ಮಂಗಳೂರು –
ಸಾಮಾನ್ಯವಾಗಿ ಯಾವುದೇ ಒಂದು ಕಳ್ಳತನ ಪ್ರಕರಣವನ್ನು ಪೊಲೀಸರು ತನಿಖೆ ಮಾಡೊದು ಸಾಮಾನ್ಯ. ಆದರೆ ಪೊಲಿಸರೇ ಕಳ್ಳತನ ಮಾಡಿದ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ. ಹೌದು ಇಂಥದೊಂದು ಆರೋಪ ಮಂಗಳೂರಿನ ಸಿಸಿಬಿ ಪೊಲೀಸರ ವಿರುದ್ದವೇ ಕೇಳಿ ಬಂದಿದ್ದು ಈಗ ಆ ಒಂದು ಪ್ರಕರಣದಲ್ಲಿ ಸಿ.ಐ.ಡಿ ತನಿಖೆ ಶುರುವಾಗಿದೆ.
ಹೌದು ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿ ಕೊಂಡಿದ್ದ ದುಬಾರಿ ಕಾರನ್ನು ಮಾರಾಟ ಮಾಡಿದ ಡೀಲ್‌ನಲ್ಲಿ ಸಿಸಿಬಿ ಪೊಲೀಸರು ಇರುವುದು ಗೊತ್ತಾಗಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯುವು ದಕ್ಕೆ ಸ್ವತ ಡಿ.ಜಿ.ಪಿಯೇ ತನಿಖೆಗೆ ಆದೇಶಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರ ಮೇಲೆ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಮೂರು ಐಶರಾಮಿ ಕಾರುಗಳಲ್ಲಿ ಒಂದು ಕಾರನ್ನು ಸಿ.ಸಿ.ಬಿ ಪೊಲೀಸರೇ ಮಾರಿದ್ದಾರೆ ಎಂದು ಆರೋಪಿಸ ಲಾಗಿದೆ. ಈ ಹಿಂದಿನ ಪೊಲೀಸ್ ಕಮೀಷನರ್ ಆಗಿದ್ದ ವಿಕಾಸ್ ಕುಮಾರ್ ಅವರ ಅವಧಿಯಲ್ಲಿ ಆ ಸಂದರ್ಭದ ಸಿಸಿಬಿ ಪೊಲೀಸರು ಈ ವಂಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷ ಒಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಎಲಿಯ ಕನ್ ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆ ವಿರುದ್ದ ಪಾಂಡೇಶ್ವರದಲ್ಲಿನ ಇಕೊನಾಮಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಆರೋಪದಲ್ಲಿ ಬಂಧಿತ ರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲೂ,ಪೋರ್ಷ್ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರನ್ನು ಮಂಗಳೂರಿನ ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಪೋರ್ಷ್ ಹಾಗೂ ಬಿಎಂಡಬ್ಲೂ ಕಾರನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಈ ಒಂದು ಪ್ರಕರಣದಲ್ಲಿದ್ದವರು ಈಗಾಗಲೇ ಈ ಅಧಿಕಾರಿಗಳು ಮಂಗಳೂರು ಸಿಸಿಬಿ ವಿಭಾಗದಿಂದ ವರ್ಗಾವಣೆಯಾಗಿದ್ದಾರೆ. ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರಗಳ ದುರ್ಬಳಕೆ ಮತ್ತು ಮಾರಾಟ ಪ್ರಕರಣ ಕುರಿತು ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದರು. ತನಿಖೆ ನಡೆಸಿ ವರದಿ ತಯಾರಿಸಿರುವ ಡಿಸಿಪಿ ವಿನಯ್ ಗಾಂವ್ಕರ್, ಇದನ್ನು ಡಿಜಿಪಿಗೆ ರವಾನಿಸಿದ್ದಾರೆ.
ಡಿಐಜಿ ಅವರು ಸಿಸಿಬಿ ವಿರುದ್ಧ ಸಮಗ್ರ ತನಿಖೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸ್ ತಂಡ ಎಸ್ಪಿ ರೋಹಿಣಿ ಕಟ್ಟೋಚ್ ನೇತೃತ್ವದಲ್ಲಿನ ತಂಡ ಮಂಗಳೂರಿಗೆ ಆಗಮಿಸಿದೆ. ಸಿಐಡಿ ಇನ್‌ಸ್ಪೆಕ್ಟರ್ ಚಂದ್ರಪ್ಪ ಸೇರಿದಂತೆ ತಂಡ ಈ ತನಿಖೆ ನಡೆಸಲು ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು ಈಗಾಗಲೇ ಮೇಲ್ನೋಟಕ್ಕೆ ತಪ್ಪು ಕಂಡು ಬಂದಿರುವ ಎಸ್ ಐ ಒಬ್ಬರನ್ನು ವರ್ಗಾವಣೆ ಗೊಂಡು ಬೇರೆ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಉಳಿದವರು ಮಂಗಳೂರಿನಲ್ಲೇ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಸಿಐಡಿ ತಂಡ ಆಗಮಿಸಿ ತನಿಖೆ ಆರಂಭಿಸಿದೆ.