ಬೆಂಗಳೂರು –
ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಯವರ ಪ್ರಶಂಸನೀಯ ಸೇವಾ ಪದಕಕ್ಕೆ ಕರ್ನಾಟಕದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರರಾಗಿದ್ದಾರೆ. ರಾಜ್ಯ ಗುಪ್ತದಳದಲ್ಲಿ ಐಜಿಪಿಯಾಗಿರುವ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅಯ್ಯಂಕಿ, ಬೆಳಗಾವಿ ಉತ್ತರ ವಲಯದ ಎಸಿಬಿಯ ಎಸ್ಪಿಯಾಗಿರುವ ಬಾಬ್‍ಸಾಬ್ ಶಿವಗೌಡ ನ್ಯಾಮೇಗೌಡ, ಬೆಂಗಳೂರಿನ ಸಿಐಡಿಯ ಆರ್ಥಿಕ ಅಪರಾಧಗಳ ಘಟಕದ ಡಿವೈಎಸ್‍ಪಿ ಬಸವಣ್ಣಪ್ಪ ರಾಮಚಂದ್ರ,

ಬೆಂಗಳೂರು ರೈಲ್ವೆ ವಿಭಾಗದ ಡಿವೈಎಸ್‍ಪಿ ಡಿ.ಅಶೋಕ್, ಬಿಡಿಎ ವಿಶೇಷ ಕಾರ್ಯಪಡೆಯ ಡಿವೈಎಸ್‍ಪಿ ಸಿ.ಬಾಲಕೃಷ್ಣ, ಪೊಲೀಸ್ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಡಿವೈಎಸ್‍ಪಿ ಯಾಗಿರುವ ವಿ.ಕೆ.ವಾಸುದೇವ್, ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ನಾಯಕ್ ಅವರುಗಳು ಪ್ರಶಂಸನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು ಗುಪ್ತದಳದ ಎಎಸ್‍ಐ ಹೊನ್ನಗಂಗಯ್ಯ ಈಶ್ವರಯ್ಯ, ಉಡುಪಿಯ DCRB ಎಎಸ್‍ಐ ಪ್ರಕಾಶ್, ಚಾಮರಾಜನಗರ ಜಿಲ್ಲೆ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಬಸವಯ್ಯ ಪುಟ್ಟಸ್ವಾಮಿ, KSRP ಮೂರನೇ ಬೆಟಾಲಿಯನ್ ವಿಶೇಷ ಸಹಾಯಕ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್, ನಾಲ್ಕನೇ ಬೆಟಾಲಿಯನ್‍ನ ವಿಶೇಷ ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳಾದ ಮೋಹನ್‍ರಾಜ್ ಕುರಡಗಿ ಹಾಗೂ ವೆಂಕಟಸ್ವಾಮಿ ಚಿನ್ನಪ್ಪ, ಗುಪ್ತದಳದ ವಿಶೇಷ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಶಿಕುಮಾರ್,

ಕೊಡಗು ಜಿಲ್ಲೆ ಡಿಎಆರ್ ಎಎರ್ ಎಸೈ ಜಿತೇಂದ್ರ ರಾಧಾಕೃಷ್ಣ ರೈ, ಮೈಸೂರು ಡಿಎಆರ್ ಹೆಡ್‍ಕಾನ್‍ಸ್ಟೆಬಲ್ ರಾಮಚಂದ್ರ ಲೋಕೇಶ್, ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಉಸ್ಮಾನ್‍ಸಾಬ್, ಬೆಂಗಳೂರಿನ ಸಿಐಡಿ ಘಟಕದ ಹೆಡ್‍ಕಾನ್‍ಸ್ಟೆಬಲ್ ಸತೀಶ್ ಕೆಂಪಯ್ಯ ವೆಂಕಟಪ್ಪ, ಮಂಗಳೂರಿನ ಕೆಎಸ್‍ಆರ್‍ಪಿ 7ನೇ ಬೆಟಾಲಿಯನ್‍ನ ಹೆಡ್‍ಕಾನ್‍ಸ್ಟೆಬಲ್ ಪ್ರಕಾಶ್ ಶೆಟ್ಟಿ ಅವರುಗಳಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.