ರಸ್ತೆಯಲ್ಲಿ ಬಿದ್ದ ರಾಶಿ‌ ರಾಶಿ ಕಾಂಡೋಮ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್…..

Suddi Sante Desk

ತುಮಕೂರು –

ತುಮಕೂರಿನ ರಾಷ್ಟ್ರೀಯ ಹೆದ್ದಾರಿ 4 ರ ಕ್ಯಾತ್ಸಂದ್ರ ಸೇತುವೆ ಸಮೀಪ ಕೆಲವು ದಿನಗಳ ಹಿಂದೆ ರಸ್ತೆ ಯಲ್ಲಿ ಕಾಂಡೋಮ್ ಗಳನ್ನು ರಸ್ತೆಯುದ್ದಕ್ಕೂ ಚೆಲ್ಲಾಡಿರುವುದು ಕಂಡುಬಂದಿತ್ತು.

ಇದನ್ನು ಬೆನ್ನು ಹತ್ತಿ ಹೋರಟ ಪೊಲೀಸರಿಗೆ ತನಿಖೆ ಕೈಗೊಂಡ ಕೂಡಲೇ ಅವರಿಗೆ ಕಾಂಡೋಮ್ ನ ಹಿಂದಿನ ದೊಡ್ಡ ಪ್ರಮಾಣದಲ್ಲಿ ಕಥೆ ನೋಡಿ ಶಾಕ್ ಆಗಿದೆ

ಹೌದು ಕಾಂಡೋಮ್ ಸಿಕ್ಕ ಈ ಒಂದು ಮಾಹಿತಿ ವಿವರ ಕಲೆ ಹಾಕಿದ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಗೊತ್ತಾಗಿದೆ.

ತನಿಖೆ ಮುಂದುವರೆಸಿದ ಪೊಲೀಸರು ಕ್ಯಾತ್ಸಂದ್ರದ ಲಾಡ್ಜ್ ಮೇಲೆ ದಾಳಿ ಮಾಡಿದ್ದು, ವೇಶ್ಯಾವಾಟಿಕೆ ಯಲ್ಲಿ ತೊಡಗಿದ್ದ ಐವರು ಪುರುಷರನ್ನು ಹಾಗೇ ಯುವತಿಯರನ್ನು ಬಂಧಿಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು,ಮಹಿಳೆಯೊಬ್ಬರು ಪರಾರಿಯಾಗಿ ದ್ದಾರೆ.ಸುರಂಗ ಕೊರೆದು ಮಹಿಳೆಯರನ್ನು ಬಚ್ಚಿಡ ಲಾಗಿತ್ತು.ಪೊಲೀಸರ ದಾಳಿ ವೇಳೆ ಸೂಚನೆ ನೀಡಿ ಸುರಂಗದೊಳಗೆ ಮಹಿಳೆಯರು,ಪುರುಷರನ್ನು ಬಚ್ಚಿಡಲಾಗುತ್ತಿತ್ತು.

ಈ ರಹಸ್ಯ ಸುರಂಗ ಯಾರಿಗೂ ಗೊತ್ತಾಗುತ್ತಿರ ಲಿಲ್ಲ.ಈ ಮಾಹಿತಿ ಕಲೆ ಹಾಕಿದ ಪೊಲೀಸರು ದಾಳಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾ ಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.