ಕೋಲಾರ –
ಆ ಶಾಲೆಗಿರುವುದು ಎರಡೇ ಕೊಠಡಿ ಆ ಕೊಠಡಿಯಲ್ಲೇ ಒಂದರಿಂದ ಎಂಟನೇ ತರಗತಿವರೆಗೆ ಕ್ಲಾಸ್ ಗಳು ನಡೆಯು ತ್ತವೆ.ಪೂರ್ವಕ್ಕೆ ಒಂದನೇ ತರಗತಿ ಕ್ಲಾಸ್ ನಡೆಯುತ್ತಿದ್ದರೆ, ಪಶ್ಚಿಮಕ್ಕೆ ಮೂರನೇ ತರಗತಿ,ಉತ್ತರಕ್ಕೆ ನಾಲ್ಕನೇ ತರಗತಿ, ದಕ್ಷಿಣಕ್ಕೆ ಐದನೇ ತರಗತಿ ಹೀಗೆ ಸರ್ಕಾರಿ ಶಾಲೆಯೊಂದು ಸಂತೆಯಾಗಿ ಮಾರ್ಪಾಡಾಗಿದೆ.
ಹೌದು ಒಂದೇ ಕೊಠಡಿ ದಿಕ್ಕಿಗೊಂದು ತರಗತಿ ಪೂರ್ವಕ್ಕೆ ತಿರುಗಿ ಕುಳಿತಿರುವ ಮಕ್ಕಳಿಗೆ ಒಬ್ಬ ಶಿಕ್ಷಕ ಪಾಠ ಮಾಡುತ್ತಿ ದ್ದರೆ ಪಶ್ಚಿಮಕ್ಕೆ ತಿರುಗಿ ಕುಳಿತಿರುವ ಮಕ್ಕಳಿಗೆ ಮತ್ತೊಬ್ಬ ಶಿಕ್ಷಕರಿಂದ ಪಾಠ.ದಕ್ಷಿಣಕ್ಕೆ ಒಂದು ತರಗತಿ,ಉತ್ತರಕ್ಕೆ ಮತ್ತೊಂದು ತರಗತಿ ಅಲ್ಲೇ ಕುಸಿಯುವ ಹಂತದಲ್ಲಿರುವ ಶಾಲಾ ಕಟ್ಟಡ ಇಂಥಾದೊಂದು ದೃಶ್ಯಗಳು ನೋಡಬೇಕು ಅಂದ್ರೆ ಕೋಲಾರ ತಾಲೂಕು ಸೀಪುರ ಗ್ರಾಮಕ್ಕೆ ಹೋಗ ಬೇಕು.ಸೀಪುರ ಗ್ರಾಮದಲ್ಲಿ ಒಂದರಿಂದ ಎಂಟನೇ ತರಗ ತಿಯ ವರೆಗಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಇದೆ.ಈ ಶಾಲೆಯಲ್ಲಿ ಆರು ಜನ ಶಿಕ್ಷಕರಿದ್ದರೆ ನೂರು ಜನ ಮಕ್ಕಳಿದ್ದಾರೆ ಆದರೆ ಈ ಎಲ್ಲಾ ಮಕ್ಕಳಿಗೆ ಸೇರಿ ಇರುವುದು ಎರಡೇ ಕೊಠಡಿ.ಕುರಿದೊಡ್ಡಿಯಂತೆ ಕೊಠಡಿಯಲ್ಲಿ ಕುಳಿತು ಮಕ್ಕಳು ಪಾಠ ಕಲಿಯೋದಾದ್ರು ಹೇಗೆ ಅನ್ನೋದೆ ದೊಡ್ಡ ಪ್ರಶ್ನೆ.ಬಡ ಮಕ್ಕಳೇ ಬರುವ ಶಾಲೆಗೆ ಇಂಥ ದುಸ್ಥಿತಿಅಷ್ಟಕ್ಕೂ ಸೀಪುರ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಾಗಿಯೇ ಇದೆ ಆದರೆ ಮಕ್ಕಳಿಗೆ ಈ ಶಾಲೆಯಲ್ಲಿ ಪಾಠ ಕಲಿಯಲು ಬೇಕಾದ ವ್ಯವಸ್ಥೆಗಳೇ ಇಲ್ಲ.
ಇದ್ದ ಹರುಕಲು ಮುರುಕಲು ಶಾಲಾ ಕೊಠಡಿ ಕೂಡಾ ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಮಳೆಗೆ ಕುಸಿದು ಬಿದ್ದಿದೆ. ಇದಾದ ನಂತರ ಮಕ್ಕಳಿಗೆ ಕಲಿಯಲು ಜಾಗವಿಲ್ಲದ ಕಾರಣ ಎರಡು ಕೊಠಡಿಗಳಿದ್ದ ಹಾಲಿನ ಡೈರಿ ನಡೆಯುತ್ತಿದ್ದಕ್ರಿಪ್ಕೋ ಸಮುದಾಯ ಭವನವನ್ನು ಶಾಲೆಗೆ ಬಿಟ್ಟುಕೊಟ್ಟು ಸಣ್ಣ ದಾಗಿದ್ದ ಒಂದೇ ಒಂದು ಕೊಠಡಿ ಇದ್ದ ಶಾಲಾ ಕೊಠಡಿ ಯನ್ನು ಹಾಲಿನ ಡೈರಿಯಾಗಿ ಮಾಡಿಕೊಂಡು ಮಕ್ಕಳಿಗೆ ಗ್ರಾಮಸ್ಥರು ಅನುಕೂಲ ಮಾಡಿಕೊಟ್ಟಿದ್ದಾರೆ.
ಒಂದೇ ಕೊಠಡಿಯಲ್ಲಿ ನಾಲ್ಕು ತರಗತಿಗಳು ನಂಬಲಸಾಧ್ಯ ಆದರೂ ಅದೇ ಸತ್ಯ ಹೌದು ಸೀಪುರ ಶಾಲೆಯಲ್ಲಿ ಒಂದ ರಿಂದ ಎಂಟನೇ ತರಗತಿ ವರೆಗೆ ಇದೆ ಒಂದು ಕೊಠಡಿ ಯಲ್ಲಿ ನಾಲ್ಕು ತರಗತಿ ಇನ್ನೊಂದು ಕೊಠಡಿಯಲ್ಲಿ ಐದು ತರಗತಿಗಳು ನಡೆಯುತ್ತಿವೆ ಇನ್ನು ಅಲ್ಲೇ ಊಟ ಅಲ್ಲೇ ತಿಂಡಿ ಅಲ್ಲೇ ಆಟ ಅಲ್ಲೇ ಪಾಠ ಎನ್ನುವ ಸ್ಥಿತಿ ಇದೆ.ಈ ಶಾಲೆಯ ಪರಿಸ್ಥಿತಿ ಕೇಳಿದ್ರೆ ಕಷ್ಟವಾಗುತ್ತೆ ಹೀಗಿರುವಾಗ ಅಲ್ಲಿ ಪಾಠ ಕಲಿಯುವ ಪಾಠ ಹೇಳಿಕೊಡುವವರ ಸ್ಥಿತಿ ಯನ್ನು ನಾವು ಊಹೆ ಮಾಡಿಕೊಳ್ಳೋದು ಕಷ್ಟ ಅನ್ನೋದು ಶಾಲೆಯನ್ನು ನೋಡಿದವರಲ್ಲಿ ಕೇಳಿ ಬರುತ್ತಿದೆ
ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿದೆ ಈ ಗ್ರಾಮ
ಕೋಲಾರ ಜಿಲ್ಲಾಕೇಂದ್ರಕ್ಕೆ ಕೂಗಳತೆ ದೂರದಲ್ಲಿರುವ ಸೀಪುರ ಗ್ರಾಮದಲ್ಲಿ ಒಟ್ಟು 3000 ಜನಸಂಖ್ಯೆ ಇದೆ ಬಹು ತೇಕ ಎಲ್ಲರೂ ಕೂಲಿ ಮಾಡಿ ಬದುಕುತ್ತಿರುವ ಬಡಜನರೇ ಹೆಚ್ಚು ಹೀಗಿರುವಾಗ ಎಷ್ಟೋ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಇಲ್ಲ ಎಂದು ಶಾಲೆಗೆ ಬೀಗ ಹಾಕುತ್ತಿರುವ ಇಂಥ ಕಾಲದಲ್ಲಿ ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖ ಲಾಗುತ್ತಿದ್ದಾರೆ.ಆದರೆ ಸರ್ಕಾರ ಮಾತ್ರ ಶಾಲೆಗೆ ಬೇಕಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ.ಈ ಶಾಲೆಗೆ ಕಟ್ಟಡವಿಲ್ಲ,ತರಗತಿ ಮಾಡಲು ಕೊಠಡಿ ಇಲ್ಲಾ, ಊಟದ ಕೋಣೆ ಇಲ್ಲ.ಆಟದ ಮೈದಾನವೂ ಇಲ್ಲ ಆಟ ಹೇಳಿಕೊಡಲು ಶಿಕ್ಷಕರೂ ಇಲ್ಲಾ.ಇದೆಲ್ಲದಕ್ಕಿಂತ ದುರಂತ ಎಂದರೆ ಒಂದೇ ಕೊಠಡಿಯಲ್ಲಿ ನಾಲ್ಕು ತರಗತಿಗಳು ನಡೆ ಯುತ್ತಿವೆ ಅನ್ನೋದನ್ನ ನೀವು ಊಹೆ ಮಾಡಿಕೊಳ್ಳೋದು ಕೂಡಾ ಅಸಾಧ್ಯದ ಮಾತು.ಇಂಥ ಸ್ಥಿತಿಯಲ್ಲಿದ್ದರು ಮಕ್ಕಳು ಶಾಲೆಗೆ ಬಂದು ಕಲಿಯುತ್ತಿದ್ದಾರೆ.
ಜನಪ್ರತಿನಿಧಿಗಳ ಮುಂದೆ ಅಂಗಲಾಚಿದರೂ ಪ್ರಯೋಜ ನವಾಗಿಲ್ಲಈ ಗ್ರಾಮದ ಜನರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಿ ಓದಿಸುವಷ್ಟು ಆರ್ಥಿಕವಾಗಿ ಬಲಾಢ್ಯರು ಅಲ್ಲ.ಹಾಗಾಗಿಗೆ ಗ್ರಾಮಸ್ಥರು ಶಾಸಕ ಶ್ರೀನಿವಾಸಗೌಡರ ಮನೆಯ ಬಳಿ ಹೋಗಿ ಒಂದು ಶಾಲೆ ನಿರ್ಮಾಣ ಮಾಡಿ ಕೊಡುವಂತೆ ಅಂಗಲಾಚಿದ್ದಾರೆ.ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆಯ ಬಳಿ ತಮ್ಮ ಅಳಲನ್ನು ಹೇಳಿ ಕೊಂಡಿದ್ದಾರೆ.ಆದರೆ ಯಾವುದೇ ಪ್ರಯೋಜನವಾಗಿಲ್ಲ ಕನಿಷ್ಠ ಕನಿಕರವನ್ನು ಯಾರೂ ತೋರಿಸಿಲ್ಲ.ಪರಿಣಾಮ ಈ ಹಿಂದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಕ್ಕಳು ಕೂಡಾ ಅಕ್ಕಪಕ್ಕದ ಗ್ರಾಮದ ಶಾಲೆಗಳಿಗೆ ದಾಖಲಾಗಿದ್ದರೆ.ಕೆಲವು ಮಕ್ಕಳು ಇದೇ ಕಾರಣಕ್ಕೆ ಶಾಲೆಯನ್ನೇ ಬಿಟ್ಟಿದ್ದಾರೆ.ಶಾಲೆ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುವ ಸರ್ಕಾರಗಳು ಖರ್ಚು ಮಾಡಿದ ಹಣ ಎಲ್ಲಿ ಹೋಯ್ತು ಅನ್ನೋದು ಗ್ರಾಮಸ್ಥರಾದ ನಾರಾಯಣಸ್ವಾಮಿ ಮತ್ತಿತರ ಪ್ರಶ್ನೆ.ಸೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಇಂತ ದುಸ್ಥಿತಿಯಲ್ಲಿ ಮಕ್ಕಳು ಶಾಲೆಯಲ್ಲಿ ಪಾಠ ಕಲಿಯೋ ದಾದ್ರು ಹೇಗೆ ಅನ್ನೋದು ದೊಡ್ಡ ಪ್ರಶ್ನೆ ಕಾಡುತ್ತಿದೆ ನಿಜಕ್ಕೂ ಮನುಷ್ಯತ್ವ ಇರೋ ಅಧಿಕಾರಿಗಳು ಯಾರಾದ್ರು ಶಿಕ್ಷಣ ಇಲಾಖೆಯಲ್ಲಿ ಇದ್ದಿದ್ದರೆ ಮಕ್ಕಳಿಗೆ ಇಂಥ ಪರಿಸ್ಥಿತಿ ಬರುತ್ತಿ ರಲಿಲ್ಲ.ಈಗಲಾದ್ರು ಶಿಕ್ಷಣ ಇಲಾಖೆ ಈ ಮಕ್ಕಳಿಗೆ ಶಾಲೆ ಯಲ್ಲಿ ಪಾಠ ಕಲಿಯುವ ವಾತಾವರಣ ನಿರ್ಮಾಣ ಮಾಡಿ ಕೊಡಬೇಕಿದೆ.