This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

2021-22 ನೇ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮುಖ್ಯ ಶಿಕ್ಷಕರು ಶಿಕ್ಷಕರು ಏನು ಮಾಡಬೇಕು ಗೊತ್ತಾ DSERT ನ ಸೂಚನೆ ಗಳೊಂದಿಗೆ ಕಂಪ್ಲೀಟ್ ಮಾಹಿತಿ

WhatsApp Group Join Now
Telegram Group Join Now

ಬೆಂಗಳೂರು –

ಮುಖ್ಯ ಶಿಕ್ಷಕರಿಗೆ ನಮಸ್ಕಾರಗಳು 2021-22 ನೇ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮುಖ್ಯಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳು.
👉 ದಿನಾಂಕ 05.04.2022 ರಂದು ಶಾಲೆಯಲ್ಲಿ ಡಾ.ಬಾಬುಜಗಜೀವನರಾಮ್ ಜಯಂತಿಯನ್ನು ಆಚರಿಸುವುದು
👉 14.04.2022 ರಂದು ಡಾ. ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಎಲ್ಲಾ ಶಾಲೆಗಳಲ್ಲಿ ತಪ್ಪದೇ ಆಚರಿಸಲು ವ್ಯವಸ್ಥೆ ಮಾಡಿಕೊಳ್ಳುವುದು.
👉 09.04.2022 ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ನಿರ್ವಹಿಸುವುದು.
👉 ದಿನಾಂಕ 09.04.2022 ರೊಳಗೆ SATS ತಂತ್ರಾಂಶದಲ್ಲಿ FA1,FA2,FA3, FA4 ರೂಪಣಾತ್ಮಕ ಮೌಲ್ಯಮಾಪನದ ಶ್ರೇಣಿಗಳನ್ನು 15 ಅಂಕಗಳಿಗೆ ಸೀಮಿತಗೊಳಿಸಿ ದಾಖಲಿಸುವುದು.
👉 SA 2 ನಲ್ಲಿ 40 ಅಂಕಗಳಿಗೆ ಸೀಮಿತಗೊಳಿಸಿ ಶ್ರೇಣಿ ಕಂಡು ಹಿಡಿದು SATS ನಲ್ಲಿ ದಾಖಲಿಸುವುದು..
👉ಜುಲೈ ತಿಂಗಳಿನಿಂದ ಏಪ್ರಿಲ್ 9 ರವರೆಗೆ ಹಾಜರಾತಿಯನ್ನು ತಪ್ಪದೇ SATS ತಂತ್ರಾಂಶದಲ್ಲಿ ದಾಖಲಿಸುವುದು..
👉 16.05.2022 ರಿಂದ ತರಗತಿ 1 ರಿಂದ 9 ರವರೆಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ಇದ್ದು ಪ್ರತಿ ಶಿಕ್ಷಕರಿಗೆ ವಿಷಯವಾರು 2 ದಿನದ ತರಬೇತಿಯನ್ನು ರಜಾ ಅವಧಿಯಲ್ಲಿ ಪಡೆಯಬೇಕು.
👉 ಪ್ರತಿ ಮುಖ್ಯಶಿಕ್ಷಕರು ಕಲಿಕಾ ಚೇತರಿಕೆ ತರಬೇತಿಗೆ ತಮ್ಮ ಶಾಲೆಯ ಶಿಕ್ಷಕರನ್ನು ನಿಯೋಜಿಸಬೇಕಾಗಿರುವುದರಿಂದ ಸಹ ಶಿಕ್ಷಕರೊಂದಿಗೆ ದೂರವಾಣಿ ಸಂಪರ್ಕದಲ್ಲಿರುವುದು.
👉 ಕ್ರೂಡಿಕೃತ ಅಂಕವಹಿಯಲ್ಲಿ ಅಂಕಗಳು ಹಾಗೂ ಶ್ರೇಣಿಗಳನ್ನು ದಾಖಲಿಸಿ ಘೋಷ್ವಾರೆ ಹಾಕಿ ಪೂರ್ಣಗೊಳಿಸುವುದು.
👉 ನಲಿ ಕಲಿ ಪ್ರಗತಿ ನೋಟದಲ್ಲಿ ಪ್ರಗತಿಯನ್ನು ಪೂರ್ಣಗೊಳಿಸಲು ಕ್ರಮವಹಿಸುವುದು.
👉BOOK BANK ಸ್ಥಾಪನೆಗೆ ಕ್ರಮ ಕೈಗೊಳ್ಳುವುದು..
👉 ಉಳಿದ ಆಹಾರ ದಾಸ್ತಾನನ್ನು ಸುರಕ್ಷಿತವಾಗಿಡಲು ಕ್ರಮವಹಿಸುವುದು.
👉 DBT ಮೂಲಕ ಮಕ್ಕಳ ಖಾತೆಗೆ ಹಣ ಜಮೆಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
👉14.05.2022 ರಂದು 2022-23ನೇ ಶೈಕ್ಷಣಿಕ ಸಾಲಿನ ಪ್ರಾರಂಭದ ಸಿದ್ಧತೆಗೆ ಸ್ವಚ್ಛತೆ ದಾಖಲೆಗಳ ನಿರ್ವಹಣೆಗೆ ಕ್ರಮವಹಿಸುವುದು
👉16.05.2022 ರಿಂದ 2022-23ನೇ ಶೈಕ್ಷಣಿಕ ಸಾಲಿನ ಆರಂಭ
👉 ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಗ್ರಾಮಗಳಲ್ಲಿ ಸಂಚರಿಸಿ 5 ವರ್ಷ 5 ತಿಂಗಳು ತುಂಬಿರುವ ಮಕ್ಕಳನ್ನು ನಿಗದಿತ ನಮುನೆಯಲ್ಲಿ ದಾಖಲಾತಿ ದಿನಾಂಕ ಬಿಟ್ಟು ಉಳಿದ ಮಾಹಿತಿಗಳನ್ನು ತುಂಬಿ ಕೂಡಲೇ ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸುವುದು.
ಮೇಲಿನ ಎಲ್ಲ ಅಂಶಗಳು .DSERT ಯ ದಿನಾಂಕ 23.02.2022 ರ ಆದೇಶದಲ್ಲಿ ಉಲ್ಲೇಖಿಸಿದಂತೆ ತಿಳಿಸಲಾಗಿದೆ


Google News

 

 

WhatsApp Group Join Now
Telegram Group Join Now
Suddi Sante Desk