ಲಿ ನಡೆದಿದೆ.ಹೌದು ಒಂದು ಕಡೆ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಮಾಮ ಹೆಚ್ಚಾಗುತ್ತಿದ್ದು ಇದರ ಮಧ್ಯೆ ಶಾಲೆಗಳಲ್ಲೂ ಕೂಡಾ ಹೆಚ್ಚಾಗುತ್ತಿದ್ದು ಈಗ ಮಾಕವಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಕೊರೋನಾ ಪಾಸಿ ಟಿವ್ ಕಂಡು ಬಂದಿದೆ.
ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಮಾಕವಳ್ಳಿ ಯಲ್ಲಿ ಈ ಒಂದು ಪ್ರಕರಣಗಳು ಕಂಡು ಬಂದಿವೆ.ನಿನ್ನೆ ಲಸಿಕೆ ನೀಡುವ ವೇಳೆ ಕೊರೋನಾ ಟೆಸ್ಟ್ ಮಾಡಿದ್ದ ಅಧಿಕಾರಿಗಳು.ಈ ಪೈಕಿ 17 ಮಕ್ಕಳಿಗೆ ಕೊರೋನಾ ದೃಢ ವಾಗಿದೆ.ಸಧ್ಯ ಮಕ್ಕಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಿದ್ದತೆ ಮಾಡುತ್ತಿದ್ದು ಈಗಾಗಲೇ ಎಲ್ಲಾ ತಯಾರನ್ನು ಮಾಡಿದ್ದಾರೆ ಅಧಿಕಾರಿಗಳು