ಬೆಂಗಳೂರು –
7ನೇ ವೇತನ ಆಯೋಗ ಜಾರಿಗೆ ಮತ್ತು ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡುವಂತೆ ಪಟ್ಟು ಹಿಡಿದು ಮಾರ್ಚ್ 1 ರಿಂದ ಹೋರಾಟಕ್ಕೆ ರಾಜ್ಯದ ಸರ್ಕಾರಿ ನೌಕರರು ಕರೆ ನೀಡಿದ್ದಾರೆ.ಅತ್ತ ಈ ಒಂದು ಕರೆ ನೀಡುತ್ತಿದ್ದಂತೆ ಇತ್ತ ರಾಜ್ಯವ್ಯಾಪಿ ಈ ಒಂದು ಹೋರಾಟಕ್ಕೆ ಪ್ರತಿಯೊಬ್ಬರು ಬೆಂಬಲ ವನ್ನು ನೀಡುತ್ತಿದ್ದು ದಿನದಿಂದ ದಿನಕ್ಕೆ ಈ ಒಂದು ಹೋರಾಟದ ಕಾವು ಜೋರಾಗುತ್ತಿದೆ
ಇದೇಲ್ಲದರ ನಡುವೆ ಮುಖ್ಯಮಂತ್ರಿ ನಿನ್ನೆಯಷ್ಟೇ ಈ ಕುರಿತಂತೆ ವಿಧಾನ ಸಭೆಯಲ್ಲಿ ಮಾತನಾಡಿ ಮಾರ್ಚ್ ನಲ್ಲಿ ಈ ಒಂದು ಕುರಿತಂತೆ ಮಧ್ಯಂತರ ವರದಿಯನ್ನು ತರಿಸಿಕೊಂಡು ಜಾರಿಗೆ ಮಾಡಲಾ ಗುತ್ತದೆ ಎಂಬೊದಾಗಿ ಹೇಳಿದ್ದಾರೆ.ಇದರ ಬೆನ್ನಲ್ಲೇ 7ನೇ ವೇತನ ಆಯೋಗದ ಮಧ್ಯಂತರ ವರದಿ ಯನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಕೇಳಿದ್ದಾರೆ.
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗೆ 7ನೇ ವೇತನ ಆಯೋಗವನ್ನು ರಚನೆ ಮಾಡಿ ಮೂರುವರೆ ತಿಂಗಳು ಕಳೆದಿದ್ದು ಹೀಗಾಗಿ ಈವರೆಗೆ 7ನೇ ವೇತನ ಸಮಿತಿ ಮಾಡಿರುವ ಕಾರ್ಯ ಚಟುವಟಿಕೆಗಳ ಮಾಹಿತಿಯೊಂದಿಗೆ ಕೂಡಲೇ ವರದಿಯನ್ನು ನೀಡುವಂತೆ ಮುಖ್ಯ ಮಂತ್ರಿ ಕೇಳಿದ್ದಾರೆ. ಮಾರ್ಚ್ 1 ರಿಂದ ಅನಿರ್ದಿ ಷ್ಟಾವಧಿ ಮುಷ್ಕರ ನಡೆಸಲು ಉದ್ದೇಶಿಸಿರುವ ರಾಜ್ಯ ಸರ್ಕಾರಿ ನೌಕರರನ್ನು ಸಮಾಧಾನಪಡಿ ಸುವ ಪ್ರಯತ್ನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೂಲಕ ಮಾಡಲು ಮುಂದಾ ಗಿದ್ದಾರೆ.
ಈ ಮೂಲಕ 7 ನೇ ವೇತನ ಆಯೋಗದ ಅನು ಷ್ಠಾನಕ್ಕೆ ಸಂಬಂಧಿಸಿದಂತೆ ಮಾರ್ಚ್ ಒಳಗೆ ಮಧ್ಯಂತರ ವರದಿಯನ್ನು ಕೇಳುವುದಾಗಿ ಸಿಎಂ ಹೇಳಿದ್ದಾರೆ.ಈ ವಿಚಾರವಾಗಿ ‘7 ನೇ ವೇತನ ಆಯೋಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಧಾಕರ್ ರಾವ್ ನೇತೃತ್ವದ ವೇತನಆಯೋಗದ ಮಧ್ಯಂತರ ವರದಿಯನ್ನು ಕೇಳಲಿದ್ದೇನೆ.ಈ ವರದಿ ಸಲ್ಲಿಕೆಯಾದ ಬಳಿಕ ಅದರ ಆಧಾರದ ಮೇಲೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳ ಲಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ ಇದೊಂದು ಸಧ್ಯ ಹೋರಾಟಕ್ಕೆ ಕರೆ ನೀಡಿರುವ ರಾಜ್ಯದ ಸರ್ಕಾರಿ ನೌಕರರನ್ನು ಸಮಾಧಾನ ಮಾಡುವ ತಂತ್ರವಾಗಿದ್ದು ಈ ಒಂದು ಕಾರ್ಯಕ್ಕೆ ನಾವು ಒಪ್ಪೊದಿಲ್ಲ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯೊ ಪ್ರಶ್ನೆಯೇ ಉದ್ಬವಿಸೊದಿಲ್ಲ ಎಂಬ ಖಡಕ್ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ಸಂಘಟನೆ ಯಿಂದ ನೀಡಲಾಗಿದ್ದು ಹೀಗಾಗಿ ಏನೇನು ಬೆಳವಣೆಗೆ ಆಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..