ಹುಬ್ಬಳ್ಳಿ –
ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿ ರೇಲ್ವೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬನ ಜೀವ ಬದುಕಿದ ಘಟನೆ ನಡೆದಿದೆ. ಹೌದು ಬದುಕಿತು ಬಡ ಜೀವವೊಂದು.
ಹೌದು ರೇಲ್ವೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಕ್ಷಣಮಾತ್ರದಲ್ಲಿ ವ್ಯಕ್ತಿಯೊಬ್ಬನ ಜೀವವೊಂದು ಉಳಿದಿದೆ.ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಲ್ಲಿ ನಡೆದ ಘಟನೆ ನಡೆದಿದೆ.
ವಾಸ್ಕೋ ಡಿ ಗಾಮಾ ಪ್ಯಾಸೆಂಜರ್ ಟ್ರೈನ್ ಹತ್ತುವಾಗ ಈ ಒಂದು ಅವಘಡ ನಡೆದಿದೆ.ಅಲ್ಲೇ ಇದ್ದ ರೇಲ್ವೆ ಪೋಲೀಸ್ ಕೆ.ಎಮ್.ಪಾಟೀಲ್ ಅವರಿಂದ ಪ್ರಯಾಣಿಕನ ರಕ್ಷಣೆ ಮಾಡಿದ್ದು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ರಕ್ಷಣೆ ಮಾಡುವ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.ಈ ಒಂದು ದೃಶ್ಯ ಎದೆ ಝಲ್ ಎನ್ನುವಂತಿದ್ದು ಈ ದೃಶ್ಯ ಸಿಸಿಟಿವಿ ದೃಶ್ಯ ಸುದ್ದಿ ಸಂತೆಗೆ ಲಭ್ಯವಾಗಿದ್ದು ಇನ್ನು ರೇಲ್ವೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ತನ್ನ ಪ್ರಾಣ ಪಣಕಿಟ್ಟು ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ರೇಲ್ವೆ ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಪಾಟೀಲ,ಸೇರಿದಂತೆ ಕಚೇರಿಯ ಸಿಬ್ಬಂದಿ ಗಳಾದ ಶಂಕರ ವಾಲಿಕಾರ,ಅಶೋಕ ಬನ್ನಿಕೊಪ್ಪದ, ಚಂದ್ರಶೇಖರ್ ಬೆಳವಡಿ,ಸಂತೋಷ ಹಿರೇಮಠ, ಪ್ರವೀಣ ಶೀಲವಂತರ,ಶರಣು ಹೆಬಸೂರು ಸೇರಿದಂತೆ ಹಲವರು ವಿಡಿಯೋ ನೋಡಿ ರೇಲ್ವೆ ಸಿಬ್ಬಂದಿ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು