ಹುಬ್ಬಳ್ಳಿ –
ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ವಾಹನವೊಂದು ಹಾಯ್ದ ಘಟನೆ ಹುಬ್ಬಳ್ಳಿಯ ಹೊರವಲಯದ ವರೂರ ಬಳಿ ನಡೆದಿದೆ. ವರೂರಿನ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಘಟನೆ ನಡೆದಿದೆ.

ಒಂದು ಬದಿಯಿಂದ ನೂರಾರು ಕುರಿಗಳೊಂದಿಗೆ ಕುರಿಗಾಯಿ ತಮ್ಮ ಕುರಿಗಳನ್ನು ದಾಟಿಸುತ್ತಿದ್ದರು. ಕೆಲವೊಂದಷ್ಟು ಕುರಿಗಳು ರಸ್ತೆಯ ಕೆಳಗಡೆಯ ಸೇತುವೆಯಲ್ಲಿ ಹೋದರೆ ಇನ್ನಷ್ಟು ಕುರಿಗಳು ಸೇತುವೆಯ ಮೇಲೆ ಹೆದ್ದಾರಿಯ ರಸ್ತೆಯಲ್ಲಿ ಹೊದವು.ರಸ್ತೆಯಲ್ಲಿ ದಾಟುತ್ತಿದ್ದ ಕುರಿಗಳನ್ನು ನೋಡದೆ ವಾಹನವೊಂದು ಏಕಾಏಕಿಯಾಗಿ ಜೋರಾಗಿ ಹೋಗಿದೆ.

ರಸ್ತೆ ದಾಟುತ್ತಿದ್ದ ಕುರಿಗಳಿಗೆ ವಾಹನವೊಂದು ಡಿಕ್ಕಿಯಾಗಿದೆ ಪರಿಣಾಮವಾಗಿ ಹತ್ತಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿವೆ.ವರೂರಿನ ದೇವಪ್ಪ ಕೇಳಗಿನಮನಿ ಎಂಬುವರಿಗೆ ಸೇರಿದ ಕುರಿಗಳಾಗಿವೆ

ರಸ್ತೆಯಲ್ಲಿ ದಾಟುತ್ತಿದ್ದ ಕುರಿಗಳ ಮೇಲೆ ವಾಹನ ಹಾಯ್ದಿದ್ದು ಎಲ್ಲೆಂದರಲ್ಲಿ ಹೆದ್ದಾರಿ ತುಂಬಾ ಕುರಿಗಳು ಸತ್ತು ಬಿದ್ದದ್ದು ಈ ಕುರಿತು ಕುರಿಗಾಯಿ ದೂರು ನೀಡದ್ದು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.