ರಾಜ್ಯ ಸಾರಿಗೆ ಇಲಾಖೆಗೆ CM ಬಜೆಟ್ ನಲ್ಲಿ ಬಂಪರ್ ಕೊಡುಗೆ – ನೌಕರರಿಗೆ ಇಲಾಖೆಗೆ ಬಜೆಟ್ ನಲ್ಲಿ ಕೊಟ್ಟಿದ್ದು ಏನೇನು ನೋಡಿ…..

Suddi Sante Desk
ರಾಜ್ಯ ಸಾರಿಗೆ ಇಲಾಖೆಗೆ CM ಬಜೆಟ್ ನಲ್ಲಿ ಬಂಪರ್ ಕೊಡುಗೆ – ನೌಕರರಿಗೆ ಇಲಾಖೆಗೆ ಬಜೆಟ್ ನಲ್ಲಿ ಕೊಟ್ಟಿದ್ದು ಏನೇನು ನೋಡಿ…..

ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ದಾಖಲೆಯ 17ನೇ ಬಜೆಟ್ ಮಂಡಿಸಿ ರುವ ಸಿದ್ದರಾಮಯ್ಯ, ಹಲವು ಜನಪರ ಯೋಜನೆಗಳನ್ನ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.ಸಾರಿಗೆ ನೌಕರರಿಗೂ ಸಿಹಿಸುದ್ದಿ ನೀಡಿದ್ದಾರೆ.1-4-2025 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಲು ನಿರ್ಣಯಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ವೇತನ ಬಾಕಿ ಪಾವತಿಗಾಗಿ 1271 ಕೋಟಿ ಮೀಸಲಿಡುವುದಾಗಿ ಸಿಎಂ ತಿಳಿಸಿದ್ದಾರೆ.

1-1-2021ರಿಂದ 28-02-2023ರ ವರೆಗಿನ ವೇತನ ಬಾಕಿ ಪಾವತಿ ಶೀಘ್ರದಲ್ಲೇ ಜಾರಿಗೆ ಬರಲಿದೆ.ಸಾರಿಗೆ ನಿಗಮಗಳ ಸೇವೆಯನ್ನು ಉತ್ತಮ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಘೋಷಿಸಿದ್ದಾರೆ. ಹಿಂದಿನ ಬಜೆಟ್​​ನಲ್ಲಿ ಘೋಷಿಸಿದ 200 ಡಿಸೇಲ್​ನ ಬಸ್ಸುಗಳ ನೇರ ಖರೀದಿಗೆ ಕ್ರಮ ತೆಗೆದುಕೊಳ್ಳು  ವುದಾಗಿ ಸಿಎಂ ಘೋಷಿಸಿದ್ದಾರೆ.

ಇದು ಸೇರಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6596 ಸಂಖ್ಯೆಯ ಬಸ್ಸುಗಳನ್ನು ನಿಗಮಗಳಿಗೆ ಒದಗಿಸಲಾಗಿದೆ. 2026-27ನೇ ಸಾಲಿನಲ್ಲಿ 1000 ಡೀಸೆಲ್ ಬಸ್ಸುಗಳ ಒದಗಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.