ಹುಬ್ಬಳ್ಳಿ –
ಮನೆ ಮನೆಗೆ ರಜತ್ 9 ದಿನಗಳ ಏನೇನು ಮಾಡಿದರು ಏನು ಕಂಪ್ಲೀಟ್ ವರದಿ ಹೌದು 30 ವರ್ಷಗಳಿಂದ ಹುಬ್ಬಳ್ಳಿ ಅಸಹಾಯಕವಾಗಿದೆ. ಕಳೆದ 9 ದಿನಗಳಲ್ಲಿ ರಜತ್ ಉಳ್ಳಾಗಡ್ಡಿಮಠ ಎಲ್ಲಿಗೆ ಹೋದರೂ ಕೂಡಾ ಜನರು ಮೂಲಭೂತ ಅಗತ್ಯಗಳಿಗಾಗಿ ಪರದಾಡುತ್ತಿರುವ ಚಿತ್ರಣ ಕಂಡು ಬಂದಿತು.
ಉಳ್ಳಾಗಡ್ಡಿಮಠ ಕುಟುಂಬ ರಾಣಿ ಚೆನ್ನಮ್ಮನ ದಿನಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿದೆ. ಮೂಲ ವೃತ್ತಿಯು ಶಸ್ತ್ರಾಸ್ತ್ರ ಮದ್ದುಗುಂಡುಗಳ್ಳ ವ್ಯವಹಾರ ಮತ್ತು ಕೃಷಿ. ಮುತ್ತಜ್ಜ ಜಿ.ಸಿ. ಉಳ್ಳಾಗಡ್ಡಿಮಠ ಬ್ರಿಟಿಷರ ಆಳ್ವಿಕೆಯಲ್ಲಿ ಬಾಂಬೆ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಆಗಿದ್ದರು ಮತ್ತೊಬ್ಬ ಮುತ್ತಜ್ಜ ಎಂ.ಬಿ. ಉಳ್ಳಾಗಡ್ಡಿಮಠ ಅವರು 1ನೇ ಹುಬ್ಬಳ್ಳಿ-ಧಾರವಾಡ ಪುರಸಭೆ ಸದಸ್ಯರಾಗಿ ನಗರ ಯೋಜನಾ ಸಮಿತಿ ಅಧ್ಯಕ್ಷರಾಗಿದ್ದರು. ಅಜ್ಜ ಆರ್.ಜಿ.ಉಳ್ಳಾಗಡ್ಡಿಮಠ ಪತ್ರಕರ್ತರಾಗಿ, ಅಖಿಲ ಭಾರತ ಮಧ್ಯಮ-ಸಣ್ಣ ಪತ್ರಿಕೆಗಳ ಒಕ್ಕೂಟಕ್ಕೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಅಜ್ಜ (ತಾಯಿಯ ತಂದೆ) ಬಿ.ಜಿ.ದಾಸ್ತಿಕೊಪ್ಪ 1990ರಲ್ಲಿ ಹುಬ್ಬಳ್ಳಿಗೆ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.ತಂದೆ ವಿಶ್ವಪ್ರಕಾಶ್ ಅವರು ಸಾಮಾಜಿಕ-ರಾಜಕೀಯ ನಾಯಕರಾಗಿದ್ದು ಅವರು ತಮ್ಮ ಇಡೀ ಜೀವನವನ್ನು ದೀನದಲಿತ ಸಮುದಾಯದ ಉನ್ನತಿಗಾಗಿ ವ್ಯಯಿಸಿದದರು.
2008 ರಲ್ಲಿ 16 ವರ್ಷದವನಾಗಿದ್ದಾಗ NSUI ಗೆ ಸೇರಿಕೊಂಡ ರಜತ್ 14 ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದಾರೆ. ಯಾವಾಗಲೂ ಹುಬ್ಬಳ್ಳಿಯ ಕಾಣದ ಭಾಗಗ ಳಿಂದ ಜನರನ್ನು ಭೇಟಿ ಮಾಡಲು ಬಯಸುತ್ತಿದ್ದು ಮನೆ ಮನೆಗೆ ರಜತ್ ಅಭಿಯಾನವನ್ನು ಹುಟ್ಟು ಹಾಕಿ ಆಸೆಯನ್ನು ಅನ್ವೇಷಿಸುವಂತೆ ಮಾಡಿದ್ದಾರೆ.
9 ದಿನಗಳಲ್ಲಿ ನಾನು ಕೊಳೆಗೇರಿಗಳು, ಅಕ್ರಮ-ಸಕ್ರಮ ಬಡವಾಣೆಗಳು, CC ಅಭಿವೃದ್ಧಿ ಹೊಂದಿದ ಪ್ರದೇಶಗಳು,ಅಪಾರ್ಟ್‌ಮೆಂಟ್‌ಗಳು ಒಳಗೊಂಡಿರುವ ಹೊಸೂರು,ಜೇಮ್ಸ್ ಲ್ಯಾಂಡ್, ಬಾಪೂಜಿ ನಗರ,ಜೈ ಹನುಮಾನ್ ನಗರ, ಲೋಕ ಪ್ಪನಹಕಲ್, ಚಾಮುಂಡೇಶ್ವರಿ ನಗರ, ಕೃಷ್ಣ ನಗರ, ಗುರುದೇವ್ ನಗರ, ಸಿದ್ದರಾಮೇಶ್ವರ ನಗರ, ಭಾರತ್ ನಗರ, ಶಿವಪುತ್ರ ನಗರ, ಸಂಗಮ್ ಕಾಲೋನಿ, ಸಹದೇವ ನಗರ, ಹೇಮರಡ್ಡಿ ಮಲ್ಲಮ್ಮ ಕಾಲೋನಿ, ವಿಮಲೇಶ್ವರ ಕಾಲೋನಿ, ಉದಯ ನಗರ, ಗೊಪ್ಪನಕೊಪ್ಪದ ಕೆಂಚಪ್ಪನ ತೋಟ, ಗೊಲ್ಲರ ಓಣಿ, ಕುರುಬರ ಓಣಿ, ಬೆಂಗೇರಿಯ ಕುರುಬರ ಓಣಿ, ಜನತಾ ಕ್ವಾರ್ಟರ್ಸ್ ಕಿಲ್ಲಾ ಓಣಿ, ತಳವಾರ ಓಣಿಯ 5000 ಮನೆಗಳನ್ನು ತಲುಪಿ ಯಶಸ್ವಿಯಾಗಿ ಮುಂದುವರಿದಿದೆ.
ಮನೆ ಬಾಗಿಲಿಗೆ ಹೋದಲ್ಲಿ ರಜತ್ ರನ್ನು ಪ್ರತಿಯೊ ಬ್ಬರು ಆತ್ಮೀಯವಾಗಿ ಬರಮಾಡಿ ಕೊಂಡು ಕುಟುಂಬದೊಂದಿಗೆ ಅವರ ಸಂಬಂ ಧವನ್ನು ಹಂಚಿಕೊಂಡು ತಮ್ಮ ಕುಟುಂಬದವರಲ್ಲಿ ನಾನು ಒಬ್ಬ ಎನ್ನುವಂತೆ ತಮ್ಮ ಕಷ್ಟ ಹೇಳಿಕೊ ಳ್ಳುತ್ತಿದ್ದಾರೆ. ಕಾಂಗ್ರೆಸ್ ಕಾರ್ಪೊರೇಟರ್‌ಗಳ ಸಹಾಯದಿಂದ ನಾಗರಿಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ,ಕೆಲವರಿಗೆ ನೈತಿಕವಾಗಿ ಅವರೊಂದಿಗೆ ನಿಲ್ಲುವ ಭರವಸೆ ನೀಡಿದ್ದೇನೆ, ಅವರ ಪ್ರೀತಿಗೆ ಅನಂತ ಧನ್ಯವಾದಗಳು ಎಂದು ರಜತ್ ಉಳ್ಳಾಗಡ್ಡಿಮಠ ಹೇಳುತ್ತಿದ್ದಾರೆ.
ಒಳ್ಳೆಯ ರಸ್ತೆಗಳು,ಚರಂಡಿ,ಯುಜಿಡಿ,ಬೀದಿ ದೀಪಗಳು,ಸರಿಯಾದ ನೀರು ಸರಬರಾಜು, ಉದ್ಯೋಗಗಳ ಬಗ್ಗೆ ಜನರು ಇವರನ್ನು ಕೇಳು ತ್ತಾರೆ. ಶಾಸಕರಿಗೆ ಪ್ರತಿಪಕ್ಷ ನಾಯಕ, ವಿವಿಧ ಇಲಾಖೆಗಳ ಸಚಿವ, ವಿಧಾನಸಭಾ ಅಧ್ಯಕ್ಷ, ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ ಜನರು ಇನ್ನೂ ಮೂಲಭೂತ ಅಗತ್ಯಗಳಿಗಾಗಿ ಕೇಳುತ್ತಾರೆ ಎಂದು ಹೇಳಲು ತುಂಬಾ ದುಃಖ ವಾಗಿದೆ ಎಂಬ ಮಾತನ್ನು ಹೇಳುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್…..