ಸರ್ಕಾರಿ ಶಾಲೆ,ಶಿಕ್ಷಕರ ಬಗ್ಗೆ CM ಹೆಮ್ಮೆ – ಹೇಳಿದ್ದನ್ನು ನೋಡಿದರೆ ಖಂಡಿತವಾಗಿ ಖುಷಿ ಪಡತೀರಾ ಬಂಧುಗಳೇ…..

Suddi Sante Desk

ಬೆಂಗಳೂರು –

ಬೆಂಗಳೂರು ನಗರದಲ್ಲಿ ಒಂದು ಸರಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ರೀತಿ ಅಭಿವೃದ್ದಿ ಹೊಂದಿ ತಲೆ ಎತ್ತಿ ನಿಂತಿರುವುದು ಹೆಮ್ಮೆಯ ಸಂಗತಿ ಹಾಗೇ ಅದರ ಹಿಂದಿನ ಶಕ್ತಿ ಯಾಗಿರುವ ಶಿಕ್ಷಕರಿಗೆ ಕೃತಜ್ಞತೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿಯ ಹಳೆ ಸರಕಾರಿ ಶಾಲಾ ಕಟ್ಟಡವನ್ನು ಉನ್ನತೀಕರಿಸಿ,ಪ್ರಾಥಮಿಕ,ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸರಕಾರಿ ಶಾಲೆಗಳು ಖಾಸಗಿ ವಲಯದ ಶಾಲೆಗಳಿಗೆ ಪೈಪೋಟಿ ನೀಡಿ ಅಷ್ಟೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಈ ಶಾಲೆಯು ಯಶ್ವಸಿಯಾಗಿದೆ ಇದರಲ್ಲಿ ಶಿಕ್ಷಕರ ಪಾತ್ರ ತುಂಬಾ ಹೆಚ್ಚು ಶ್ರಮ ಇದೆ ಎಂದರು.

ಸಾರ್ವಜನಿಕರ ಒಳಿತಿಗೆ ಈ ಜಾಗ ಉಪಯೋಗ ವಾಗಿ ಇದೊಂದು ಮಾದರಿ ಶಾಲೆ ಎನಿಸಿದೆ ನಾಗರಿಕ ರಿಗೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಪ್ರಯತ್ನಶೀಲವಾಗಿದೆ. ಜನರ ಮನೆ ಬಾಗಿಲಿಗೆ ವಿನೂತನ ಸೌಲಭ್ಯಗಳು ಹಾಗೂ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರಕಾರ ಬದ್ಧವಾಗಿದೆ’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಗೋಳ್ಳಿ ರಾಯಣ್ಣ ಕ್ರೀಡಾ ಸಂಕೀರ್ಣದ ಆವರಣದಲ್ಲಿ ಹೊಸ ಕೋವಿಡ್ ತಪಾಸಣಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಲಾಯಿತು. ವಸತಿ ಹಾಗೂ ಮೂಲಭೂತ ಸೌಕರ್ಯ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ್, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ತೋಟಗಾರಿಕೆ ಸಚಿವ ಮುನಿರತ್ನ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.