ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ – ಹೊರಬಿತ್ತು ಸುತ್ತೋಲೆ….

Suddi Sante Desk

ಬೆಂಗಳೂರು –

ಗ್ರಾಮ ಪಂಚಾಯಿತಿಗಳು ಸಾರ್ವಜನಿಕ ಕಟ್ಟಡ ಮತ್ತು ಆಸ್ತಿ ದುರಸ್ತಿ ನಿರ್ವಹಣೆ ಜೊತೆಗೆ ಶಾಲೆಗಳಲ್ಲಿ ಮೂಲ ಸೌಲಭ್ಯ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ.ಹೌದು ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆಯು 14 ಮತ್ತು 15ನೆ ಹಣಕಾಸು ಆಯೋಗದ ಅನುದಾನವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಸೂಚಿಸಲಾಗಿದೆ

ಶಾಲಾ ಕಟ್ಟಡಗಳನ್ನು ನಿರ್ವಹಿಸುವುದು ಶುದ್ಧ ಕುಡಿಯುವ ನೀರು ಒದಗಿಸುವುದು ಬಾಲಕ-ಬಾಲಕಿಯರಿಗೆ ಶೌಚಾಲಯ ಒದಗಿಸುವುದು,ವಿಶೇಷ ಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಸ್ಯಾನಿಟರಿ ಪ್ಯಾಡ್ ಮಾರಾಟ ಯಂತ್ರಗಳನ್ನು ಒದಗಿಸುವುದು ಬಿಸಿಯೂಟದ ಯೋಜನೆಗೆ ಅಡುಗೆ ಕೋಣೆ ನಿರ್ಮಾಣ ಮಾಡಲು ಅನುದಾನ ಬಳಸಿಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕ್ರಿಯಾತ್ಮಕ ವಿದ್ಯುತ್ ಪೂರೈಕೆ ವ್ಯವಸ್ಥೆ, ಭಾರತ್ ನೆಟ್ ವೈ-ಫೈ ಸೌಲಭ್ಯಗಳು‌ ಕೊಠಡಿಗಳ ಕಿಟಕಿ-ಬಾಗಿಲುಗಳ ದುರಸ್ತಿ ಆಟದ ಮೈದಾನ ನಿರ್ಮಾಣ ಮಳೆ ನೀರು ಹಿಡಿಯಿರಿ ಎಂಬ ಆಂದೋಲನದಂತೆ ಶಾಲಾ ಕಟ್ಟಡಗಳಲ್ಲಿ ಮಳೆ ನೀರು ಸುಗ್ಗಿ ವಿನ್ಯಾಸಗಳನ್ನು ನಿರ್ಮಿಸಲು ಸೂಚಿಸಲಾಗಿದೆ.

ಗ್ರಾಮ ಪಂಚಾಯತಿ ಗಳೊಂದಿಗೆ ಶಾಲಾ ಉಸ್ತುವಾರಿ ಸಮಿತಿಯು ಕೈ ಜೋಡಿಸಿ ಗ್ರಾಮ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವನ್ನು ಶೂನ್ಯಕ್ಕಿಳಿಸುವುದು ತರಗತಿಯಲ್ಲಿ ಶೇ.100 ರಷ್ಟು ವಿದ್ಯಾರ್ಥಿಗಳ ಹಾಜರಾತಿಗೆ ಒತ್ತು ಕೊಡುವುದು‌ ಸಾಕ್ಷರತೆಗೆ ಆದ್ಯತೆ ನೀಡುವುದು ಗ್ರಾಪಂ ಶಿಕ್ಷಣ ಕಾರ್ಯಪಡೆ ಮೂಲಕ ಬಿಸಿಯೂಟ ನೀಡಲು ಬೆಂಬಲ ವ್ಯಕ್ತಪಡಿಸುವುದು‌ ಎಲ್ಲ ವಿದ್ಯಾರ್ಥಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ಸಹಕಾರದೊಂದಿಗೆ ಆಯೋಜಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹಣಕಾಸು ಆಯೋಗದ ಅನುದಾನವನ್ನು ಗ್ರಾಮ ಪಂಚಾಯತಗಳು ಬಳಸಿಕೊಂಡು ಪಂಚಾಯಿತಿ ಕಟ್ಟಡ ಸಾರ್ವಜನಿಕ ಕಟ್ಟಡ ಮತ್ತು ಆಸ್ತಿಗಳ ದುರಸ್ತಿ ಕಾರ್ಯ ಕೈಗೊಳ್ಳಬಹುದಾಗಿದೆ ಎಂದು ಸೂಚಿಸಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.