ಹುಬ್ಬಳ್ಳಿ –
ಒಂದೇ ದಿನದಲ್ಲಿ 19 ಚಿಗರಿ ಬಸ್ ಗಳು BD ಡಿಪೋ ದಲ್ಲಿ ಬಸ್ ಗಳನ್ನು ನೋಡಿ ತಲೆಮೇಲೆ ಕೈಇಟ್ಟುಕೊಂಡು ನಿಂತ ಡಿಪೋ ಮ್ಯಾನೇಜರ್ – ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬಸ್ ಗಳ ಸಮಸ್ಯೆ ಮೌನವಾಗಿ ಕುಳಿತುಕೊಂಡಿದ್ದಾರೆ DC ಯವರು…..
ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಧ್ಯೆ ತ್ವರಿತ ಸಾರಿಗೆ ಸಂಪರ್ಕವಾಗಿ ಸಂಚಾರವನ್ನು ಮಾಡುತ್ತಿರುವ ಚಿಗರಿ ಬಸ್ ಗಳು ದಿನದಿಂದ ದಿನಕ್ಕೆ ಬಸ್ ಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆರಂಭಗೊಂಡು ಈವರೆಗೆ ಈ ಒಂದು ಬಸ್ ಗಳ ಸರಿಯಾದ ನಿರ್ವಹಣೆ ವ್ಯವಸ್ಥೆ ಸರಿಯಾಗಿ ಮಟೀರಿಯಲ್ಸ್ ಗಳಿಲ್ಲದ ಪರಿಣಾಮವಾಗಿ ಬಸ್ ಗಳು ಕೈಕೊಡು ತ್ತಿದ್ದು ಸಮಸ್ಯೆ ಹೆಚ್ಚಾಗುತ್ತಿದ್ದರು ಕೂಡಾ ಡ್ರೈವರ್ ಗಳು ಲಾಗ್ ಶೀಟ್ ನಲ್ಲಿ ದುರಸ್ತಿ ವಿಚಾರ ಕುರಿ ತಂತೆ ಬರೆಯುತ್ತಿದ್ದರು ಕೂಡಾ ಡಿಸಿಯವರಾಗಲಿ ಮೇಲ್ವಿಚಾರಣಾ ಅಧಿಕಾರಿಗಳಾಗಲಿ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ
ಯಾವೊಬ್ಬ ಡ್ರೈವರ್ ಕೂಡಾ ನೆಮ್ಮದಿಯಿಂದ ಡೂಟಿ ಮುಗಿಸಿದ ಶೆಡ್ಯೂಲ್ ಹುಬ್ಬಳ್ಳಿ ಧಾರವಾಡ ಡಿಪೋ ಗಳಲ್ಲಿ ಕಂಡು ಬರುತ್ತಿಲ್ಲ ಪ್ರತಿಯೊಂದು ಬಸ್ ಗಳಲ್ಲಿ ದಿನಕ್ಕೆ ಒಂದಿಲ್ಲ ಒಂದು ಸಮಸ್ಯೆ ಕಂಡು ಬರುತ್ತಿದ್ದು ಇದರ ನಡುವೆ ನಿನ್ನೆಯಷ್ಟೇ ಒಂದೇ ದಿನ ಹುಬ್ಬಳ್ಳಿಯ ಡಿಪೋ ದಲ್ಲಿ 19 ಬಸ್ ಗಳು ಬಿಡಿಯಾಗಿದ್ದು ಇದನ್ನು ನೋಡಿದರೆ ಸಧ್ಯ ಚಿಗರಿ ಯಲ್ಲಿ ಬಸ್ ಗಳ ಪರಸ್ಥಿತಿ ಹೇಗಿದೆ ಎಂಬೊದು ಕಂಡು ಬರುತ್ತಿದ್ದು ಈ ನಡುವೆ ಈಗಷ್ಟೇ ಇಲಾಖೆಗೆ ಡಿಸಿಯಾಗಿ ಬಂದಿರುವ ಸಿದ್ದಲಿಂಗಯ್ಯ ಅವರು ಮೊದಲು ಬಸ್ ಗಳ ಸಮಸ್ಯೆಯನ್ನು ಸರಿ ಮಾಡಬೇಕಿತ್ತು ಸುಧಾರಣೆ ಮಾಡಬೇಕಿತ್ತು ಬಸ್ ಗಳಿಗೆ ಬೇಕಾಗಿರುವ ವಸ್ತು ಗಳನ್ನು ತರಿಸಿ ಹಾಕಿಸಿ ಸುವ್ಯವಸ್ಥೆಯ ರೀತಿಯಲ್ಲಿ ಬಸ್ ಓಡುವಂತೆ ಮಾಡಬೇಕಿತ್ತು ಆದರೆ ಅದನ್ನು ಮಾಡುವ ಬದಲಿಗೆ ಸಾಹೇಬ್ರು ಇಲಾಖೆಗೆ ದೊಡ್ಡ ಶಕ್ತಿಯಾಗಿರುವ ಡ್ರೈವರ್ ಗಳ ಮೇಲೆ ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ
ಏನಾದರು ಹೆಚ್ಚು ಕಡಿಮೆಯಾದರೆ ಮೊದಲು ಅಮಾನತು ಅಮಾನತು ಮಾಡುವ ವ್ಯವಸ್ಥೆ ಯಿಂದಾಗಿ ಡ್ರೈವರ್ ಗಳು ಬೇಸತ್ತಿದ್ದು ಮೊದಲು ಮಾಡಬೇಕಾಗಿರುವ ಕೆಲಸವನ್ನು ಮಾಡಿ ಆ ಮೇಲೆ ಉಳಿದಂತೆ ಇದ್ದೇ ಇದೆ ಇನ್ನೂ ದಿನದಿಂದ ದಿನಕ್ಕೆ ಬಸ್ ಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಎರಡು ದಿನಗಳ ಹಿಂದೆಯಷ್ಟೇ ಇಲಾಖೆಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರವನ್ನು ಸ್ವೀಕಾರ ಮಾಡಿರುವ ಖಡಕ್ ಮಹಿಳಾ ಅಧಿಕಾರಿ ಯವರು ಇದನ್ನು ಗಂಭೀರವಾಗಿ ತಗೆದುಕೊಂಡು ಡಿಸಿಯವರ ಕಾರ್ಯವೈಖರಿ ನೋಡಿ
ಡ್ರೈವರ್ ಗಳಿಗೆ ನೆಮ್ಮದಿಯ ವಾತಾವರಣನ್ನು ವಂಟು ಮಾಡಿ ಈ ಒಂದು ನಿರೀಕ್ಷೆಯಲ್ಲಿ ಚಾಲಕರು ಇದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……