ತುಮಕೂರು –
ಪರೀಕ್ಷೆ ಇಲ್ಲದೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪಾಸ್ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಸಂಭ್ರಮಾಚರಣೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.ಪಾಸ್ ಮಾಡಿ ದ್ದಕ್ಕಾಗಿ ಸಂಭ್ರಮಾಚರಣೆ ಮಾಡಿ ಪಟಾಕಿ ಸಿಡಿಸಿದ ವಿದ್ಯಾರ್ಥಿಗಳು ಎಂಜಾಯ್ ಮಾಡಿದರು

ತಿಪಟೂರು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈ ಒಂದು ಘಟನೆ ನಡೆದಿದೆ.ತುಮ ಕೂರು ಜಿಲ್ಲೆ ತಿಪಟೂರಿನ ಕಾಲೇಜಿನಲ್ಲಿ ವಿದ್ಯಾರ್ಥಿ ಗಳು ವಿಜಯೋತ್ಸವ ಮಾಡಿದರು

ಸುಮಾರು 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಭ್ರ ಮಾಚರಣೆಯಲ್ಲಿ ಭಾಗಿಯಾಗಿದ್ದರು.ಕುಂಬಳ ಕಾಯಿ,ತೆಂಗಿನಕಾಯಿ ಹೊಡೆದು ಸಂಭ್ರಮಿಸಿದ್ದಾರೆ ವಿದ್ಯಾರ್ಥಿಗಳು
ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾ ಚರಣೆ ಮಾಡಿದ್ದು ಕಂಡು ಬಂದಿತು.ಕಾಲೇಜಿನ ಗೇಟ್ ಮುಂದೆ ವಿದ್ಯಾರ್ಥಿಗಳಿಂದ ಈ ಒಂದು ಸಂಭ್ರಮಾಚರಣೆ ನಡೆದಿದ್ದು ಕಂಡು ಬಂದಿತು. ಸಂಭ್ರಮಾಚರಣೆ ಈ ಒಂದು ವಿಡಿಯೋ ಸಾಮಾ ಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಜಯಕಾರ ಹಾಕಿದ್ದಾರೆ ವಿದ್ಯಾರ್ಥಿಗಳು..