ಬೆಂಗಳೂರು –
ಆರು ದಿನವೂ ಆರು ಬಗೆ ಬಗೆಯ ಊಟ ಪೈನಲ್ ಆಯಿತು ಮೆನು…..
ರಾಜ್ಯ ಸರ್ಕಾರ 2022-23ನೇ ಸಾಲಿನ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಶಾಲೆಗಳ ಮಧ್ಯಾಹ್ನ ಊಟದ ಮೆನು ಸಿದ್ಧಪಡಿಸಿದೆ.ಹೊಸ ಮೆನು ಕಂಡು ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಹೊಸ ಮೆನುವಿಗೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿ ದ್ದಾರೆ.
ಇನ್ಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಅವರ ಪ್ರದೇಶಕ್ಕೆ ಅನುಗುಣವಾಗಿ ಬಗೆ ಬಗೆಯ ಊಟ ಸಿಗಲಿದೆ.ಇದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಆಹಾರ ಲಭ್ಯವಾಗಲಿದೆ.
ಪ್ರತಿ ದಿನ ಮಧ್ಯಾಹ್ನ ಮಕ್ಕಳಿಗೆ ಒಂದೇ ರೀತಿಯ ಆಹಾರ ನೀಡೋದರಿಂದ ಅಪೌಷ್ಟಿಕತೆ ಹೆಚ್ಚಾಗುವ ಸಾಧ್ಯತೆಗಳಿತ್ತು. ಈ ಹಿನ್ನೆಲೆ ಮಕ್ಕಳಿಗೆ ಬೇರೆ ಬೇರೆ ಗುಣಮಟ್ಟದ ಆಹಾರ ನೀಡುವಂತೆ ಕೇಂದ್ರ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸೂಚನೆ ಹಿನ್ನೆಲೆ ಹೊಸ ಮೆನು ಸಿದ್ಧವಾಗಿದೆ.
ಹೊಸ ಆಹಾರ ಪಟ್ಟಿಯಲ್ಲಿ ಏನೇನಿದೆ ಗೊತ್ತಾ…..
ಸೋಮವಾರ: ಅನ್ನ, ಸಾಂಬಾರು
ಮಂಗಳವಾರ: ಪಲಾವ್, ದಾಲ್ ತೊವ್ವೆ, ಅಥವಾ ಟೊಮೆಟೊ ಬಾತ್ ಹಾಗೂ ತರಕಾರಿ ಪಲ್ಯ
ಬುಧವಾರ: ಅನ್ನ, ರಸಂ ಮತ್ತು ಕಾಳು ಪಲ್ಯ ಅಥವಾ ತರಕಾರಿ ಪಲ್ಯ
ಗುರುವಾರ: ಅನ್ನ, ಸಾಂಬಾರು
ಶುಕ್ರವಾರ: -ಬಿಸಿ ಬೇಳೆ ಬಾತ್
ಶನಿವಾರ: ಉಪ್ಪಿಟ್ಟು ಅಥವಾ ಚಪಾತಿ ಮತ್ತು ಪಲ್ಯ