ರಾಯಚೂರು –
ಗ್ರಾಮ ಪಂಚಾಯತ ಸದಸ್ಯರೊಬ್ಬರನ್ನು ಹರಾಜು ಹಾಕಿದ ಮತ್ತೊಂದು ಘಟನೆಯೊಂದು ಬೆಳಕಿಗೆ ಬಂದಿದೆ. ಚುನಾವಣಾ ಆಯೋಗ ಖಡಕ್ ಆಗಿ ಸೂಚನೆ ನೀಡಿದ್ರು ಕೂಡಾ ಮತ್ತೊಬ್ಬ ಸದಸ್ಯರೊಬ್ಬರನ್ನು ಹರಾಜು ಹಾಕಲಾಗಿದೆ.
ರಾಯಚೂರಿನ ಸಿಂಧನೂರು ತಾಲೂಕಿನ ಇ.ಜೆ.ಹೊಸಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಗ್ರಾಮ ಪಂಚಾಯತಿ ಸ್ಥಾನಗಳಿಗೆ ಹರಾಜು ಹಾಕಿದ್ದಾರೆ ಗ್ರಾಮಸ್ಥರು.ಹರಾಜು ಹಾಕುತ್ತಿರುವ ಸುದ್ದಿ ತಿಳಿದ ಗ್ರಾಮದ ಯುವಕರು ಇದಕ್ಕೇ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ವಿರೋಧ ವ್ಯಕ್ತವಾಗುತ್ತಿದ್ತಂತೆ ಅಭ್ಯರ್ಥಿಗಳು ಕೊನೆಗೂ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. 3ಲಕ್ಷ 10 ಸಾವಿರ ರೂಪಾಯಿಗೆ ಒಂದು ಸ್ಥಾನವನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಹರಾಜು ಹಾಕಿದ್ದರು. ಗ್ರಾಮದಲ್ಲಿ ಸಭೆ ಸೇರಿ ಇಜೆ ಹೊಸಳ್ಳಿಯ 4 ಸ್ಥಾನಗಳನ್ನು ಹರಾಜು ಮಾಡಲಾಗಿತ್ತು. ಹೊಸಳ್ಳಿ ಗ್ರಾಮ ಪಂಚಾಯತಿಯ ಇಜೆ ಹೊಸಳ್ಳಿ ಗ್ರಾಮದಲ್ಲಿ ನಡೆದ ಈ ಒಂದು ಹರಾಜು ಘಟನೆ ನಡೆದಿದೆ. ಎರಡನೇ ಹಂತದಲ್ಲಿ ಇಲ್ಲಿ ಚುನಾವಣೆ ನಡೆಯಲಿದ್ದು ದುರ್ಗಾದೇವಿ ಗುಡಿ ಕಲ್ಯಾಣ ಮಂಟಪಕ್ಕಾಗಿ ಹರಾಜಿಗೆ ಮುಂದಾಗಿದ್ದರು ಗ್ರಾಮಸ್ಥರು.ಹರಾಜು ಹಾಕುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೂ ಹರಾಜು ಕೂಗಿ ಹಣವನ್ನು ಕೂಡಾ ಪೈನಲ್ ಮಾಡಿದ ನಂತರ ವಿಷಯ ತಿಳಿದ ಗ್ರಾಮದ ಯುವಕರು ಇದಕ್ಕೇ ವಿರೋಧ ವ್ಯಕ್ತ ಮಾಡಿದ್ದಾರೆ. ಕೂಡಲೇ ಇದರಿಂದ ಎಚ್ಚೇತ್ತುಕೊಂಡ ಹರಾಜಿನಲ್ಲಿ ಪಾಲ್ಗೊಂಡವರು ಕೂಡಲೇ ಇದರಿಂದ ಹಿಂದೆ ಸರಿದರು. ಇನ್ನೂ ಸ್ಪರ್ಧಾಳುಗಳು ತಮ್ಮ ನಾಮಪತ್ರವನ್ನು ಸಲ್ಲಿಸಿ ಅಖಾಡಕ್ಕೇ ಇಳಿದಿದ್ದಾರೆ.