BPL ಕಾರ್ಡ್ ಪಡೆದ ರಾಜ್ಯದ 21,232 ಸರ್ಕಾರಿ ನೌಕರರು – ಕೋಟಿ ಕೋಟಿ ರೂಪಾಯಿ ದಂಡ ವಸೂಲಿ…..

Suddi Sante Desk
BPL ಕಾರ್ಡ್ ಪಡೆದ ರಾಜ್ಯದ 21,232 ಸರ್ಕಾರಿ ನೌಕರರು – ಕೋಟಿ ಕೋಟಿ ರೂಪಾಯಿ ದಂಡ ವಸೂಲಿ…..

ಬೆಂಗಳೂರು

ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 4.6 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಂದ 13.5 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದೆ.ಹೌದು ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಗಳ ಇಲಾಖೆಯು 4.6 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಂದ 13.5 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದೆ.

ವಿಪರ್ಯಾಸವೆಂದರೆ 21,232 ಸರ್ಕಾರಿ ನೌಕರರೇ  ಬಿಪಿಎಲ್ ಕಾರ್ಡ್ ಪಡೆದಿದ್ದರು ಎಂಬುದು ಬೆಳಕಿಗೆ ಬಂದಿದ್ದು ಅವರಿಂದ 11.2 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

ನಕಲಿ ಬಿಪಿಎಲ್​ ಕಾರ್ಡ್​​​ ಹೊಂದಿರುವವರ ವಿರುದ್ಧ 2021ರ ಫೆಬ್ರವರಿ ತಿಂಗಳಿನಿಂದಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಈಗಲೂ ಕಾರ್ಯಾಚರಣೆ ಮುಂದುವರಿಸಲಾ ಗಿದ್ದು ಆಧಾರ್ ಸಂಖ್ಯೆಗಳನ್ನು ಬಳಸಿಕೊಂಡು ವಿವಿಧ ಇಲಾಖೆಗಳಿಂದ ಅಂತಹ ಅನರ್ಹ ಫಲಾನುಭವಿಗಳ ಡೇಟಾವನ್ನು ಸಂಗ್ರಹಿಸಲಾ ಗುತ್ತಿದೆ ಎಂದು ಹೆಚ್ಚುವರಿ ನಿರ್ದೇಶಕ (ವಿಜಿಲೆನ್ಸ್ ಮತ್ತು ಸಾರ್ವಜನಿಕ ವಿತರಣೆ) ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಗೆ ಸಾರಿಗೆ ಇಲಾಖೆಯಿಂದಲೂ ಸಹಾಯವನ್ನು ಕೋರಿದ್ದೇವೆ. 12,583 ಬಿಪಿಎಲ್ ಫಲಾನುಭವಿಗಳು ಐಷಾರಾಮಿ 4 ಚಕ್ರ ವಾಹನಗ ಳನ್ನು ಹೊಂದಿರುವುದು ತಿಳಿದುಬಂದಿದೆ. ಮೂರು ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ 2.9 ಲಕ್ಷ ರೈತರು ಸಹ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವುದನ್ನು ನಾವು ಕಂಡುಕೊಂಡಿದ್ದೇವೆ.

ನಮ್ಮ ಅಧಿಕಾರಿಗಳು 2,679 ಅನರ್ಹ ಫಲಾ ನುಭವಿಗಳನ್ನು ಪತ್ತೆಹಚ್ಚಿದ್ದಾರೆ. ವಾರ್ಷಿಕ 1.2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ 50,000 ಜನರನ್ನು ಆದಾಯ ತೆರಿಗೆ ಇಲಾಖೆಯ ದತ್ತಾಂಶಗಳಿಂದ ನಾವು ಪತ್ತೆಹಚ್ಚಿದ್ದೇವೆ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ನೌಕರರನ್ನು ಶಿಕ್ಷಿಸಲು ಕೇವಲ ದಂಡ ವಿಧಿಸುವುದಷ್ಟೇ ಸಾಕೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಮೊದಲ ನಿದರ್ಶನ ವಾಗಿರುವುದರಿಂದ ಹಾಗೆ ಮಾಡಲಾಗಿದೆ. ಭಾರೀ ದಂಡ ವಿಧಿಸಿದ ನಂತರವಷ್ಟೇ ಅವರನ್ನು ಕ್ಷಮಿಸ ಲಾಗಿದೆ ಎಂದು ಹೇಳಿದ್ದಾರೆ.

ಅಂತಹ 21,232 ನೌಕರರ ಪೈಕಿ 17,521 ಮಂದಿ ಈಗಾಗಲೇ ತಮ್ಮ ಪಡಿತರ ಚೀಟಿಯನ್ನು ಎಪಿಎಲ್ ವರ್ಗಕ್ಕೆ ಪರಿವರ್ತಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ದಂಡವನ್ನು ವಿಧಿಸುವಾಗ, ನಾವು ಅವರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ದ್ದೇವೆ. ಸರ್ಕಾರಿ ನೌಕರರು, ಸಿಬ್ಬಂದಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.