ದೀಪಾವಳಿಗೆ ಮುನ್ನ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ…..

Suddi Sante Desk

ನವದೆಹಲಿ –

ದೀಪಾವಳಿಗೆ ಮುನ್ನ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುಡ್ಡಿ ನೀಡಿದೆ. ದೀಪಾವಳಿ ಉಡುಗೊರೆಯಾಗಿ ಅವರ ತುಟ್ಟಿ ಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.ಅಂದರೆ ಕೇಂದ್ರ ಉದ್ಯೋಗಿಗಳು ಈಗ ಶೇಕಡಾ 31 ರಷ್ಟು ಭತ್ಯೆಯನ್ನು ಪಡೆಯಲಿದ್ದಾರೆ. ಒಂದು ಕೋಟಿಗೂ ಹೆಚ್ಚು ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಇದರ ಪ್ರಯೋಜನವನ್ನು ಪಡೆಯು ತ್ತಾರೆ.

ಕೇಂದ್ರ ಸರ್ಕಾರದ ಪ್ರಕಟಣೆಯ ಪ್ರಕಾರ ಹೊಸ ಭತ್ಯೆಯ ಹೆಚ್ಚಳವನ್ನು ಈ ವರ್ಷದ ಜುಲೈ 1 ರಿಂದಲೇ ಅನ್ವಯಿಸ ಲಾಗುವುದು.ಈ ಹಿಂದೆ ಜುಲೈನಲ್ಲಿ ಸರ್ಕಾರವು ತುಟ್ಟಿ ಭತ್ಯೆಯನ್ನು (DA) ಶೇ 11 ರಿಂದ 28 ಕ್ಕೆ ಹೆಚ್ಚಿಸಿತ್ತು ಅದರ ನಂತರ,ಈಗ ಮತ್ತೆ 3 ಪ್ರತಿಶತದಷ್ಟು ಏರಿಕೆಯಾಗಿದೆ.ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 31 ಶೇಕಡಾ ಡಿಎ ಪಡೆಯುವಂತಾಗುತ್ತದೆ.

ಸರ್ಕಾರದ ಈ ಘೋಷಣೆಯಿಂದ 47.14 ಲಕ್ಷ ಕೇಂದ್ರ ಉದ್ಯೋಗಿಗಳಿಗೆ ಮತ್ತು 68.62 ಲಕ್ಷ ಪಿಂಚಣಿದಾರರಿಗೆ (Pensioners) ಲಾಭವಾಗಲಿದೆ.ದೀಪಾವಳಿಯ ಸಂದರ್ಭದಲ್ಲಿ ಮಾಡಿದ ಈ ಘೋಷಣೆಯಿಂದಾಗಿ ಸರ್ಕಾರಕ್ಕೆ ವಾರ್ಷಿಕವಾಗಿ 9,488 ಕೋಟಿ ರೂ ಅಧಿಕ ಹೊರೆಯಾಗಲಿದೆ.

ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಡೇಟಾವನ್ನು ಜೂನ್,ಜುಲೈ ಮತ್ತು ಆಗಸ್ಟ್‌ಗಾಗಿ ಬಿಡುಗಡೆ ಮಾಡಿದೆ. ಆಗಸ್ಟ್‌ನಲ್ಲಿ ಬಿಡುಗಡೆ ಯಾದ ಎಐಸಿಪಿಐ ಸೂಚ್ಯಂಕವು 123 ಅಂಕಗಳನ್ನು ತಲುಪಿದೆ ಎಂದು ತೋರಿಸಿದೆ.ಈ ಸೂಚ್ಯಂಕವು ಎಷ್ಟು ಹೆಚ್ಚಾಗಿರುತ್ತದೆಯೋ, ಹಣದುಬ್ಬರದ ಮಟ್ಟವು ಅಷ್ಟೇ ಹೆಚ್ಚಾಗಿದೆ ಎನ್ನುವುದನ್ನು ತೋರಿಸುತ್ತದೆ. ಇದರ ಆಧಾರದ ಮೇಲೆ, ಕೇಂದ್ರ ಸರ್ಕಾರವು ನೌಕರರ ಡಿಯರ್ನೆಸ್ ಭತ್ಯೆ ಯನ್ನು (DA) ಘೋಷಿಸುತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.