ಮೈಸೂರು –
73 ವಯಸ್ಸಿನ ಅಜ್ಜಿಯೊಬ್ಬರು ನನಗೆ ವರ ಬೇಕಾಗಿದೆ ಎಂದುಕೊಂಡು ಪತ್ರಿಕೆಯಲ್ಲಿ ಜಾಹಿರಾತನ್ನು ನೀಡಿದ್ದರು ಕೊನೆಗೂ ಜಾಹಿರಾತು ನೋಡಿದ 69 ವಯಸ್ಸಿನ ವಯೋವೃದ್ದರೊಬ್ಬರು ಅಜ್ಜಿಯ ಇಳಿ ವಯಸ್ಸಿನ ಬದುಕಿಗೆ ಆಸರೆಯಾಗಿದ್ದು ಜಾಹಿರಾತು ನೀಡಿದ ಅಜ್ಜಿ ಜಾಕಪಾಟ್ ಹೊಡೆದಿದ್ದಾರೆ.

ಹೌದು ವಯಸ್ಸು ದೇಹಕ್ಕೆ, ಮನಸ್ಸಿಗಲ್ಲ. ಈ ನುಡಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ನಗರದಲ್ಲಿ ಇಳಿ ವಯಸ್ಸಿನ ಎರಡು ಮನಸ್ಸುಗಳು ದಾಂಪತ್ಯ ಜೀವನಕ್ಕೆ ಕಾಲಿಡ ಲು ಬಯಸಿವೆ. ಪರಸ್ಪರರು ಕಷ್ಟ, ಸುಖ ಹಂಚಿಕೊಂ ಡು ಜೊತೆಯಾಗಿ ತಮ್ಮ ಸಂಧ್ಯಾ ಕಾಲವನ್ನು ನೆಮ್ಮ ದಿಯಿಂದ ಕಳೆಯಲು ಉತ್ಸುಕರಾ ಗಿದ್ದಾರೆ. ಈ ಮನ ಸ್ಸುಗಳು ಹೇಗೆ ಒಂದಾದವು ಎಂಬುದು ಕುತೂಹಲ ಕಾರಿಯಾಗಿದೆ.

73 ವರ್ಷ ವಯಸ್ಸಿನ ನಿವೃತ್ತ ಶಿಕ್ಷಕಿಯೊಬ್ಬರು ತಮಗೆ ವರ ಬೇಕಾಗಿದ್ದಾರೆ ಎಂದು ಜಾಹೀರಾತನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. 69 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರು ಜಾಹೀರಾತು ಗಮನಿಸಿ ಕರೆ ಮಾಡಿದ್ದಾರೆ. ನಂತರ ಪರಸ್ಪರರು ಮನೆಗಳಿಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದಾರೆ. ಮದುವೆ ಯಾಗಲು ಅಥವಾ ಸ್ನೇಹಿತರಾಗಿ ಜೊತೆಗಿರಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ.

1972ರಲ್ಲೇ ಮೈಸೂರಿಗೆ ಬಂದಿದ್ದ ಈ ಮಹಿಳೆ ತಮ್ಮ 42ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು. ಎರಡು ವರ್ಷಗಳಲ್ಲೇ ವಿಚ್ಛೇದನವಾಯಿತು. ನಂತರ ಮಹಿಳೆ ಒಬ್ಬಂಟಿಯಾಗಿ ಹೆಬ್ಬಾಳದಲ್ಲಿ ನೆಲೆಸಿದ್ದಾರೆ. ಇವರ ನಾಲ್ವರು ತಮ್ಮಂದಿರು ದಕ್ಷಿಣ ಕನ್ನಡದಲ್ಲಿ ನೆಲೆಸಿ ದ್ದಾರೆ. ಅಲ್ಲಿಗೆ ಹೋಗಲು ಮಹಿಳೆಗೆ ಇಷ್ಟವಿಲ್ಲ. ಹೀಗಾಗಿ, ಜೀವನ ಸಂಗಾತಿ ಕೋರಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದರು. ಅವರನ್ನು ಮದುವೆ ಯಾಗಿ ಮೈಸೂರಿನವರೇ ಆದ ನಿವೃತ್ತ ಇಂಜಿನಿಯ ರ್ ಒಬ್ಬರು ಮುಂದೆ ಬಂದಿದ್ದಾರೆ.

69 ವಯಸ್ಸಿನ ಈ ವ್ಯಕ್ತಿಯು ಶ್ರೀರಾಂಪುರದಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದಾರೆ. ಏಳು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದಾರೆ. ಅವರ ಪುತ್ರ ವಿದೇಶದಲ್ಲಿ ನೆಲೆಸಿದ್ದಾರೆ. ಪುತ್ರನ ಒತ್ತಾಯದ ಮೇರೆಗೆ ಸಂಗಾತಿ ಹುಡುಕಾಟದಲ್ಲಿದ್ದರು. ಜಾಹೀ ರಾತು ಗಮನಿಸಿ ಸ್ನೇಹಿತರ ಮೂಲಕ ಮಹಿಳೆಯೊಂ ದಿಗೆ ಮಾತುಕತೆ ನಡೆಸಿದ್ದಾರೆ.