ನಾಲ್ಕನೇ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ BSY – ಆಡಳಿತ ಪಕ್ಷದ ಮೊದಲ ಸಾಲಿನಲ್ಲಿರುತ್ತಿದ್ದ ಮಾಜಿ CM ಗಳು ಈಗ ಹಿಂದಿನ ಸಾಲಿನಲ್ಲಿ…..

Suddi Sante Desk

ಬೆಂಗಳೂರು –

ಈ ಹಿಂದೆ ಆಡಳಿತ ಪಕ್ಷದ ಮೊದಲನೇಯ ಸಾಲಿ ನಲ್ಲಿ ಕುಳಿತುಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಗಳಿಗೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಈಗ ಅಧಿವೇಶನದಲ್ಲಿ ಹಿಂದಿನ ಸೀಟ್ ನಲ್ಲಿ ಕುಳಿತು ಕೊಳ್ಳುವ ಸ್ಥಿತಿ ಬಂದಿದೆ.ಹೌದು ಮುಖ್ಯಮಂತ್ರಿ ಬದಲಾಗಿದ್ದು ಬದಲಾದ ಈ ಒಂದು ರಾಜಕೀಯ ಪರಿಸ್ಥಿತಿಯಲ್ಲಿ ಇಂದು ವಿಧಾನಸಭೆಯ ಅಧಿವೇಶ ನದ ಸಂದರ್ಭದಲ್ಲಿ ಪ್ರಮುಖ ನಾಯಕರ ಕುರ್ಚಿ ಗಳು ಸ್ಥಾನಪಲ್ಲಟವಾದ ದೃಶ್ಯ ಕಂಡು ಬಂದಿತು.

ಈವರೆಗೂ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿನ ಇರುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಜಗದೀಶ್‍ ಶೆಟ್ಟರ್ ನಾಲ್ಕನೇ ಸಾಲಿನ ಕುರ್ಚಿಯನ್ನು ಅಲಂಕರಿಸಿದ್ದಾರೆ.ಎರಡನೇ ಸಾಲಿನಲ್ಲಿ ಕೂರುತ್ತಿದ್ದ ಬಸವರಾಜ ಬೊಮ್ಮಾಯಿ ಅವರು ಇದೀಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ರುವುದರಿಂದ ಆಡಳಿತ ಪಕ್ಷದ ಮೊದಲ ಸಾಲಿನ ಒಂದನೇ ಕುರ್ಚಿಯಲ್ಲಿ ಕುಳಿತಿದ್ದಾರೆ.

ಮೂರನೇ ಸಾಲಿನಲ್ಲಿ ಇರುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೊದಲ ಸ್ಥಾನಕ್ಕೆ ಮುಂಬಡ್ತಿ ಪಡೆದಿದ್ದಾರೆ. ಕಳೆದ ಅಧಿವೇಶನ ಸಂದರ್ಭದಲ್ಲಿ ಎರಡನೇ ಸಾಲಿಗೆ ಹಿಂಬಡ್ತಿ ಪಡೆದಿದ್ದ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಈ ಅಧಿವೇಶನದಲ್ಲಿ ಮೊದಲ ಸಾಲಿಗೆ ಬಂದಿದ್ದಾರೆ.ಈವರೆಗೂ ನಾಲ್ಕನೆ ಸಾಲಿನಲ್ಲಿ ಕೂರುತ್ತಿದ್ದ ಸಚಿವರಾದ ವಿ. ಸುನೀಲ್ ಲಮಾರ್,ಬಿ.ಸಿ.ನಾಗೇಶ್,ಹಾಲಪ್ಪ ಆಚಾರ್, ಮುನಿರತ್ನ ಮತ್ತಿತರರು ಎರಡನೆ ಸಾಲಿಗೆ ಮುಂಬಡ್ತಿ ಪಡೆದಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ಹಿರಿತನಕ್ಕೆ ತಕ್ಕಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಲ್ಕನೆ ಸಾಲಿನಲ್ಲಿ ಕುರ್ಚಿಯನ್ನು ನಿಗದಿ ಪಡಿಸಿದ್ದಾರೆ.ಸಂಪುಟ ಸೇರಲು ಹಿಂದೇಟು ಹಾಕಿದ ಕಾರಣ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ ಗೂ ಕೂಡ ಅದೇ ಸಾಲಿನಲ್ಲಿ ಕುರ್ಚಿಯನ್ನು ನಿಗದಿ ಪಡಿಸಲಾಗಿದೆ.ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಹಿರಿಯ ಸದಸ್ಯರಾಗಿರುವ ಕಾರಣ ಅವರು ಕೇಳಿದ ಸಾಲಿನಲ್ಲೇ ಆಸನ ನಿಗದಿಪಡಿಸುವ ಸಂಪ್ರದಾಯವಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.