ತುಮಕೂರು –
25 ವರ್ಷದ ಯುವತಿಯನ್ನು ಮದೆಯಾಗಿ ರಾಜ್ಯಾಧ್ಯಂತ ಸುದ್ದಿಯಾಗಿದ್ದ 50 ವರ್ಷದ ಶಂಕರಣ್ಣ ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೌದು 2021ರ ಅಕ್ಟೋಬರ್ 19 ರಂದು 50 ವರ್ಷದ ವ್ಯಕ್ತಿಯೊಬ್ಬರು 25 ವರ್ಷದ ಯುವತಿಯನ್ನು ಮದುವೆಯಾಗಿ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿದ್ದರು. ಈ ಮದುವೆ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.

ರಾಜ್ಯಾಧ್ಯಂತ ಸುದ್ದಿಯಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಶಂಕರಣ್ಣ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಅಪ ರೂಪದ ಮದುವೆ ಇದೀಗ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.
25 ವರ್ಷದ ಮೇಘನಾಳನ್ನು ವಿವಾಹವಾಗಿದ್ದ 45 ವರ್ಷದ ಶಂಕರಣ್ಣ ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಹೊಲದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನೂ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹುಲಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆ ಸಿದ್ದಾರೆ.ಸಂತೆಮಾವತ್ತೂರು ಗ್ರಾಮದ ನಿವಾಸಿ ಯಾಗಿದ್ದ ಮೇಘನಾ,ಶಂಕರಣ್ಣ ಬಳಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಳು. ಇನ್ನೂ ವಿವಾಹವಾಗದೇ ಇದ್ದ 45 ವರ್ಷದ ಶಂಕರಣ್ಣ ಮೇಘನಾಳನ್ನು ಒಪ್ಪಿ ಮದುವೆಯಾಗಿದ್ದರು. ಆದರೆ ಇದೀಗ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ವನ್ನು ಪೊಲೀಸರು ಹುಡುಕುತ್ತಿದ್ದಾರೆ.





















