ಬಿಸಿಯೂಟ ಆರಂಭಕ್ಕೂ ಮುನ್ನ ಏನು ಮಾಡಬೇಕು ಗೊತ್ತಾ ಎಲ್ಲಾ ಸಿದ್ದತೆಗಳೊಂದಿಗೆ ನಾಳೆಯೆ ಹಾಜರಾಗಲು ಸೂಚನೆ…..

Suddi Sante Desk

ಬೆಂಗಳೂರು –

ಅಕ್ಟೋಬರ್ 25 ರಿಂದ ರಾಜ್ಯದಲ್ಲಿ ಮತ್ತೊಂದು ಹಂತದಲ್ಲಿ ಶಾಲೆ ಗಳು ಅಂದರೆ ಪ್ರಾಥಮಿಕ ಶಾಲೆಗಳು ಬಾಗಿಲು ತೆರೆ ಯಲಿದ್ದು ಎರಡು ವರ್ಷಗಳ ನಂತರ 1 ರಿಂದ 5 ನೇ ತರಗತಿ ಕ್ಲಾಸ್ ಗಳು ಪೂರ್ಣ ಪ್ರಮಾಣದೊಂದಿಗೆ ಆರಂಭ ವಾಗುತ್ತಿದ್ದು ಇದರೊಂದಿಗೆ ಬಿಸಿಯೂಟ ಕೂಡಾ ಆರಂಭ ವನ್ನು ಮಾಡಲಾಗುತ್ತಿದೆ

ಹೌದು ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ನಿರ್ದೇಶಕರು ಅಧಿಕೃತ ಜ್ಞಾಪನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 21-10-2021ರಿಂದ ಮಧ್ಯಾಹ್ನ ಉಪಹಾರ ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರದ ಮುಖ್ಯ ಕಚೇರಿ ಯಿಂದ ಸೂಚನೆ ನೀಡಿರುತ್ತಾರೆ. ಈ ಸಂಬಂಧ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರ ಮವನ್ನು ಆರಂಭಿಸಲು ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸರ್ಕಾರಿ,ಅನುದಾನಿತ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಈ ಕೆಳಕಂಡ ಸೂಚನೆ ನೀಡುವಂತೆ ತಿಳಿಸಲಾಗಿದೆ

  1. ಶಾಲೆಗಳಲ್ಲಿ ಅಡುಗೆಯನ್ನು ತಯಾರು ಮಾಡುವ ಆಹಾರ ಧಾನ್ಯಗಳ ದಾಸ್ತಾನು ಗಳನ್ನು ಪರಿಶೀಲಿಸಿಕೊಳ್ಳುವುದು.ಯಾವುದೇ ಅವಧಿ ಮೀರಿರುವ ಆಹಾರ ಧಾನ್ಯಗಳನ್ನು ಬಳಕೆ ಮಾಡದಂತೆ ಹಾಗೂ ಪರಿಶೀಲಿಸಿಕೊಳ್ಳುವುದು.
  2. ಶಾಲೆಗಳಲ್ಲಿ ಗ್ಯಾಸ್ ಸ್ಟೌವ್ ಮತ್ತು ಪಾತ್ರೆ ಪರಿಕರಗಳನ್ನು ದುರಸ್ತಿ ಹೊಂದಿದಲ್ಲಿ, ನಿಯಮಾನು ಸಾರ ಅಕ್ಷರ ದಾಸೋಹ ಕಾರ್ಯಕ್ರಮದ ಅನುದಾವನ್ನು ( ರೂ.5 ಸಾವಿರದಿಂದ 8 ಸಾವಿರದ ಒಳಗೆ ) ಬಳಕೆ ಮಾಡಿಕೊಂಡು ರಿಪೇರಿ ಮಾಡಿಸುವಂತೆ ತಿಳಿಸುವುದು.
  3. ದಿನಾಂಕ 21-10-2021ರೊಳಗೆ ಶಾಲೆಗಳಿಗೆ ಅಕ್ಕಿ ಮತ್ತು ಗೋಧಿಯು ಸರಬರಾಜಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರವನ್ನು ನೀಡಲು ಉಳಿದ ಆಹಾರ ಪದಾರ್ಥಗಳನ್ನು 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ರೂ.4.97ರಂತೆ ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರೂ.7.45ರ ಪರಿವರ್ತನಾ ವೆಚ್ಚವನ್ನು ಒಳಸಿಕೊಂಡು ಅಡುಗೆ ತಯಾರಿಸುವಂತೆ ಸೂಚನೆ ನೀಡಿದೆ.
  4. ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಹಾಗೂ ಸಹಾಯಕ ಅಡುಗೆಯವರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು ದಿನಾಂಕ 21-10-2021ರೊಳಗೆ ಪಡೆದುಕೊಂಡು ಅಡುಗೆ ಕೇಂದ್ರಗಳಿಗೆ ಹಾಜರಾಗಲು ಸೂಚನೆ ನೀಡುವುದು.

ಈ ಎಲ್ಲಾ ಅಂಶಗಳನ್ನೊಳಗೊಂಡಂತೆ ದಿನಾಂಕ 21-10-2021ರಿಂದ ಮಧ್ಯಾಹ್ನದ ಉಪಹಾರವನ್ನು ವಿದ್ಯಾರ್ಥಿಗಳಿಗೆ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು,ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲು ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.