ಧಾರವಾಡ –
MOB ಯವರಿಗೆ ನೀತಿ ಪಾಠ ಮಾಡಿದ SP ಡಾ ಗೋಪಾಲ ಬ್ಯಾಕೋಡ್ – ಆದರ್ಶ ಬದುಕಿನ ಡಾಕ್ಟರ್ ನೀತಿ ಪಾಠ ಕೇಳಿದ 60 MOB – ಪಿಐ ಶಿವಾನಂದ ಕಮತಗಿ ಮತ್ತು ಟೀಮ್ ಉಪಸ್ಥಿತಿ
ಪೊಲೀಸರು ಮನಸ್ಸು ಮಾಡಿದರೆ ಏನೇಲ್ಲಾ ಮಾಡಬಹುದು ಎಂಬೊದಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆ ಹೌದು ಸದಾ ಒಂದಿಲ್ಲೊಂದು ಕೆಲಸ ಕಾರ್ಯಗಳ ನಡುವೆ ಬ್ಯೂಜಿಯಾಗಿರುವ ಧಾರವಾಡ ಗ್ರಾಮೀಣ ಪೊಲೀಸರು ವಿಶೇಷ ವಾದ ಕಾರ್ಯದ ಮೂಲಕ ಕರ್ತವ್ಯದೊಂದಿಗೆ ಪೊಲೀಸರಿಗೆ ಸಾಮಾಜಿಕ ಜವಾಬ್ದಾರಿ ಹೇಗೆ ಇರಬೇಕು ಎಂಬೊದನ್ನು ತೋರಿಸಿಕೊಟ್ಟಿದ್ದಾರೆ.
ಹೌದು ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ 60 ಕ್ಕೂ ಹೆಚ್ಚು MOB ಯವರನ್ನು ಠಾಣೆಗೆ ಕರೆಯಿಸಿಕೊಂಡು ಬದುಕಿನ ಪಾಠವನ್ನು ಹೇಳಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಗೋಪಾಲ ಬ್ಯಾಕೋಡ್ ಅವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ MOB ಯವರಿಗೆ ಎರಡು ಗಂಟೆಗಳ ಕಾಲ ನೀತಿ ಪಾಠವನ್ನು ಬೋಧನೆ ಮಾಡಿದ್ದಾರೆ.
ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದಂತೆ,ಎಲ್ಲವನ್ನು ಬಿಟ್ಟು ಒಳ್ಳೇಯ ಜೀವನ ಕಟ್ಟಿಕೊಂಡು ನಡೆಸುವಂತೆ ಸಮಾಜದಲ್ಲಿ ಒಳ್ಳೇಯವರಾಗಿ ಬದುಕುವಂತೆ ನೀತಿ ಪಾಠ ಹೇಳಿದ್ದಾರೆ.ಇದರೊಂದಿಂಗೆ ಕ್ರೈಮ್ ಸೇರಿದಂತೆ ಬೇರೆ ಬೇರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ MOB ಯವರನ್ನು ಸಾಮಾನ್ಯರಾಗಿ ಬದುಕುವಂತೆ ಖಡಕ್ ಯುವ ಪೊಲೀಸ್ ಅಧಿಕಾರಿ ಡಾ ಗೋಪಾಲ ಬ್ಯಾಕೋಡ್ ಅವರು ಪಾಠವನ್ನು ಮಾಡಿದರು
ಪೊಲೀಸರಿಗೂ ಕೂಡಾ ಕೇವಲ ಕರ್ತವ್ಯ ಎನ್ನದೇ ಸಾಮಾಜಿಕ ಜವಾಬ್ದಾರಿ ಹೇಗೆ ಇರಬೇಕು ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಒಂದು ಸಮಯದಲ್ಲಿ ಎಸ್ಪಿ ಡಾ ಗೋಪಾಲ ಬ್ಯಾಕೋಡ್ಶಿ ಅವರೊಂದಿಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಶಿವಾನಂದ ಕಮತಗಿ,ಪಿಎಸ್ಐ ಬಸನಗೌಡ ಮರೆಪ್ಪನವರ,ಠಾಣೆಯ ಕ್ರೇಮ್ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..