ಕೊಪ್ಪಳ –
ಹೌದು ಇಂತಹದೊಂದು ಅಮಾನುಷ ಕೃತ್ಯ ವೊಂದು ಕೊಪ್ಪಳ ಜಿಲ್ಲೆಯಲ್ಲಿ ಕಂಡು ಬಂದಿದೆ ತನಗೆ 25 ವರ್ಷ ಕಳೆದರೂ ಇನ್ನೂ ಕೂಡಾ ಮದುವೆ ಮಾಡಲಿಲ್ಲ ಎಂಬ ಸಿಟ್ಟಿನಲ್ಲಿ ತಮ್ಮ ನೊಬ್ಬ ಅಣ್ಣನನ್ನೇ ಕೊಲೆ ಮಾಡಿದ್ದಾನೆ.ಜಿಲ್ಲೆಯ ಕುಷ್ಟಗಿ ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಯಮನೂರಪ್ಪ ಕಡಿವಾಲರ ಸ್ವಂತ ತಮ್ಮನಿಂ ದಲೇ ಹತ್ಯೆಗೀಡಾದ ಅಣ್ಣನಾಗಿದ್ದಾನೆ.ಆರೋಪಿ ಮಲ್ಲಪ್ಪ ಕಡಿವಾಲರ ಅಣ್ಣನೊಂದಿಗೆ ಅನ್ಯೋನ್ಯ ವಾಗಿಯೇ ಇದ್ದ ಆದರೆ ಮನೆಯಲ್ಲಿ ಆಸ್ತಿ ಹಂಚಿಕೆ ಮಾಡು ಅಂತ ಆಗಾಗ ಅಣ್ಣನ ಜೊತೆ ಜಗಳ ಮಾಡಿಕೊಳ್ಳುತ್ತಿದ್ದ ಆಸ್ತಿಯನ್ನು ಕೂಡಾ ಹಂಚಿಕೆ ಮಾಡಲಾಗಿತ್ತು ಇದಾದ ಬಳಿಕ 25 ವರ್ಷ ವಯ ಸ್ಸಾದ್ರು ನನಗೆ ಇನ್ನೂ ಮದುವೆ ಮಾಡಿಲ್ಲ ಮದುವೆ ಮಾಡಿಸಿ ಎಂದು ಅಣ್ಣನೊಂದಿಗೆ ಗಲಾಟೆ ಮಾಡಲು ಆರಂಭಿಸಿದ್ದಾನೆ.
ಗಲಾಟೆ ಆರಂಭಿಸಿ ತಾನು ಹುಡುಗಿಯೊಬ್ಬಳನ್ನು ನೋಡಿದ್ದೆನೆ ಅವಳೊಟ್ಟಿಗೆ ಮದುವೆ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾನೆ ಈ ವೇಳೆ ಮಾತಿಗೆ ಮಾತು ಬೆಳೆದು ಅಣ್ಣ ಯಮನೂರಪ್ಪನಿಗೆ ಕಟ್ಟಿಗೆ ಹಾಗೂ ಚಾಕುವಿನಿಂದ ಇರಿದು ಭರ್ಬರವಾಗಿ ಕೊಲೆ ಮಾಡಿದ್ದಾನೆ.ಸಾವನ್ನಪ್ಪಿರುವ ಯಮನೂ ರಪ್ಪ ಸೇರಿ ನಾಲ್ಕು ಜನ ಸಹೋದರರಿದ್ದಾರೆ.
ಮೂರು ಜನರಿಗೆ ಈಗಾಗಲೇ ಮದುವೆಯಾಗಿದ್ದು ಕೊನೆಯ ಸಹೋದರ ಮಲ್ಲಪ್ಪನಿಗೆ ಮನೆಯಲ್ಲಿ ಮದುವೆ ಮಾಡಿಸಲು ಮುಂದಾದಾಗ ನಿರಾಕರಿ ಸಿದ್ದ ಆದರೆ ಒಂದು ವರ್ಷದ ನಂತರ ಮದುವೆ ಮಾಡಸುವಂತೆ ದುಂಬಾಲು ಬಿದ್ದಿದ್ದ ಊರಲ್ಲಿ ಜಾತ್ರೆ ಇರುವ ಕಾರಣ ಜಾತ್ರೆಯೆಲ್ಲ ಮುಗಿದ ಬಳಿಕ ಮಾತನಾಡಿ ತೀರ್ಮಾನ ತಗೆದುಕೊಳ್ಳುವ ಮುನ್ನವೇ ಈ ಒಂದು ಕೊಲೆ ನಡೆದಿದೆ.
ಇನ್ನೂ ಸುದ್ದಿ ಯನ್ನು ತಿಳಿದ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಆರೋಪಿಯನ್ನು ಬಂಧನ ಮಾಡಿ ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..