ಮೈಸೂರು –
ಸೋಮವಾರ ದಿಂದ ರಾಜ್ಯದಲ್ಲಿ 9 ರಿಂದ ಶಾಲಾ ಕಾಲೇಜುಗಳು ಆರಂಭದ ಬೆನ್ನಲ್ಲೇ ಪ್ರಾಥಮಿಕ ಹಂತದ 1 ರಿಂದ 8 ನೇ ತರಗತಿ ವರೆಗೆ ವರ್ಗಗಳನ್ನು ಆಗಸ್ಟ್ 30 ರಿಂದ ಆರಂಭಿಸೊದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಅವರು ಶಾಲೆ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದರು.

ಒಂದು ವೇಳೆ ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟರೆ ಒಂದು ವಾರ ತರಗತಿ ಅಮಾನತು ಮಾಡಲಾಗುತ್ತದೆ.ಸ್ಯಾನಿಟೈಸ್ ಮಾಡಿ ವಾರದ ನಂತರ ಮತ್ತೆ ತರಗತಿಗಳನ್ನು ಆರಂಭಿಸಲಾಗುವುದು ಶಾಲೆ ಆರಂಭಿಸುವುದರಲ್ಲಿ ರಿಸ್ಕ್ ಇದೆ ಆದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ತಜ್ಞರ ಅಭಿಪ್ರಾಯದಂತೆ ಶಾಲೆಗಳನ್ನು ಆರಂಭ ಮಾಡಲಾ ಗುತ್ತಿದೆ ಎಂದರು.

ಇನ್ನೂ ಕೊರೋನಾ ಮಕ್ಕಳ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ ಪ್ರಾಣಹಾನಿಯಂತಹ ಸಮಸ್ಯೆಗಳು ಎದುರಾಗುವುದಿಲ್ಲ.ಒಂದರಿಂದ ಎಂಟನೇ ತರಗತಿಯನ್ನೂ ಕೂಡ ಶೀಘ್ರದಲ್ಲೇ ಅಂದರೆ ಆಗಸ್ಟ್ 30 ರಿಂದ ಆರಂಭಿಸುವ ಯೋಚನೆ ಇದೆ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಕೋವಿಡ್ ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡುವುದಿಲ್ಲ. ಆ ಮಕ್ಕಳಿಗೆ ಪರ್ಯಾಯ ಶಿಕ್ಷಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.