ಬೆಂಗಳೂರು –
ಎರಡು ವರುಷಗಳಿಂದ ಹಲವಾರು ಕಾರಣಗಳಿಂದ ನಿಲ್ಲಿಸಲಾಗಿದ್ದ ಮುಖ್ಯಮಂತ್ರಿ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು.ಪೋಲಿಸ್ ಇಲಾಖೆಯಲ್ಲಿ ಅಪ್ರತಿಮ ಸೇವೆ, ಗಣನೀಯ ಕಾರ್ಯ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಮುಖ್ಯಮಂತ್ರಿ ಪದಕಗಳನ್ನು ಪ್ರಧಾನ ಮಾಡಿ ಗೌರವಿಸಲಾಯಿತು.
1982 ರಿಂದ ಇಲಾಖೆಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದ್ದಿಗಳಿಗೆ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದೆ. ಅಂದಿನಿಂದ ಜಾರಿಗೆ ಬಂದಿರುವ ಈ ಒಂದು ಪ್ರಶಸ್ತಿ ಈಗಲೂ ಪೊಲೀಸ್ ಇಲಾಖೆ ಮುಂದುವರೆಸಿಕೊಂಡು ಬಂದಿದೆ.
ಪ್ರತಿ ವರುಷ ಇಲಾಖೆಯಲ್ಲಿನ ಅಧಿಕಾರಿಗಳ ಮತ್ತು ಸಿಬ್ಬಂದ್ದಿಗಳಿಗೆ ಈ ಒಂದು ಪ್ರಶಶ್ತಿಗಳನ್ನು ನೀಡಲು ಜಾರಿಗೆ ಬಂದಿರುತ್ತದೆ.ಇನ್ನೂ ಪೊಲೀಸ್ ಇಲಾಖೆಯಲ್ಲಿನ ಸಾಧನೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಕೊಡಮಾಡುವ ಪ್ರಶಸ್ತಿ ಇದಾಗಿದ್ದು 2017 ಮತ್ತು 2018ನೇ ಸಾಲಿನಲ್ಲಿ ಘೋಷಣೆಯನ್ನು ಮಾಡಲಾಗಿದ್ದ ಪ್ರಶಸ್ತಿಗಳನ್ನು ಇಂದು ಬೆಂಗಳೂರಿನಲ್ಲಿ ವಿತರಣೆ ಮಾಡಲಾಗಿತು.
ಬೆಂಗಳೂರಿನ ಶಕ್ತಿ ಸೌಧದ ಬ್ಯಾಂಕ್ಟೇಟ್ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ 227 ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದ್ದಿಗಳಿಗೆ ಇಂದು ನಡೆದ 2017 ಹಾಗೂ 2018 ನೇ ಸಾಲಿನ ಮುಖ್ಯಮಂತ್ರಿಯವರ ಪದಕವನ್ನು ಪ್ರಧಾನ ಮಾಡಲಾಯಿತು. ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಪ್ರಶಸ್ತಿಗೆ ಭಾಜನರಾದ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪದಕ ಪ್ರಧಾನ ಮಾಡಿದರು.
ದಕ್ಷತೆ ಪ್ರಾಮಾಣಿಕ ಹಾಗೂ ಕರ್ತವ್ಯ ನಿಷ್ಠೆಯಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದ್ದಿಗಳಿಗೆ ಇಂದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. 2010ರ ಬ್ಯಾಚ್ ನ ಪೊಲೀಸ್ ಅಧಿಕಾರಿ ಸಧ್ಯ ಬೆಳಗಾವಿಯ ವಿಶೇಷ ಘಟಕದಲ್ಲಿ ಕರ್ತವ್ಯ ಮಾಡುತ್ತಿರುವ ಪರಶುರಾಮ ಸಿದ್ದಪ್ಪ ಪೂಜಾರಿ ಇವರಿಗೂ ಕೂಡಾ ಇಂದು ಮುಖ್ಯಮಂತ್ರಿ ಪದಕವನ್ನು ನೀಡಿ ಗೌರವಿಸಲಾಯಿತು.
ಹನ್ನೊಂದು ವರುಷಗಳ ಕಾಲ ಇಲಾಖೆಯಲ್ಲಿ ಕರ್ತವ್ಯ ಮಾಡಿರುವ ಪರಶುರಾಮ ಪೂಜಾರಿ ಬೆಳಗಾವಿ ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸವನ್ನು ಮಾಡಿ ಈಗ ಬೆಳಗಾವಿಯ ವಿಶೇಷ ಘಟಕದಲ್ಲಿ ಡೂಟಿ ಮಾಡ್ತಾ ಇದ್ದಾರೆ. ಇವರ ದಕ್ಷ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ 2017 ರಲ್ಲಿಯೇ ಇವರಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿತ್ತು .
ಹಲವಾರು ಕಾರಣಗಳಿಂದ ನಿಲ್ಲಿಸಲಾಗಿದ್ದು ಈ ಒಂದು ಪ್ರಶಸ್ತಿಯನ್ನು ಇಂದು ಪರಶುರಾಮ ಸಿದ್ದಪ್ಪ ಪೂಜಾರಿ ಅವರು ಸ್ವೀಕಾರ ಮಾಡಿದರು. ಪತ್ನಿ ರೂಪಾ ಮತ್ತು ಮಕ್ಕಳಾದ ದೀಯಾ ಮತ್ತು ಜಾನವಿ ಇವರೊಂದಿಗೆ ಬೆಂಗಳೂರಿಗೆ ತೆರಳಿ ಕುಟುಂಬ ಸಮೇತರಾಗಿ ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು.
ಇನ್ನೂ ನವಲಗುಂದ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ ಇವರಿಗೂ CM ಪ್ರಶಸ್ತಿ ನೀಡಲಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಸಚಿವ ಬಸವರಾಜ ಬೊಮ್ಮಾಯಿ ,ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಪೊಲೀಸ್ ಅಧಿಕಾರಿಗಳಾದ ಪರಶುರಾಮ ಪೂಜಾರಿ ಮಲ್ಲಯ್ಯ ಮಠಪತಿ ,ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿ ವರ್ಗದವರಿಗೆ ಎರಡು ವರ್ಷಗಳ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿ ಅಭಿನಂದಿಸಿದರು.ವಿಶೇಷ ಎಂದರೆ ಮಠಪತಿ ಸಹೋದರರು ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಒಟ್ಟಾರೆ ದಕ್ಷತೆ ಮತ್ತು ಪ್ರಾಮಾಣಿಕತೆ ಮುಖ್ಯಮಂತ್ರಿ ಪದಕ ಬಂದಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪದಕಗಳು ಪ್ರಶಸ್ತಿಗಳು ನಮ್ಮ ಪೊಲೀಸ್ ಅಧಿಕಾರಿಗಳಿಗೆ ಬರಲಿ .
ಇನ್ನೂ ಪೋಲಿಸ್ ಇಲಾಖೆಯಲ್ಲಿ ಅಪ್ರತಿಮ ಸೇವೆ, ಗಣನೀಯ ಕಾರ್ಯ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಸನ್ಮಾನ್ಯ ಮುಖ್ಯಮಂತ್ರಿಯವರು ಪದಕಗಳನ್ನು ಪ್ರಧಾನ ಮಾಡುವ ಮೂಲಕ 1982 ರಿಂದ ಜಾರಿಗೆ ಬಂದಿರುವ ಈ ಒಂದು ಪ್ರಶಸ್ತಿ ವಿತರಣೆಗೆ ಮೆರಗು ನೀಡಿ ಇತಿಹಾಸವನ್ನು ಮುಂದುವರೆಸಿಕೊಂಡು ಬಂದರು.ಇನ್ನೂ ಇತ್ತ ಎಎಮ್ ಪ್ರಶಸ್ತಿಗೆ ಭಾಜನರಾದ ಅಧಿಕಾರಿಗಳ ಸಿಬ್ಬಂದಿ ಗಳು ತಮ್ಮ ತಮ್ಮ ಸಾಹೇಬ್ ರಿಗೆ ಅಭಿನಂದನೆಗಳನ್ನು ಹೇಳಿ ಶುಭಾಶಯಗಳನ್ನು ಹೇಳಿದರು.