ಶಿಕ್ಷಕರ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ನೀಡಿದ ಕರ್ನಾಟಕ ‌ರಾಜ್ಯ ಸಾವಿತ್ರಿ ‌ಬಾಯಿ ಪುಲೆ ಶಿಕ್ಷಕಿಯರ ಸಂಘ ಶಿಕ್ಷಕಿಯರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು ಶಾಸಕ ಮಹಾದೇವ್…..

Suddi Sante Desk

ಮೈಸೂರು –

ರಾಜ್ಯದಲ್ಲಿನ ಶಿಕ್ಷಕರ ಅದರಲ್ಲೂ ಮಹಿಳಾ ಶಿಕ್ಷಕಿಯರ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದವರು ಪಿರಿಯಾಪಟ್ಟಣ ಶಾಸಕ ಕೆ ಮಹಾದೇವ್ ಅವರಿಗೆ ಮನವಿ ನೀಡಿದರು.ಹೌದು ಮಹಿಳಾ ಶಿಕ್ಷಕಿಯರ ಸಮಸ್ಯೆಗಳ ಕುರಿತಂತೆ ರಾಜ್ಯ ಘಟಕ ಧಾರವಾಡ(ರಿ) ಜಿಲ್ಲಾ ಘಟಕ ಮೈಸೂರು ತಾಲ್ಲೂಕು ಘಟಕ ಪಿರಿಯಾಪಟ್ಟಣ ಶಾಸಕರಾದ ಕೆ.ಮಹಾದೇವ್ ರವರಿಗೆ ಮನವಿ ನೀಡಿದರು.

ಸಾವಿತ್ರಿ ಬಾಯಿ ಫುಲೆ ಜಯಂತಿ ಕೇವಲ ಒಂದು ತಾಲ್ಲೂಕು ಒಂದು ಜಿಲ್ಲೆಗೆ ಸೀಮಿತವಾಗದೆ ಇಡೀ ರಾಜ್ಯಾದ್ಯಂತ ಸರ್ಕಾರಿ ದಿನಾಚರಣೆ ಯಾಗಿ ಆಚರಿಸುವಂತೆ ಹಾಗೂ ನಮ್ಮ‌ ತಾಲ್ಲೂಕಿನಲ್ಲಿ ಹೆಚ್ಚಾಗಿ ಮಹಿಳಾ ಶಿಕ್ಷಕಿಯರು ತಾಲ್ಲೂಕಿನ ಪ್ರತಿ ಶಾಲೆಗೆ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಹಾಗೂ ಮಹಿಳಾ ‌ಶಿಕ್ಷಕಿಯರ‌ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವಂತೆ ಹಾಗೇ ಸರ್ಕಾರಿ ಸಭೆ ಸಮಾರಂಭ ಗಳಿಗೆ ಇತರ ಸಂಘಗಳಿಗೆ ಮಾನ್ಯತೆ ನೀಡುವಂತೆ ಮಾನ್ಯತೆ ‌ಹಾಗೂ ಸಂಘದ ಅಧ್ಯಕ್ಷರನ್ನು ಸರ್ಕಾರಿ ಎಲ್ಲಾ ಸಮಾರಂಭಗಳಿಗೆ ಆಹ್ವಾನಿಸುವಂತೆ

ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮತ್ತು ಮುಂಬರುವ ಸಾವಿತ್ರಿ ಬಾಫುಲೆಯವರ ಜಯಂತೋತ್ಸ ವಕ್ಕೆ ಅವರ ಸಹಾಯ ಸಹಕಾರ ನೀಡುವಂತೆ ಒತ್ತಾಯಿಸಿ ಈ ಮೂಲಕ ಶಾಸಕರಿಗೆ ಮನವಿ ನೀಡಿದರು.ಈ ಒಂದು ಸಮಯದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಪಿರಿಯಾಪಟ್ಟಣದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ – ಸುದ್ದಿ ಸಂತೆ ಡೆಸ್ಕ್ ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.