This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕಚೇರಿಯಲ್ಲಿ ವಿಭಿನ್ನವಾಗಿ 74ನೇ ಗಣರಾಜ್ಯೋತ್ಸವ ಆಚರಣೆ – ಸಮಾಜದಲ್ಲಿ ನಮ್ಮೊಂದಿಗಿರುವ ದುಡಿಯುವ ಶ್ರಮಿಕ ವರ್ಗದವರಿಂದ ಧ್ವಜಾರೋಹಣ ಮಾಡಿ ಮಾದರಿಯಾದ ಸಚಿವರ ಕಚೇರಿ


ಹುಬ್ಬಳ್ಳಿ

ಸಾಮಾನ್ಯವಾಗಿ ಏನೇ ಮಾಡಿದರು ಅದನ್ನು ವಿಭಿನ್ನವಾಗಿ ವಿಶೇಷವಾಗಿ ಮಾಡಿಕೊಂಡು ಬರುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಮತ್ತು ಟೀಮ್ ನವರು ಈಗ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಹೊಸ ದೊಂದು ದಾಖಲೆಯನ್ನು ಬರೆದಿದೆ.

ಹೌದು ಅವರಿವರು ಏನ್ನುತ್ತಾ ದೊಡ್ಡ ದೊಡ್ಡ ಗಣ್ಯರನ್ನು ರಾಜಕೀಯ ನಾಯಕರನ್ನು ಅಧಿಕಾರಿ ಗಳನ್ನು ಕರೆಯಿಸಿ ಅವರಿಂದ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡಿಸದೇ ತುಂಬಾ ವಿಭಿನ್ನ ವಿಶೇಷವಾಗಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಈ ಬಾರಿ ಆಚರಣೆ ಮಾಡಲಾಗಿದೆ.

ಹೌದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಮಾರ್ಗದರ್ಶನದಲ್ಲಿ ಸಚಿವರ ಆಪ್ತ ಕಾರ್ಯ ದರ್ಶಿ ಗಳಾಗಿರುವ ಮುರಳಿಧರ ಮಾಳಗಿ ಮತ್ತು ಮಲ್ಲಿಕಾರ್ಜುನ ಪಾಟೀಲ ಈ ಬಾರಿಯ ಗಣರಾಜ್ಯೋತ್ಸವವನ್ನು ತುಂಬಾ ವಿಭಿನ್ನವಾಗಿ ಆಚರಣೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

74ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಕಚೇರಿಯಲ್ಲೂ ಕೂಡಾ ಆಚರಣೆಯನ್ನು ಮಾಡಲಾಯಿತು. ದೇಶವೇ ಗಣರಾಜ್ಯದ ದಿನವನ್ನು ಸಂಭ್ರಮಿಸುತ್ತಿರುವ ಈ ಕ್ಷಣದಲ್ಲಿ ಹುಬ್ಬಳ್ಳಿಯ ಕೇಂದ್ರ ಸಚಿವರ ಕಚೇರಿಯಲ್ಲಿ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಅಮರಗೋಳದನ ದುಡಿಯುವ ಶ್ರಮಿಕವರ್ಗದವರನ್ನು ಧ್ವಜಾರೋಹಣ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸಿ 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಚೇರಿಗೆ ವಿಶೇಷವಾಗಿ ಗೌರವ ಸಮರ್ಪಣೆ ಯೊಂದಿಗೆ ಬರಮಾಡಿಕೊಂಡು ಇವರಿಂದಲೇ ಧ್ವಜಾರೋಹಣವನ್ನು ಮಾಡಿಸಲಾಯಿತು

ಗಣರಾಜ್ಯ ಎಂಬುದು ನಮ್ಮೆಲ್ಲರ ಪಾಲಿಗೆ ಗೌರವದ ಸಂಕೇತವಾಗಿದ್ದು ಇಂತಹ ವಿಶೇಷ ದಿನವನ್ನು ಸಮಾಜದ ಕಟ್ಟ ಕಡೆಯ ವರ್ಗ ಕೂಡ ಸಂಭ್ರಮಿಸಬೇಕೆಂಬ ಉದ್ದೇಶದಿಂದ ಶ್ರಮಿಕ ವರ್ಗದ ಹಿರಿಯರಾದ ಬಸವಣ್ಣಪ್ಪ ನೀರಲಗಿಯ ರಿಂದ ಧ್ವಜಾರೋಹಣ ಮಾಡಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಬಸಪ್ಪಣ್ಣನವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ನೆನೆದು ಗೌರವ ಅರ್ಪಿಸಿದರು.ಇದರೊಂದಿಗೆ ಈ ಒಂದು 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಹುಬ್ಬಳ್ಳಿಯ ಕೇಂದ್ರ ಸಚಿವರ ಕಚೇರಿ ಮಾದರಿ ಯಾಯಿತು.ಈ ಒಂದು ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗಳಾದ ಮುರಳೀಧರ ಮಳಗಿ,ಮಲ್ಲಿಕಾರ್ಜುನ ಪಾಟೀಲ, ಸಿಬ್ಬಂದಿ ಗಳಾದ ಚಂದ್ರಶೇಖರ ಬೆಳವಡಿ, ಪ್ರವೀಣ್ ಶೀಲವಂತರ, ರಾಘವೇಂದ್ರ ಯರಕದ,ಅಶೋಕ ಬನ್ನಿಕೊಪ್ಪದ,ಶರಣು ಹೆಬಸೂರು,ಸದಾನಂದ ಪೂಜಾರ,ಸತೀಶ್ ಪಾಟೀಲ್,ನಾಗೇಶ ಕಿಣಿ, ಫಕೀರಪ್ಪ ಕುರ್ತಕೋಟಿ, ಶಂಕರ ಮಾದರ, ಹನುಮಂತ, ಯಲಗುರೇಶ ಆಲೂರ,ಸುಧೀರ್ ಧಾರವಾಡ,ಸುನೀಲ ಜೋಗನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

 


Google News Join The Telegram Join The WhatsApp

 

 

Suddi Sante Desk

Leave a Reply