ಡಯಟ್ ಮೇಲಿನ ತಲ್ವಾರ್ ಕಾರಣ ಕೇಳಿ ಬೆಚ್ಚಿ ಬಿದ್ದ ಪೊಲೀಸರು….. ಶಿಕ್ಷಕ ನಾಗುವ ಕನಸು ಇಟ್ಟುಕೊಂಡು ಹೀಗ್ಯಾಕೆ ಮಾಡಿದ ನವೀನ್…..

Suddi Sante Desk

ಮಂಗಳೂರು –

ಮಂಗಳೂರಿನ ಡಯಟ್ ಮೇಲಿನ ದಾಳಿಯ ವಿಚಾರದಲ್ಲಿ ಬಂಧನವಾಗಿರುವ ಆರೋಪಿ ನವೀನ್ ನಂದಾಗಿ ದಾಳಿಯ ಕಾರಣವನ್ನು ಕೇಳಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ‌‌‌.ಹೌದು ಆರೋಪಿ ನವೀನ್‌ ಬಂಧನ ವಾಗಿದ್ದು ಪೊಲೀಸರು ವಿಚಾರಣೆ ತೀವ್ರಗೊಳಿಸಿ ದ್ದಾರೆ.ವಿಚಾರಣೆ ವೇಳೆ ಮಂಗಳೂರು ಪೊಲೀಸರಿಗೆ ಭಯಾನಕ ವಿಚಾರ ಗೊತ್ತಾಗಿದೆ.ಆರೋಪಿ ನವೀನ್ ಕುಂದಾಪುರದ ನ್ಯಾಯಾಲಯದಲ್ಲಿ ಜವಾನ ಕೆಲಸ ಮಾಡುತ್ತಿದ್ದ.ಇದಕ್ಕೂ ಮುನ್ನ ಶಿಕ್ಷಕನಾಗುವ ಗುರಿ ಯೊಂದಿಗೆ ಮಂಗಳೂರಿನ ಡಯೆಟ್ ಶಿಕ್ಷಣ ಕೇಂದ್ರ ದಲ್ಲಿ ತರಬೇತಿಗೆಂದು ಹಾಜರಾಗಿದ್ದ.ಆದರೆ ಈ ಸಂದರ್ಭದಲ್ಲೂ ಇತರರೊಂದಿಗೆ ಜಗಳವಾಡುತ್ತಾ ಅಶಾಂತಿ ಸೃಷ್ಟಿಸುತ್ತಿದ್ದ.ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ವೀಣಾ ಎಂಬ ಶಿಕ್ಷಕಿಯ ಜೊತೆ ಆರೋಪಿ ನವೀನ್ ಪದೇ ಪದೇ ಜಗಳ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇದೇ ಕಾರಣಕ್ಕಾಗಿ ಆರೋಪಿ ನವೀನ್‌ನನ್ನು ತರಬೇತಿ ಕೇಂದ್ರದಿಂದ ಹೊರಹಾಕಿದ್ದರು.ಇದೇ ದ್ವೇಷದಿಂದ ನವೀನ್ ಈಗ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.ನಾನು ವಿಧ್ಯಾಭ್ಯಾಸ ಮಾಡುತ್ತಿದ್ದಾಗ ನನ್ನನ್ನು ಶಿಕ್ಷಕಿ ವೀಣಾ ಅವಮಾನ ಮಾಡುತ್ತಿದ್ದರು.ಎಲ್ಲರ ಎದುರು ನಿಂದಿಸುತ್ತಿದ್ದರು. ವಿನಾಕಾರಣ ಕ್ಲಾಸ್‌ನಲ್ಲಿ ನನಗೆ ಕಿರುಕುಳ ನೀಡುತ್ತಿ ದ್ದರು ಎಂದು ಹೇಳಿದ್ದಾನೆ.

ಶಿಕ್ಷಕಿ ವೀಣಾ ಮತ್ತು ಅಲೋಷಿಯಸ್ ಕಾಲೇಜಿನ ಓರ್ವ ವಿದ್ಯಾರ್ಥಿ ಜೊತೆ ಸೇರಿ ನನ್ನ ಮೇಲೆ ಮಾಟ ಮಾಡಿಸಿದ್ದಾರೆ.ಅವರ ಮಾಟದಿಂದ ನನಗೆ ಈಗಲೂ ತೊಂದರೆಯಾಗುತ್ತಿದೆ.

ಹೀಗಾಗಿ ನನ್ನ ಮೇಲೆ ಮಾಡಿ ರುವ ಮಾಟ ತೆಗೆಯಿರಿ ಅಂತಾ ಹೇಳೋಕೆ ಹೋಗಿ ದ್ದೆ ಆದರೆ ಅವರು ತರಬೇತಿ ಕೇಂದ್ರದಲ್ಲಿ ಇಲ್ಲದ ಕಾರಣ ಕೋಪದಿಂದ ಬೇರೆಯವರ ಮೇಲೆ ದಾಳಿ ಮಾಡಿದೆ ಅಂತಾ ಆರೋಪಿ ನವೀನ್ ಬಾಯಿ ಬಿಟ್ಟಿದ್ದಾನೆ.

ಮಂಗಳೂರು ಪೊಲೀಸರು ಆರೋಪಿ ನವೀನ್ ವಿಚಾರಣೆಯನ್ನು ತೀವ್ರಗೊಳಿಸಿದ್ದು ಹಲ್ಲೆ ಮಾಡಲು ಇನ್ನೂ ಬೇರೆ ಕಾರಣ ಇದೆಯಾ?ಎಂಬುವುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.