ಬೆಂಗಳೂರು –
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಸ್ಥಾನದಲ್ಲಿರುವ ಯುವತಿ ಪರ ವಕೀಲ ಜಗದೀಶ್ ಕುಮಾರ್ ವಿರುದ್ಧ ಈ ಹಿಂದೆ 17 ಕ್ರಿಮಿನಲ್ ಕೇಸ್‌ಗಳು ದಾಖಲಾಗಿದ್ದಲ್ಲದೆ ಕೊಡಿಗೇಹಳ್ಳಿ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿ ಈ ಹಿಂದೆ ಅವರ ಹೆಸರಿರುವುದು ಸಾರ್ವಜನಿಕ ವಲಯದಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ.

ಹೌದು ವಕೀಲ ಜಗದೀಶ್ ಕುಮಾರ್ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ 11, ಯಲಹಂಕ, ವಿದ್ಯಾರಣ್ಯಪುರ, ಹೆಬ್ಬಾಳ, ಸಂಜಯನಗರ, ನವೀಮುಂಬೈನ ನೆರೂಲ್ ಠಾಣೆ ಸೇರಿದಂತೆ ಒಟ್ಟು 17 ಕೇಸ್‌ಗಳು ದಾಖಲಾಗಿದ್ದವು. 2002ರಿಂದ 2015ರ ನಡುವೆ ಈ ಕೇಸ್‌ಗಳು ದಾಖಲಾಗಿವೆ.

ಕೌಟುಂಬಿಕ ದೌರ್ಜನ್ಯ, ಹಲ್ಲೆ, ಐಟಿ ಕಾಯಿದೆ, ಅಪರಾಧಕ್ಕೆ ಪ್ರಚೋದನೆ, ಬಲವಂತವಾಗಿ ಕೂಡಿಡುವುದು, ಬಲವಂತವಾಗಿ ಹಲ್ಲೆ, ವಂಚನೆ, ಕೊಲೆ ಯತ್ನ, ಶಾಂತಿ ಭಂಗಕ್ಕೆ ಯತ್ನ ಮುಂತಾದ ಕಲಂ ಗಳ ಅಡಿಯಲ್ಲಿ ಕೇಸ್ ದಾಖಲಾಗಿದ್ದವು.12 ಕೇಸ್ ಖುಲಾಸೆ, ಒಂದರಲ್ಲಿ ರಾಜಿ, ಮತ್ತೊಂದಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಉಳಿದ ಮೂರರಲ್ಲಿ ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ