ಕಲಬುರಗಿ –
ಸಾಮಾನ್ಯವಾಗಿ ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಶಾಲೆ ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಇದರ ನಡುವೆ ರಾಜ್ಯದ ಅದೆಷ್ಟೋ ಸರ್ಕಾರಿ ಶಾಲೆಗಳು ಮೂಲಭೂತ ಸೌಲಭ್ಯಗ ಳಿಂದ ವಂಚಿತವಾಗಿವೆ ಎನ್ನೊದಕ್ಕೆ ಈ ಶಾಲೆಯೇ ಸಾಕ್ಷಿ ಹೌದು ಕಲಬುರಗಿ ಜಿಲ್ಲೆಯ ಅಫಜಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ 1ರಿಂದ 7ನೇ ತರಗತಿಯ ಒಟ್ಟು 215 ವಿದ್ಯಾರ್ಥಿ ಗಳಿಗೂ ಒಂದೇ ಕೊಠಡಿಯಲ್ಲಿ ಒಬ್ಬರೇ ಶಿಕ್ಷಕರು ಪಾಠ ಹೇಳುತ್ತಿದ್ದಾರೆ.
ಈಚೆಗೆ ಐವರು ಅತಿಥಿ ಶಿಕ್ಷಕರ ನೇಮಕ ವಾಗಿದ್ದರೂ ಕೂಡಾ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ ಕೇಳು ವುದು ತಪ್ಪಿಲ್ಲ.ಹೀಗಾದರೆ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹೇಗಾಗುತ್ತದೆ ಎಂದು ಸಾಗನೂರು ಮತ್ತು ಸುತ್ತಲಿನ ಗ್ರಾಮಗಳ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಗನೂರು ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ ಒಟ್ಟು 215 ಮಕ್ಕಳಿದ್ದಾರೆ.ಅಚ್ಚರಿ ಸಂಗತಿ ಎಂದರೆ ಎಲ್ಲ ವಿಷಯಗಳ ಕುರಿತು ಮುಖ್ಯಶಿಕ್ಷಕ ನದಾಫ್ ಒಬ್ಬರೇ ಪಾಠ ಮಾಡುತ್ತಿದ್ದಾರೆ.ಈಗ ಐವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.