ಕೊರಟಗೆರೆ –
ಓರ್ವ ಶಿಕ್ಷಕರು ಸೇರಿದಂತೆ 22 ಜನ ವಿದ್ಯಾರ್ಥಿನಿಯರಲ್ಲಿ ಕರೋನ ಪಾಸಿಟಿವ್ ಕಂಡು ಬಂದ ಘಟನೆ ತುಮಕೂರಿನ ಕೊರಟಗೆರೆ ಯಲ್ಲಿ ಕಂಡು ಬಂದಿದೆ. ಸದ್ಯಕ್ಕೆ ತಮ್ಮ ತಮ್ಮ ಮನೆಗಳಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸುವಂತೆ ವೈದ್ಯರು ಅವರ ಪೋಷಕರಿಗೆ ತಿಳಿಸಿದ್ದಾರೆ ತುಮಕೂರು ಜಿಲ್ಲೆಯ ಕೊರಟಗೆರಿ ಪಟ್ಟಣದ ಬೆಸ್ಕಾಂ ಇಲಾಖೆ ಮುಂಭಾಗದಲ್ಲಿ ರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಓರ್ವ ವಿದ್ಯಾರ್ಥಿ ನಿಗೆ ಕೆಮ್ಮು ನೆಗಡಿ ಜ್ವರ ಇದ್ದ ಕಾರಣ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿದೆ. ಎಚ್ಚೆತ್ತುಕೊಂಡ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಅದೇ ತರಗತಿಯಲ್ಲಿ ಓದುತ್ತಿದ್ದ ಎಲ್ಲ ಮಕ್ಕಳಿಗೂ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ತಿಳಿಸಿ ತಪಾಸಣೆ ನಡೆಸಲು ತಿಳಿಸಿದ್ದಾರೆ
ಶಾಲೆಗೆ ಆಗಮಿಸಿದ ವೈದ್ಯರ ತಂಡ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿನಿಯರಿಗೂ ತಪಾಸಣೆ ನಡೆಸಿದ್ದಾರೆ 178ಜನ ವಿದ್ಯಾರ್ಥಿನಿಯರಲ್ಲಿ 21 ಜನ ವಿದ್ಯಾರ್ಥಿನಿಯರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದಿದೆ.ಓರ್ವ ಶಿಕ್ಷಕರು ಸೇರಿದಂತೆ 22 ಜನ ವಿದ್ಯಾರ್ಥಿ ನಿಯರು ಸದ್ಯಕ್ಕೆ ತಮ್ಮ ತಮ್ಮ ಮನೆಗಳಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸುವಂತೆ ವೈದ್ಯರು ಅವರ ಪೋಷಕರಿಗೆ ತಿಳಿಸಿದ್ದಾರೆ
ಈ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8ನೇ ತರಗತಿ 9ನೇ ತರಗತಿ ಹಾಗೂ 10ನೇ ತರಗತಿಯಲ್ಲಿ ಸುಮಾರು 582ಜನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಎನ್.ಎಸ್ ಮಾತನಾಡಿ ಶಾಲೆಯ ಎಲ್ಲಾ ಮಕ್ಕಳನ್ನು ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಲು ಶಿಕ್ಷಕರಿಗೆ ಪೋಷಕರಿಗೆ ತಿಳಿಸಲಾಗಿದೆ ಶಾಲೆಯ ಪಕ್ಕದಲ್ಲಿರುವ ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿಗಳಿ ಗೂ ಪರೀಕ್ಷೆ ಮಾಡಿಸಲು ಸಂಬಂಧಿಸಿದ ವಾರ್ಡನ್ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ