ಆ ಯುವತಿಯ ಮನೆಯಲ್ಲಿ 23 ಲಕ್ಷ ರೂಪಾಯಿ ಪತ್ತೆ – ವಾಸವಿದ್ದ ಪಿಜಿ ಯ ರೂಮ್ ನಲ್ಲಿ SIT ಅಧಿಕಾರಿಗಳಿಗೆ ಪತ್ತೆಯಂತೆ…..!

Suddi Sante Desk

ಬೆಂಗಳೂರು –

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ ಸಿಡಿ ಪ್ರಕರಣದ ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡಕ್ಕೆ ದಿನಕ್ಕೊಂದು ಮಾಹಿತಿ ಗಳು ಸಿಗುತ್ತಿವೆ.ತನಿಖೆ ಆರಂಭ ಮಾಡಿರುವ ಅಧಿಕಾರಿ ಗಳು ಈಗಾಗಲೇ ಯುವತಿ ಸೇರಿದಂತೆ ಹಲವರಿಗೆ ನೋಟೀಸ್ ಜಾರಿ ಮಾಡಿದ್ದು ಇವೆಲ್ಲದರ ನಡುವೆ ಈಗ ಮತ್ತೊಂದು ಬೆಳವಣಿಗೆಯಾಗಿದೆ.ಹೌದು ಈವರೆಗೆ ನೀಡಿದ ಯಾವುದೇ ನೋಟೀಸ್ ಗೂ ಉತ್ತರಿಸದ ಹಿನ್ನೆಲೆಯಲ್ಲಿ SIT ಅಧಿಕಾರಿಗಳು ಯುವತಿ ವಾಸವಿದ್ದ RT ನಗರದ ಪಿಜಿ ಮೇಲೆ ದಾಳಿ ಮಾಡಿದ್ದಾರೆ. ಪಿಜಿ ಯನ್ನು ಜಾಲಾಡಿದ ತಂಡಕ್ಕೆ ಯುವತಿಯ ರೂಮಿ ನಲ್ಲಿ 23 ಲಕ್ಷ ರೂಪಾಯಿ ಸಿಕ್ಕಿವೆಯಂತೆ.ವಾಸವಿದ್ದ ಕೋಣೆಯಲ್ಲಿ ಅಧಿಕಾರಿ ಗಳಿಗೆ ಕಂತೆ ಕಂತೆ ಹಣ ಸಿಕ್ಕಿದ್ದು ಸಧ್ಯ ಆ ಒಂದು ಹಣವನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು ಅಜ್ಞಾತ ಸ್ಥಳದಲ್ಲೇ ಇರುವ ಯುವತಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ.ಆದರೂ ಕೂಡಾ ಈವರೆಗೆ ಯುವತಿಯ ಸುಳಿವು ಮಾತ್ರ ಸಿಗುತ್ತಿಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.