KGF ರೀತಿಯಲ್ಲೇ 2 ಭಾಗಗಳಲ್ಲಿ ಬರುತ್ತಿದೆ “ಅವತಾರ ಪುರುಷ” ಶರಣ್ ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಬಜೆಟ್ ಸಿನಿಮಾ…..!

Suddi Sante Desk

ಬೆಂಗಳೂರು –

KGF ರೀತಿಯಲ್ಲೇ 2 ಭಾಗಗಳಲ್ಲಿ ಬರುತ್ತಿದೆ “ಅವತಾರ ಪುರುಷ” : ಶರಣ್ ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಬಜೆಟ್ ಸಿನಿಮಾ..!ಹೌದು ಹಾಸ್ಯನಟನಾಗಿ ಜನರನ್ನ ನಕ್ಕು ನಗಿಸಿ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಹೀರೋ ಆಗಿ ಬೇರೆಯದ್ದೇ ಖದರ್ ನಲ್ಲಿ ಮಿಂಚುತ್ತಿರುವ ಸ್ಯಾಂಡಲ್ ವುಡ್ ನ ನಾಯಕ ನಟ ಶರಣ್…..

ಹೌದು ಶರಣ್ ಅವರು ತಮ್ಮ ಮುಂದಿನ ಬಹುನಿರೀಕ್ಷೆಯ ಸಿನಿಮಾ ಅವತಾರ ಪುರುಷದಲ್ಲಿ ಸಖತ್ ಬ್ಯುಸಿಯಿದ್ದಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ,ಶರಣ್ ಅವರು ನಾಯಕನಾಗಿರುವ ಹೊಸ ಸಿನಿಮಾ ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲಲು ಬರುತ್ತಿದೆ.

ಈ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಮೊದಲೇನಯದ್ದಾಗಿ ಈ ಸಿನಿಮಾ ಕೂಡ KGF, ಪುಷ್ಪ, ಬಾಹುಬಲಿಯಂತಹ ಭಾರತದ ಸೂಪರ್ ಹಿಟ್ ಸಿನಿಮಾಗಳ ಮಾದರಿಯಲ್ಲಿ ಮತ್ತೊಂದು ಕನ್ನಡದ ಸಿನಿಮಾ ಅವತಾರ ಪುರುಷ 2 ಭಾಗಗಳಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದೆ.

ಮತ್ತೊಂದು ಶರಣ್ ಅವರ ವೃತ್ತಿ ಜೀವನದಲ್ಲಿಯೇ ಇದು ಅತಿ ಹೆಚ್ಚು ಬಜೆಟ್ ನ ಸಿನಿಮಾವಾಗಿದೆ. ಅದ್ರಲ್ಲೂ ಸಿನಿಮಾ ಭಾಗ ಒಂದು ಮತ್ತು ಸೀಕ್ವೆಲ್ ಬರುತ್ತೆ ಅನ್ನೋ ಸುದ್ದಿ ಅಭಿಮಾನಿಗಳ ಖುಷಿ ಡಬಲ್ ಮಾಡಿದೆ.
ಸಿನಿಮಾವನ್ನ ಭರ್ಜರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ ಸಿನಿಮಾ ತಂಡ.

ಅಂದ್ಹಾಗೆ ನವೆಂಬರ್ ಅಂತ್ಯದಲ್ಲಿ ಬೆಳ್ಳಿ ಪರದೆ ಮೇಲೆ ಅವತಾರ ಪುರುಷನ ಆಗಮನವಾಗಲಿದೆ. ಈ ನಡುವೆ ದೀಪಾವಳಿಗೂ ಮೊದಲೇ ಬಿಗ್ ಸರ್ಪ್ರೈಸ್ ಕೊಡಲು ಶರಣ್ ಅಂಡ್ ಟೀಮ್ ಸಜ್ಜಾಗಿದೆ.ಈ ಸಿನಿಮಾದ ಪೋಸ್ಟರ್ ಗಳು ಟೀಸರ್ ಗಳು ಸಖತ್ ಕ್ಯೂರಿಯಾಸಿಟಿ ಹುಟ್ಟುಹಾಕಿವೆ.ಅಲ್ಲದೇ ಅಭಿಮಾನಿಗಳ ಕಾತರತೆಯನ್ನೂ ಹೆಚ್ಚಿಸಿವೆ. ಸಿನಿಮಾದ ಪ್ಲಾಟ್ ಹೇಗಿರಲಿದೆ. ಕಥೆ ಏನು…? ಶರಣ್ ಪಾತ್ರ ಏನು..? ಏನೆಲ್ಲಾ ಎಲಿಮೆಂಟ್ಸ್ ಇರಬಹುದು ಅನ್ನೋ ಪ್ರಶ್ನೆಗಳು ಕೂಡ ಮೂಡುತ್ತೆ.ಕಾರಣ ಸಿನಿಮಾದ ಟೈಟಲೇ ಇಷ್ಟು ವಿಭಿನ್ನವಾಗಿದೆ.

ಅದಕ್ಕೆ ಅಷ್ಟದಿಗ್ಬಂಧನ ಮಂಡಲಕ ಎಂಬ ಸಬ್ ಟೈಟಲ್ ಕೂಡ ಸಖತ್ ಗಮನ ಸೆಳೆಯುತ್ತಿದೆ.ಸಿನಿಮಾದಲ್ಲಿ ಹಾರರ್ ಕಾಮಿಡಿ ಮಿಶ್ರಣದ ಜೊತೆಗೆ ಕಥೆ ಹೆಣೆಯಲಾಗಿದೆ ಎಂದು ಪೋಸ್ಟರ್ ಟೀಸರ್ ನೋಡಿದ್ರೆ ಅರರ್ಥವಾಗುತ್ತೆ. ಸಿನಿಮಾದಲ್ಲಿ ಮಾಠ – ಮಂತ್ರದ ಎಲಿಮೆಂಟ್ಸ್ , ಥ್ರಿಲ್ಲಿಂಗ್ ಸಸ್ಪೆನ್ಸ್ , ಟ್ವಿಸ್ಟ್ ಗಳು ಕೂಡ ಇರಬಹುದು ಎಂದು ಅಂದಾಜಿಸಬಹುದು. ಒಟ್ಟಾರೆಯಾಗಿ ಸಿನಿಪ್ರಿಯರಿಗೆ “ಅವತಾರ ಪುರುಷ” ಸಖತ್ ಎಂಟರ್ ಟೈನ್ ಮಾಡೋದ್ರಲ್ಲಿ ನೋ ಡೌಟ್ ಶರಣ್ ಸಿನಿಮಾ ಅಂದ್ರೆ ಕಾಮಿಡಿಗೇನು ಕಮ್ಮಿ ಇರಲ್ಲ. ಡಿಫರೆಂಟ್ ಸ್ಟೋರಿ ಬಯಸೋರಿಗೂ ಕೂಡ ನಿರಾಸೆಯಾಗೋದಿಲ್ಲ.
ಶರಣ್ ಗೆ ಚಿತ್ರದಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ವಿಭಿನ್ನ ಡೈಲಾಗ್ ಗಳು, ಡಿಫರೆಂಟ್ ಕಥೆ, ಸ್ಕ್ರೀನ್ ಪ್ಲೇ ಗಳ ಮೂಲಕವೇ ಜನರ ಮನ ಸೆಳೆಯುವ ನಿರ್ದೇಶಕ ಸಿಂಪಲ್ ಸುನಿ “ಅವತಾರ ಪುರುಷ” ನಿಗೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ.ಸಿನಿಮಾದಲ್ಲಿ ಸಾಯಿ ಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಕಾಮಿಡಿ ಕಿಂಗ್ ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಇನ್ನೂ ದೊಡ್ಡ ತಾರಾಬಳಗವೇ ಇದೆ..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.