ಹುಬ್ಬಳ್ಳಿ –
ಮೂರು ತಿಂಗಳ ನಂತರ ಹೊರಬಂದ 3539…..ಒಂದೇ ದಿನದಲ್ಲಿ ಮತ್ತೆ BD – ಮತ್ತೆ ಮೂರು ತಿಂಗಳು ಡಿಪೋ ದಲ್ಲಿ ಮಾಡಿದ್ದೇನು ಇದೇಲ್ಲಾ ನಿಮ್ಮ ಗಮನಕ್ಕೆ ಇಲ್ವಾ ಸಾಹೇಬ್ರೆ….. ಚಾಲಕರ ಗೋಳು ಕೇಳೊರಾರು…..
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳು ಸರಿಯಾದ ನಿರ್ವಹಣೆ ವ್ಯವಸ್ಥೆ ಇಲ್ಲದ ಪರಿಣಾಣವಾಗಿ ಪ್ರತಿದಿನ ಬಸ್ ಗಳು ರಸ್ತೆ ಮೇಲೆಯೆ ಕೈಕೊಡುತ್ತಿವೆ.ಇದರಿಂದಾಗಿ ಚಾಲಕರು ಪರದಾಡುತ್ತಿದ್ದರೆ ಇತ್ತ ರಿಪೇರಿಗೆ ಬಂದ ಬಸ್ ಗಳನ್ನು ದುರಸ್ತಿ ಮಾಡಲು ಸಾಮಾನುಗಳೇ ಇಲ್ಲದಂತಾಗಿದ್ದು
ಹೀಗಾಗಿ ಏನೇನೊ ಮಾಡುತ್ತಾ ಮೆಕ್ಯಾನಿಕ್ ಗಳು ರಿಪೇರಿ ಮಾಡಿ ಹೊರಗಡೆ ಕಳಿಸುತ್ತಿದ್ದು ಇನ್ನೂ ಮೂರು ತಿಂಗಳು ಡಿಪೋ ದಲ್ಲಿ ನಿಂತುಕೊಂಡಿದ್ದ ಬಸ್ ವೊಂದನ್ನು ರಿಪೇರಿ ಮಾಡಿ ಹೊರಗಡೆ ಕಳಿಸಿದ ಬೆನ್ನಲ್ಲೇ ಮತ್ತೆ ರಿಪೇರಿಗೆ ಬಸ್ ಬಂದಿದ್ದು ಡಿಪೋ ಗೆ ಮರಳಿ ಸೇರಿಕೊಂಡಿದೆ.ಹೌದು 3539 ನಂಬರ್ ಬಸ್ ಮೂರು ತಿಂಗಳ ಸುಧೀರ್ಘವಾಗಿ ನಿಂತುಕೊಂಡು ಹೊರಗಡೆ ಬಂದು ಒಂದೇ ಒಂದು ದಿನ ಸಂಪೂರ್ಣವಾಗಿ ಸಂಚಾರವನ್ನು ಕೂಡಾ ಮಾಡಿಲ್ಲ ಮತ್ತೆ ಲಕಮನಹಳ್ಳಿಯಲ್ಲಿ ಬಸ್ ಬಿಡಿ ಯಾಗಿದೆ ಹೀಗಾಗಿ ಕರ್ತವ್ಯದ ಮೇಲಿದ್ದ ಚಾಲಕ ಬಸ್ ನೊಂದಿಗೆ ಡಿಪೋ ಗೆ ತಗೆದುಕೊಂಡು ರಿಪೇರಿ ಮಾಡಲು ಬಿಟ್ಟಿದ್ದಾರೆ.
ಇನ್ನೂ ಒಂದು ವಿಚಾರವಾದರೆ ಮೂರು ತಿಂಗಳ ಕಾಲ ಈ ಒಂದು ಬಸ್ ಡಿಪೋ ದಲ್ಲಿತ್ತು ಹಾಗಾದರೆ ಮಾಡಿದ್ದಾದರು ಏನು ಮಾಡಿದರು ಕೂಡಾ ಮತ್ತೆ ಯಾಕೆ ಬಸ್ ರಿಪೇರಿಗೆ ಬಂದಿದೆ ಪ್ರತಿದಿನ ಡಿಪೋ ಗೆ ಬಂದು ಏನೇಲ್ಲಾ ಪರೀಕ್ಷೆ ಮಾಡುವ ಡಿಸಿ ಸಾಹೇಬ್ರೆ ಇಂತಹ ವಿಚಾರಗಳು ಸಮಸ್ಯೆಗಳು ನಿಮ್ಮ ಗಮನಕ್ಕೆ ಬರೊದಿಲ್ವಾ
ಇನ್ನಾದರೂ ಕೇವಲ ಚಾಲಕರನ್ನೆ ಟಾರ್ಗೆಟ್ ಮಾಡಿಕೊಂಡಿರುವ ಡಿಸಿ ಯವರೇ ಇಲಾಖೆಗೆ ಶಕ್ತಿಯಾಗಿರುವ ಚಾಲಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಡೂಟಿ ಮಾಡಿಸಿಕೊಳ್ಳಿ ಈ ಹಿಂದೆ ಅಧಿಕಾರಿಗಳು ನಿರ್ಮಾಣ ಮಾಡಿರುವ ಜನಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಿ ಈ ಒಂದು ನಿರೀಕ್ಷೆಯಲ್ಲಿ ಹುಬ್ಬಳ್ಳಿ ಧಾರವಾಡ ಚಿಗರಿ ಬಸ್ ಚಾಲಕರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……