ಧಾರವಾಡ –
ಬಜೆಟ್ ನಲ್ಲಿ ರೈತರಿಗೆ ಪ್ರತಿ ಏಕರೆಗೆ 50 ಸಾವಿರ ಬರಪರಿಹಾರ ಘೋಷಣೆ ಮಾಡಿ – ಕರುನಾಡ ರಕ್ಷಣಾ ವೇದಿಕೆಯ ಧಾರವಾಡ ಜಿಲ್ಲಾ ಘಟಕ ದಿಂದ ರಾಜ್ಯ ಉಪಾಧ್ಯಕ್ಷರಾದ ಪೂರ್ಣಿಮಾ ಸವದತ್ತಿ ಟೀಮ್ ನಿಂದ DC ಯವರಿಗೆ ಮನವಿ ಹೌದು
ಬರ ಪರಿಹಾರದಿಂದ ರೈತರು ಕಂಗಾಲಾಗಿದ್ದು ರೈತರ ಸಂಕಷ್ಟಕ್ಕೆ ಈ ಕೂಡಲೇ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಪ್ರತಿ ಏಕರೆಗೆ 50 ಸಾವಿರ ರೂಪಾಯಿಯನ್ನು ಬರ ಪರಿಹಾರದ ರೂಪದಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಿ ಧಾರವಾಡ ದಲ್ಲಿ ಕರುನಾಡ ರಕ್ಷಣಾ ವೇದಿಕೆಯಿಂದ ಮನವಿ ನೀಡಲಾಯಿತು.
ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಪೂರ್ಣಿಮಾ ಸವದತ್ತಿ ಯವರಿಂದ ಜಿಲ್ಲಾಧಿಕಾರಿ ಗಳಿಗೆ ಈ ಒಂದ ಮನವಿಯನ್ನು ಸಲ್ಲಿಸಲಾಯಿತು ಬಜೆಟ್ ನಲ್ಲಿ ಪ್ರತಿ ಏಕರೆಗೆ 50 ಸಾವಿರಯನ್ನು ಈ ಕೂಡಲೇ ಘೋಷಣೆ ಮಾಡಬೇಕೆಂದುಕರುನಾಡ ರಕ್ಷಣಾ ವೇದಿಕೆಯ ಧಾರವಾಡ ಜಿಲ್ಲಾ ಮಹಿಳಾ ಘಟಕದಿಂದ ಈ ಒಂದು ಧ್ವನಿಯನ್ನು ಎತ್ತಲಾ ಯಿತು.
ರೈತರಿಗೆ ಬೆಂಬಲಿಸಿ ಬಜೆಟ್ ಮಂಡನೆಯಲ್ಲಿ ಸಮಸ್ತ ರೈತರಿಗೆ ಎಕ್ಕರೆಗೆ ತಲಾ 50.000 ರೂ.ಗಳಿಗಿಂತ ಅಧಿಕ ಬರ ಪರಿಹಾರ ಕಲ್ಪಿಸು ವಂತೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.
ಈ ಸಂಧರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಸವದತ್ತಿ.ಜಿಲ್ಲಾಧ್ಯಕ್ಷರಾದ ಶುಭಾ ಎಂ ಶೀರಿ. ಶ್ರೀಮತಿ ಅನಿತಾ ಹೊಸಕೋಟೆ.ಶ್ರೀಮತಿ ಸುನೀತಾ ಗದಗಿಮಠ ಮತ್ತು ರೈತ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..