ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಭಾಜನರಾದ 46 ಶಿಕ್ಷಕರು ರಾಜ್ಯದ ಇಬ್ಬರು ಶಿಕ್ಷಕರಿಗೆ ಗೌರವ ಸೆಪ್ಟೆಂಬರ್ 5 ರಂದು ರಾಷ್ಟ್ರಪತಿ ಅವರಿಂದ ಪ್ರಧಾನ…..

Suddi Sante Desk

ನವದೆಹಲಿ –

ದೇಶದ 46 ಶಿಕ್ಷಕರು ಈ ಬಾರಿಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿಕ್ಷಕರಿಗೆ 2022 ರ ರಾಷ್ಟ್ರೀಯ ಪ್ರಶಸ್ತಿ ಗಳನ್ನು ಸೆಪ್ಟೆಂಬರ್ 5 ರಂದು ಪ್ರದಾನ ಮಾಡಲಿದ್ದಾರೆ.46 ಶಿಕ್ಷಕರಿಗೆ ಸೆಪ್ಟೆಂಬರ್ 5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಶಿಕ್ಷಕರಿಗೆ 2022 ರ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.46 ಶಿಕ್ಷಕರಲ್ಲಿ ಇಬ್ಬರು ಶಿಕ್ಷಕ ರಿಗೆ ವಿಕಲಚೇತನ ಶಿಕ್ಷಕರಿಗೆ ವಿಶೇಷ ವರ್ಗದ ಅಡಿಯಲ್ಲಿ ಪ್ರಶಸ್ತಿ ನೀಡಲಾಗಿದೆ.ಅದರಲ್ಲಿ ಒಬ್ಬರು ಉತ್ತರಾಖಂಡ್ ಮತ್ತು ಇನ್ನೊಬ್ಬರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಆಯ್ಕೆಯಾಗಿದ್ದಾರೆ.

ದೇಶದಲ್ಲಿ ಶಿಕ್ಷಕರ ಅನನ್ಯ ಕೊಡುಗೆಯನ್ನು ಸ್ಮರಿಸಲು ಮತ್ತು ತಮ್ಮ ಬದ್ಧತೆ ಮತ್ತು ಕೆಲಸದ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮಾತ್ರವಲ್ಲದೆ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದ ಶಿಕ್ಷಕ ರನ್ನು ಗೌರವಿಸಲು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.

ಕಠಿಣ ಪಾರದರ್ಶಕ ಮತ್ತು ಆನ್‌ಲೈನ್‌ ನ ಮೂರು ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.ದೇಶದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣ ಸಚಿವಾಲಯವು ಪ್ರತಿ ವರ್ಷ ಶಿಕ್ಷಕರ ದಿನದಂದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ವನ್ನು ಆಯೋಜಿಸುತ್ತಿದೆ.ಶಿಕ್ಷಣ ಸಚಿವಾಲಯ ಹೊರಡಿಸಿ ರುವ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ರಾಜ್ಯದ ಇಬ್ಬರು ಶಿಕ್ಷಕ ರು ಆಯ್ಕೆಯಾಗಿದ್ದಾರೆ.ತುಮಕೂರು ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಜಿ ಪೊನ್‌ಶಂಕರಿ ಮತ್ತು ಚಿತ್ರದುರ್ಗ ಜಿಲ್ಲೆಯ ಅಮೃತಾಪುರದ ಜಿಎಲ್‌ ಪಿಎಸ್ ಶಾಲೆಯ ಶಿಕ್ಷಕ ಉಮೇಶ್ ಟಿ ಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹರ್ಯಾಣದ ಸೋನಿಪತ್ ಜಿಲ್ಲೆಯ ಎಸ್ ಸೆಕ್ ಸ್ಕೂಲ್ ಬರ್ವಾಸ್ನಿಯ ಶಿಕ್ಷಕರಾದ ಅಂಜು ದಹಿಯಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ ಮತ್ತು ಶಿಮ್ಲಾ ಜಿಲ್ಲೆಯ ಜಿಪಿಎಸ್ ಶಾಲೆಯ ಜೆಬಿಟಿ ಪ್ರಭಾರಿ ಯುಧು ವೀರ್ ಮತ್ತು ಜಿಎಸ್‌ಎಸ್‌ಎಸ್ ಧರೋಗ್ರಾ ಶಾಲೆಯ ಶಿಕ್ಷಕ ವೀರೇಂದ್ರ ಕುಮಾರ್ ಇಬ್ಬರು ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.ಪಂಜಾಬ್‌ನ ಬರ್ನಾಲಾ ಮತ್ತು ಮಾನ್ಸಾ ಜಿಲ್ಲೆಯ ಇಬ್ಬರು ಶಿಕ್ಷಕರಾದ ಹರಪ್ರೀತ್ ಸಿಂಗ್ ಮತ್ತು ಅರುಣ್ ಕುಮಾರ್ ಗಾರ್ಗ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವಾಯುವ್ಯ ದೆಹಲಿಯ ನಿಗಮ್ ಪ್ರತಿಭಾ ವಿದ್ಯಾಲಯದ ಶಿಕ್ಷಕಿ ರಜನಿ ಶರ್ಮಾ,ಉತ್ತರಾಖಂಡದ ಪ್ರತಾಪುರ್ ಚಾಕಲುವಾ ಜಿಲ್ಲೆಯ SDS GIC ಶಾಲೆಯ ಪ್ರಾಂಶುಪಾಲ ರಾದ ಕೌಸ್ತುಭ್ ಚಂದ್ರ ಜೋಶಿ,ಚಂಡೀಗಢದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾದ ಸೀಮಾ ರಾಣಿ,ದಕ್ಷಿಣ ಗೋವಾದ ಮೊರ್ಪಿರ್ಲಾ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಮರಿಯಾ ಮುರೇನಾ ಮಿರಾಂಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇವರ ಜೊತೆಗೆ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಜಿಎಸ್‌ ಎಸ್‌ಎಸ್ ಶಾಲೆಯ ಶಿಕ್ಷಕಿ ಸುನೀತಾ,ಛತ್ತೀಸ್‌ಗಢದ ರಾಯಪುರ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ ಪಿ ಸಖಾರಾಮ್ ದುಬೆಯ ಸಹಾಯಕ ಶಿಕ್ಷಕಿ ಮಮತಾ ಅಹರ್ ಸೇರಿದಂತೆ ಒಟ್ಟು 46 ಶಿಕ್ಷಕರು ಪ್ರಶಸ್ತಿಗೆ ಭಾಜನ ರಾಗಿದ್ದಾರೆ.ಇವರಿಗೆ ಸೆಪ್ಟೆಂಬರ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ನೀಡಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.