ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಯ ಸಭೆ – ಮುಂದಿನ ಹೋರಾಟದ ರೂಪರೇಷೆಯ ಕುರಿತಂತೆ ಚರ್ಚೆ…..

Suddi Sante Desk

ಬೀದರ್ –

ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಸಭೆ ನಡೆಯಿತು. ಪ್ರಮುಖವಾಗಿ 1995 ನಂತರ ಕನ್ನಡ ಶಾಲೆಗಳಿಗೆ ಅನುದಾನ ಒಳಪಡಿಸುವ ಕುರಿತು ಪೂರ್ವ ಭಾವಿಯ ಈ ಒಂದು ಸಭೆಯಲ್ಲಿ ಗುಲ್ಬರ್ಗ ದಲ್ಲಿನ ವಿಧಾನ ಪರಿಷತ್ ಸದಸ್ಯರ ಮನೆಯ ಮುಂದೆ ನಿರಂತರ ಧರಣಿ ಸತ್ಯಾಗ್ರಹ ಬಗ್ಗೆ ತಾಲ್ಲೂಕುವಾರು ಹೊಗೋದು ಹಾಗೂ ಇತರ ವಿಷಯಗಳ ಚರ್ಚೆಯನ್ನು ಈ ಒಂದು ಜಿಲ್ಲಾ ಮಟ್ಟದಲ್ಲಿ ಮಾಡಲಾಯಿತು.

ಹಾಗೂ ಜಿಲ್ಲಾ ಮಟ್ಟದ ಗೌರವ ಅಧ್ಯಕ್ಷ ರೇವಣಪ್ಪ ಜಲದೆ ಅವರ ನೇತೃತ್ವದಲ್ಲಿ ಎಲ್ಲಾ ತಾಲ್ಲೂಕುಗಳಿಗೆ ಸಭೆ ಮಾಡಿ ಎಲ್ಲಾ ತಾಲ್ಲೂಕು ಅಧ್ಯಕ್ಷರು ಹಾಗೂ ತಾಲ್ಲೂಕಾ ಕಾರ್ಯಕಾರಿಣಿ ಸದಸ್ಯರು ಶಿಕ್ಷಣ ಸಂಸ್ಥೆ ಮುಖಂಡರಿಗೆ ತಿಳಿಸಿ ಹೇಳಲಾಯಿತು.ಗುಲ್ಬರ್ಗದಲ್ಲಿನ ಧರಣಿ ಸತ್ಯಾಗ್ರಹ ವನ್ನು ಯಶಸ್ಸು ಮಾಡಬೇಕೆಂದು ಕರೆ ನೀಡಲಾಯಿತು.ಈ ಒಂದು ಸಭೆಯಲ್ಲಿ ಗುರುನಾಥ ರೆಡ್ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.ರೇವಣಪ್ಪ ಜಲದೆ ಜಿಲ್ಲಾ ಗೌರವ ಅಧ್ಯಕ್ಷರು ರಾಜೇಂದ್ರ ಜಿಲ್ಲಾ ಕಾರ್ಯ ಅಧ್ಯಕ್ಷರು ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಎಲ್ಲ ತಾಲ್ಲೂಕು ಅಧ್ಯಕ್ಷರು,ಜಿಲ್ಲೆ ಎಲ್ಲಾ ಶಿಕ್ಷಣ ಸಂಸ್ಥೆ ಪ್ರಮುಖರು ಭಾಗವಹಿಸಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.